ಪ್ರವಾಹ ಎದುರಿಸಲು ಸಕಲ ಸಿದ್ಧತೆ: ಶಾಸಕ ಶ್ರೀಮಂತ
ಲೋಕದರ್ಶನ ವರದಿ
ಕಾಗವಾಡ 12: ತಾಲೂಕಿನ 11 ಗ್ರಾಮಗಳು ಕೃಷ್ಣಾ ನದಿ ಪ್ರವಾಹ ನೀರಿನಲ್ಲಿ ಸಮಸ್ಯೆಗಳಿಗೆ ಸಿಲುಕುತ್ತಿವೆ ಬರುವ ಪ್ರವಾಹ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಾಗವಾಡ ಕ್ಷೇತ್ರ ಶಾಸಕ ಶ್ರೀಮಂತ ಪಾಟೀಲರು ಹೇಳಿದರು.
ಸೋಮವಾರ ರಂದು ಕಾಗವಾಡದ ಪ್ರವಾಸಿ ಮಂದಿರದಲ್ಲಿ ತಾಲೂಕ ಆಡಳಿತ ಅಧಿಕಾರಿಗಳ ವಿಶೇಷ ಸಭೆ ಹಮ್ಮಿಕೊಂಡಿದ್ದರು. ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡು ಶಾಸಕರು ಮಾಹಿತಿ ನೀಡಿದರು.
ಕಾಗವಾಡ ತಾಲೂಕಿನ ಮಂಗಾವತಿ, ಜೂಗುಳ, ಶಹಾಪುರ್, ಕುಸನಾಳ, ಮುಳವಾಡ, ಕೃಷ-್ಣ ಕಿತ್ತೂರ್ ಸೇರಿದಂತೆ ಎಂಟು ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಳ್ಳುತ್ತಿವೆ. ಈ ಗ್ರಾಮಗಳಲ್ಲಿ ಸ್ವತಂತ್ರವಾಗಿ ನೋಡಲು ಅಧಿಕಾರಿಗಳು ನೇಮಕಾತಿ ಮಾಡಲಾಗಿದೆ ಅಲ್ಲದೆ ಜನ ಜಾನವಾರುಗಳ ಆರೋಗ್ಯದ ವ್ಯವಸ್ಥೆ ಕೈಗೊಳ್ಳಲಾಗಿದೆ. ಬೊಟದ ವ್ಯವಸ್ಥೆ ಮಾಡಲಾಗಿದ್ದು ಯಾವುದೇ ತೊಂದರೆ ಬಾರದಂತೆ ಕ್ರಮ ಜರುಗಿಸಲಾಗಿದೆ ಎಂದು ಶಾಸಕ ಶ್ರೀಮಂತ ಪಾಟೀಲರು ಹೇಳಿದರು.
ಕಾಗವಾಡ ತಹಸೀಲ್ದಾರ್ ರಾಜೇಶ್ ಬುರ್ಲಿ ಶಾಸಕರಿಗೆ ಮಹಾಪೂರದ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದರು. ನೀರಾವರಿ ಇಲಾಖೆ ಅಧಿಕಾರಿ ಪ್ರವೀಣ್ ಹುಣಸಿಕಟ್ಟಿ ನೀರಿನ ಸಂಪೂರ್ಣ ಮಾಹಿತಿ ನೀಡಿದರು.
ತಾಲೂಕ ಪಂಚಾಯಿತಿ ಅಧಿಕಾರಿ ವೀರಣಗೌಡ ಎಗಣಗೌಡರ, ಲೋಕೋಪಯೋಗಿ ಇಲಾಖೆ ಅಧಿಕಾರಿ ಆರ್.ಪಿ.ಅವತಾಡೆ, ಸಿ.ಡಿ.ಪಿ.ಓ ಸಂಜಯ್‌ಕುಮಾರ್ ಸದಲಗೆ, ಬಿಇಒ ಎಂ.ಆರ್.ಮುಂಜೆ, ಪಷುಧಿಕಾರಿ ಎಂ.ಎಂ.ಹುಂಡೆಕರಿ, ಸೇರದಂತೆ ಗ್ರಾಮ ಲೆಕ್ಕಾಧಿಕಾರಿಗಳು ಪಿಡಿಒ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.