ಇಂಡಿ

ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು: ಪಾಟೀಲ

ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು: ಪಾಟೀಲ
ಇಂಡಿ: ಪಟ್ಟಣದ ದೇಸಾಯಿ ಇಂಟರ್ ನ್ಯಾಶನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರ

ಇಂಡಿ: ಮತಕ್ಷೇತ್ರದ ಎಲ್ಲ ಸರಕಾರಿ, ಖಾಸಗಿ, ಅನುದಾನಿತ, ಅನುದಾನ ರಹಿತ ಸೇರಿದಂತೆ ಎಲ್ಲ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. 

ಅವರು ಭಾನುವಾರ ಪಟ್ಟಣದ ಸಿಂದಗಿ ರಸ್ತೆಯ ದೇಸಾಯಿ ಇಂಟರ್‌ನ್ಯಾಶನಲ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸ್ಮಾರ್ಟ ಕ್ಲಾಸ್, ತಾಂತ್ರಿಕ ಶಿಕ್ಷಣದಿಂದ ಗ್ರಾಮೀಣ ಮಕ್ಕಳು ವಂಚಿತರಾಗಬಾರದು. ತಮಗೆಷ್ಟೆ ಕಷ್ಟವಿದ್ದರೂ ತಮ್ಮ ಮಕ್ಕಳು ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ಮನೋಭಾವ ಹೊಂದಿರುವ ಪಾಲಕರು ಅನೇಕರಿದ್ದಾರೆ. ಬದುಕನ್ನು ಬದಲಿಸುವ ಶಕ್ತಿ ಶಿಕ್ಷಣಕ್ಕೆ ಇದೆ ಎನ್ನುವದನ್ನು ಅಬ್ದುಲ್ ಕಲಾಂ, ರವಿಂದ್ರನಾಥ ಠಾಗೋರ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ತೋರಿಸಿಕೊಟ್ಟಿದ್ದಾರೆ ಎಂದರು. 

ಕ್ಷೇತ್ರಶಿಕ್ಷಣಾಧಿಕಾರಿ ವಸಂತ ರಾಠೋಡ, ಸಂಸ್ಥೆಯ ನಿರ್ದೇಶಕಿ ಸ್ನೇಹಾ ದೇಸಾಯಿ ಶಿಕ್ಷಣ ಮತ್ತು ಸಂಸ್ಥೆಯ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್‌.ಎಸ್‌. ದೇಸಾಯಿ, ಕಾರ್ಯದರ್ಶಿ ಡಾಽಽ ಕೆ.ಎಸ್‌. ದೇಸಾಯಿ, ಪ್ರಾಚಾರ್ಯ ಪ್ರತೀಫ್ ಮಣಿ, ಚಿದುಗೌಡ ಬಿರಾದಾರ ಶಾಲೆಯ ಬೋಧಕ ಸಿಬ್ಬಂದಿ ಹಾಗೂ ಪಾಲಕರು ಪಾಲ್ಗೊಂಡಿದ್ದರು. 

ಸುದ್ದಿ ಓದಿ