ರಾಣೆಬೆನ್ನೂರ

ಅಖಿಲ ಕರ್ನಾಟಕ ಪಟ್ಟ ಸಾಲಿ ನೇಕಾರ ಸಂಘ : ಕಾರ್ಯಧ್ಯಕ್ಷರಾಗಿ ಈಶ್ವರ್ ಚಿನ್ನಿಕಟ್ಟಿ ಆಯ್ಕೆ

ಅಖಿಲ ಕರ್ನಾಟಕ ಪಟ್ಟ ಸಾಲಿ ನೇಕಾರ ಸಂಘ : ಕಾರ್ಯಧ್ಯಕ್ಷರಾಗಿ ಈಶ್ವರ್ ಚಿನ್ನಿಕಟ್ಟಿ ಆಯ್ಕೆ

ರಾಣೇಬೆನ್ನೂರು 18: ನಗರದ ಸಾಮಾಜಿಕ ಚಿಂತಕ, ಯುವ ನಾಯಕ, ಈಶ್ವರ್ ಎಂ ಚನ್ನಿಕಟ್ಟಿ  ಅವರು, ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಪಟ್ಟಸಾಲಿ ನೇಕಾರ ಸಂಘದ ಸಭೆಯಲ್ಲಿ, ರಾಜ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡರು. ನೂತನವಾಗಿ ಆಯ್ಕೆಗೊಂಡಿರುವ, ಈಶ್ವರ್ ಚಿನ್ನಿಕಟ್ಟಿ ಅವರನ್ನು,ತಾಲೂಕು ಪಟ್ಟಸಾಲಿ (ನೇಕಾರ) ಸಮಾಜ ನೌಕರರ ಸಂಘದ, ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಅವರ ಕಾರ್ಯಾಲಯದ ಸಭಾಭವನದಲ್ಲಿ ಅಭಿನಂದಿಸಿ ಸನ್ಮಾನಿಸಿದರು.   

ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ, ನ್ಯಾಯವಾದಿ, ನೌಕರರ ಸಂಘದ ತಾಲೂಕ ಅಧ್ಯಕ್ಷ ಗೋಪಾಲ್ ಎನ್‌. ಗುತ್ತಲ, ಅವರು, ಸಮಾಜದಲ್ಲಿ, ಸಮಾನತೆ ಕಾಣಬೇಕಾದರೆ, ಪ್ರಗತಿಪರ ಚಿಂತಕರಿಗೆ, ಅಭಿವೃದ್ಧಿ ಪರವಾಗಿ ಕೆಲಸ ಮಾಡುವ  ಯುವಕರಿಗೆ ಅವಕಾಶಗಳು ದೊರೆಯಬೇಕು. ಸಮಾಜದಲ್ಲಿ ಇದ್ದುಕೊಂಡು ಯಾವುದೇ ಸದ್ದು  ಗದ್ದಲವಿಲ್ಲದೇ, ಅತ್ಯಂತ ಪ್ರಾಮಾಣಿಕವಾಗಿ, ಪ್ರಾಂಜಲ ಮನಸಿನಿಂದ ಸೇವಾ ಮುಖಿಯಾಗಿರುವ, ಈಶ್ವರ್ ಚಿನ್ನಿಕಟ್ಟೆ  ಅವರನ್ನು, ರಾಜ್ಯ ಸಮಿತಿ  ಗುರುತಿಸಿ, ಸೇವೆಗೆ ಅವಕಾಶ ನೀಡಿರುವುದು, ರಾಣೆಬೆನ್ನೂರು ಮತ್ತು ಹಾವೇರಿ ಜಿಲ್ಲೆಯ  ಹಾಗೂ ರಾಜ್ಯದವಿವಿಧ ಜಿಲ್ಲೆಯ, ಸಮಾಜದ ಮುಖಂಡರಿಗೆ ಸಂತೋಷ ನೀಡಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿ ಅವರಿಗೆ ಅಭಿನಂದಿಸಿ ಸನ್ಮಾನಿಸಿದರು.   

ಸನ್ಮಾನ ಸ್ವೀಕರಿಸಿ ಮಾತನಾಡಿದ, ನೂತನ ರಾಜ್ಯ ಕಾರ್ಯಾಧ್ಯಕ್ಷ  ಈಶ್ವರ್ ಎಂ.ಚಿನ್ನಿಕಟ್ಟಿ  ಅವರು, ಬಂದಿರುವ ಅವಕಾಶವನ್ನು, ಬಹು ಸಂತೋಷದಿಂದ ಸ್ವೀಕರಿಸಿದ್ದೇನೆ. ಇದಕ್ಕೆಲ್ಲ  ತಾಲೂಕಿನ ಮತ್ತು ಜಿಲ್ಲೆಯ ರಾಜ್ಯದ, ಸಮಾಜದ ಜನರ ಪ್ರೀತಿ, ವಿಶ್ವಾಸವೇ ಕಾರಣವಾಗಿದೆ. ಸಮಿತಿ ನೀಡಿರುವ, ಜವಾಬ್ದಾರಿ ಕೆಲಸವನ್ನು, ಅತ್ಯಂತ ಪ್ರಾಮಾಣಿಕವಾಗಿ ಕಾಯಾ,ವಾಚಾ,ಮನಸಾ ಕಾರ್ಯನಿರ್ವಹಿಸುವದಾಗಿ, ಹೇಳಿದ ಅವರು ಪರಿಪೂರ್ಣ ಯಶಸ್ವಿಗೆ ಸಮಾಜದ,ನಾಗರಿಕರ ಮತ್ತು ಎಲ್ಲರ ಸಹಾಯ ಸಹಕಾರ ಅಗತ್ಯವೆಂದು ಕೋರಿ, ತಮ್ಮ ಕೃತಜ್ಞತೆ ಸಲ್ಲಿಸಿದರು.  

ಇದೇ ಸಂದರ್ಭದಲ್ಲಿ ಚಳ್ಳಕೆರೆಯಲ್ಲಿರುವ ರಾಜ್ಯಾಧ್ಯಕ್ಷ ಎಚ್‌. ತಿಪ್ಪೇಸ್ವಾಮಿ ಅವರನ್ನು, ಸಮಿತಿಯ, ಅಧ್ಯಕ್ಷರು ಮತ್ತು ನೌಕರರ ಸಂಘದ  ಪದಾಧಿಕಾರಿಗಳು ಭೇಟಿ ನೀಡಿ,  ಅವರನ್ನು ಅಭಿನಂದಿಸಿ ಸನ್ಮಾನಿಸಿದರು. 

ಅಭಿನಂದನಾ ಗೌರವ ಸಮರಾ​‍್ಣ ಕಾರ್ಯಕ್ರಮದ ಮುಂಚೂಣಿಯಲ್ಲಿ , ಶಿಕ್ಷಕ ತಿಪ್ಪೇಸ್ವಾಮಿ ಹಳ್ಳದದಂಡಿ, ದೇವರಾಜ ಸಾಳೇರ ಪರಶುರಾಮ ಶೇಷಗಿರಿ, ರಾಮಣ್ಣ ಸಾಲಿ, ಶ್ರೀರಾಮ ಭಂಡಾರಿ, ಲಕ್ಷ್ಮಣ ಸಾಲಿ, ಶಿವಪ್ಪ ವಿಭೂತಿ, ಚಂದ್ರಶೇಖರ ಚಿನ್ನಿಕಟ್ಟಿ, ಪಾಂಡುರಂಗಪ್ಪ ಕದರಮಂಡಲಗಿ, ಶ್ರೀಧರ ಶೇಷಗಿರಿ, ಶ್ರೀಮತಿ  ಮಂಜುಳಾ ವಿಭೂತಿ, ಮತ್ತು ಚನ್ನಗಿರಿ ಸಮಾಜದ ಬಂಧುಗಳು ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಸಿದ್ದು ಸೇವಾ ಟ್ರಸ್ಟ್‌ ಪದಾಧಿಕಾರಿಗಳು ಸಮಾಜದ ಮುಖಂಡರು, ಯುವಕರು ಪಾಲ್ಗೊಂಡಿದ್ದರು 


ಸುದ್ದಿ ಓದಿ