ಅಂಬಲಿ ಸಿದ್ದಣ್ಣ ಜಿಲ್ಲಾ ರೈತ ಸಂಘದ ಗೌರವಾಧ್ಯಕ್ಷರಾಗಿ ನೇಮಕ
ರಾಣೇಬೆನ್ನೂರು 12: ರೈತ ಪರ ಕಾಳಜಿಹೊಂದಿರುವ, ಯುವ ನಾಯಕ, ಸಾಮಾಜಿಕ ಚಿಂತಕ, ನಗರದ ಅಂಬಲಿ ಸಿದ್ದಣ್ಣ ಅವರು, ಹಾವೇರಿ ಜಿಲ್ಲೆಯಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಜಿಲ್ಲಾ ಪ್ರವಾಸಿ ಮಂದಿರದಲ್ಲಿ, ಸಂಘಟನೆಯ ಸಾಮಾನ್ಯ ಸಭೆಯು ನಡೆಯಿತು. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರು, ಜಿಲ್ಲಾ ಘಟಕದ, ಗೌರವಾಧ್ಯಕ್ಷರಾಗಿ ಅಂಬಲಿ ಸಿದ್ದಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಲಾಗಿದೆ. ನೂತನ ಗೌರವಾಧ್ಯಕ್ಷರಿಗೆ ಕೋಡಿಹಳ್ಳಿಯವರು, ನಡೆದ ಸಭೆಯಲ್ಲಿ, ರೈತ ಸಂಘಕ್ಕೆ ಸ್ವಾಗತಿಸಿ, ಹಸಿರು ಶಾಲು, ಪುಷ್ಪವನ್ನು ನೀಡಿ, ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಪ್ರಧಾನ ಕಾರ್ಯದರ್ಶಿ ರುದ್ರ್ಪ ಬಳಿಗಾರ, ರಮೇಶ್ ದೊಡ್ಡೋರ, ತಾಲೂಕ ಅಧ್ಯಕ್ಷ ಸುರೇಶಪ್ಪ ಗರಡಿಮನಿ,ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ್, ದಿನಗೂಲಿ ನೌಕರರ ಸಂಘದ ಕಾರ್ಯದರ್ಶಿ ಬಸವರಾಜ ಕೊಂಗಿಯವರ ಸೇರಿದಂತೆ ಮತ್ತಿತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.