ಕಾಗವಾಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಂಬ್ಯುಲೆನ್ಸ್ ಹಸ್ತಾಂತರ
ಲೋಕದರ್ಶನ ವರದಿ
ಕಾಗವಾಡ 24: ಚಿಕ್ಕೋಡಿ ಸಂಸದ ಅಣಾಸಾಹೇಬ್ ಜೊಲ್ಲೆ ಇವರ ಸಂಸದರ ಸನ್ 2019-20 ವರ್ಷದ ಸ್ಥಳೀಯ 25 ಲಕ್ಷ ರೂ. ವೆಚ್ಚದ ಅನುದಾನದಿಂದ ಮಂಜೂರಾದ ಆಂಬ್ಯುಲೆನ್ಸ್ ಕಾಗವಾಡ ಆರೋಗ್ಯ ಕೇಂದ್ರಕ್ಕೆ ಬಿಜೆಪಿ ಪಕ್ಷದ ಮುಖಂಡ ಚಿದಾನಂದ ಲಕ್ಷ್ಮಣ ಸವದಿ ಇವರು ಸಾರ್ವಜನಿಕ ಸೇವೆಗೆ ಸಮರ್ಿಸಿದರು.
ಶನಿವಾರ ಸಂಜೆ ಕಾಗವಾಡದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮ ನೆರವೇರಿತು.
ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪುಷ್ಪಲತಾ ಸುಣ್ಣದಕಲ್ ಇವರಿಗೆ ಆಂಬ್ಯುಲೆನ್ಸ್ ಹಸ್ತಾಂತರಿಸಲಾಯಿತು.
ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ, ಅರುಣ ಜೋಶಿ, ಎಲ್‌ಎಸ್ ಗ್ರೂಪಿನ ಅಧ್ಯಕ್ಷ ಬಸವರಾಜ ಮಗದುಮ್, ಸಂಸದರ ಆಪ್ತಸಹಾಯಕ ವಿನಾಯಕ ಹಿರೇಮಠ ಸೇರಿದಂತೆ ಅನೇಕ ಕಾರ್ಯಕರ್ತರು ಪಾಲ್ಗೊಂಡಿದ್ದರು.