ಸಿಂಧಗಿ

ಅಂಬೇಡ್ಕರವರು ದೇಶದ ಎಲ್ಲಾ ನಾಗರಿಕರಿಗೆ ಅನುಕೂಲ ಕಲ್ಪಿಸಿದ್ದಾರೆ : ಪಾಟೀಲ

ಅಂಬೇಡ್ಕರವರು ದೇಶದ ಎಲ್ಲಾ ನಾಗರಿಕರಿಗೆ ಅನುಕೂಲ ಕಲ್ಪಿಸಿದ್ದಾರೆ : ಪಾಟೀಲ

ಸಿಂದಗಿ18:  ಭಾರತದ ಸಂವಿಧಾನವು 395 ವಿಧಿಗಳು 8 ಅನುಸೂಚಿಗಳು 22 ಭಾಗಗಳನ್ನು ಒಳಗೊಂಡ  ಭಾರತದ ಸಂವಿಧಾನವನ್ನು ರಚನೆ ಮಾಡಿದ ಡಾ. ಬಿ ಆರ್ ಅಂಬೇಡ್ಕರವರು ದೇಶದ ಎಲ್ಲಾ ನಾಗರಿಕರಿಗೆ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಲಯದ ಅಪರ ಸರಕಾರಿ ವಕೀಲ ಎಮ್‌.ಎಸ್‌.ಪಾಟೀಲ ಹೇಳಿದರು. 

       ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಭಾರತದ ಸಂವಿಧಾನ ದಿನಾಚರಣೆ ಹಾಗೂ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ  ಮಾತನಾಡಿದರು. 

  ಸಂವಿಧಾನವು ತುಂಬಾ ಚೆನ್ನಾಗಿ ರಚಿಸಿ  ಪ್ರತಿಯೊಬ್ಬರಿಗೂ ಮತ ಚಲಾಯಿಸುವ ಹಕ್ಕನ್ನು ನೀಡಿದೆ ಮತ್ತು ಇದರಲ್ಲಿ ಭ್ರೂಣ ಹತ್ಯೆ ನಿಷೇದ ಕಾಯಿದೆ ಹಾಗೂ  ಬಾಲ್ಯ ವಿವಾಹ, ಬಾಲ ಕಾರ್ಮಿಕರ ಪದ್ದತಿ ಮತ್ತು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದು ಕಾನೂನು ಬಾಹಿರ ಆದ್ದರಿಂದ ತಾವುಗಳು ಇಂತಹ ತಪ್ಪುಗಳನ್ನು ಮಾಡದಿರಿ ಹಾಗೂ ಇಂತಹ ತಪ್ಪುಗಳು ನಡೆಯದಂತೆ ತಾವುಗಳು ನೋಡಿಕೊಳ್ಳುವುದು ಉತ್ತಮ ಯಾಕೆಂದರೆ ಒಂದು ಬಾಲ್ಯ ವಿವಾಹ ನಡೆದರೆ ಅದರಲ್ಲಿ ಭಾಗಿಯಾದವರೆಲ್ಲ ಈ ಒಂದು ಶಿಕ್ಷೆಗೆ ಗುರಿಯಾಗುತ್ತಿರಿ ಎಂದು ಎಚ್ಚರಿಸಿದರು. 

        ಅಧ್ಯಕ್ಷತೆ ವಹಿಸಿದ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿ’ಸೋಜ  ಮಾತನಾಡುತ್ತಾ ಬಡವರಿಗಾಗಿ ಸಂವಿಧಾನ, ಬಡವರಿಗಾಗಿ ಉಚಿತ ಕಾನೂನು  ಬಡವರಿಗಾಗಿ ಸಂಗಮ ಸಂಸ್ಥೆ , ಬಡವರಿಗಾಗಿ ನಾವು ನಿಮ್ಮ ಜೊತೆ ಇದ್ದೇವೆ ಆದ್ದರಿಂದ ತಮಗೆ ಯಾವುದೆ ರೀತಿಯಿಂದ ಸಮಸ್ಯೆ ಉಂಟಾದರೆ ಉಚಿತ ಕಾನೂನು ನೆರವು ಪಡೆದುಕೊಳ್ಳಬೇಕು  ಎಂದು ತಿಳಿಸಿದರು. 

      ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿ’ಮೆಲ್ಲೊ ಮಾತನಾಡುತ್ತಾ ಕಟ್ಟಡ ಕಾರ್ಮಿಕರಿಗೆ ಹಾಗೂ ವಿಶಿಷ್ಟ ಚೇತನರಿಗೆ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷೆತೆಯ ಮೂಲಕ ಮಾಹಿತಿಯನ್ನು ನೀಡಿದರು. 

     ವಿಕಲಚೇತನದ ಅಧ್ಯಕ್ಷೆ ಸಬಿಯಾ ಮರ್ತೂರ ಅವರು ಕಟ್ಟಡ ಕಾರ್ಮೀಕರಿಗೆ ಹಾಗೂ ವಿಕಲಚೇತನರಿಗೆ ಸಿಗಬೇಕಾದ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು 

             ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು ,ಯುವಕರು, ವಿಶಿಷ್ಟ ಚೇತನರು , ಹಾಜರಿದ್ದರು. 

   ವಿಜಯ್ ಬಂಟನೂರ  ನಿರೂಪಿಸಿದರು. ತೇಜಸ್ವಿನಿ ಹಳ್ಳದಕೇರಿ ಸ್ವಾಗತಿಸಿದರು,  ರಾಜೀವ ಕುರಿಮನಿ  ವಂದಿಸಿದರು. 


ಸುದ್ದಿ ಓದಿ