ಇಂಡಿ

ಅಖಂಡ ಭಾಗವತ ಪ್ರವಚನ ಕಾರ್ಯಕ್ರಮ

ಅಖಂಡ ಭಾಗವತ ಪ್ರವಚನ ಕಾರ್ಯಕ್ರಮ

ಇಂಡಿ: ಭಗವತ್ ಗೀತೆ ಹಿಂದುಗಳ ಪವಿತ್ರ ಗ್ರಂಥಗಳಲ್ಲಿ ಮುಖ್ಯವಾದುದು. ಮಹಾಭಾರತದಲ್ಲಿನ ಕುರುಕ್ಷೇತ್ರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಕೃಷ್ಣನಿಂದ ಅರ್ಜುನನಿಗೆ ಮಾಡಲ್ಪಟ್ಟ ಉಪದೇಶ ಎಂದು ಸಂಸ್ಕೃತ ಪಾಠಶಾಲೆಯ ಅನಂತಾಚಾರ್ಯ ಅಕಮಂಚಿ ಹೇಳಿದರು.  

ಶನಿವಾರ ಪಟ್ಟಣದ ಶ್ರೀ ಲಕ್ಷ್ಮೀ ಸತ್ಯನಾರಾಯಣ ದೇವಸ್ಥಾನದಲ್ಲಿ ರಾಘವೇಂದ್ರ ಕುಲಕರ್ಣಿಯವರು ತಮ್ಮ ತಾಯಿಯವರ ಒಂದು ವರ್ಷದ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಆಯೋಜಿಸಿದ ಅಖಂಡ ಭಾಗವತ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಸಂಸ್ಕೃತ ಪಾಠಶಾಲೆಯ ಸರ್ವೇಶಾಚಾರ ಅಕಮಂಚಿ ಮಾತನಾಡಿ ಶ್ರೀಮದ್‌ಭಾಗವತವು ನಮ್ಮ ನಿತ್ಯದ ಕರ್ಮಾನುಚರಣೆಗಳು ಹಾಗೂ ಧರ್ಮದಲ್ಲಿರುವ ಗಟ್ಟಿತನ, ಸದಾಚಾರ, ಸದ್‌ಬುದ್ಧಿಯನ್ನು ಶುಕ್ಲಾಚಾರ್ಯರು ಪರೀಕ್ಷಿತ ರಾಜನಿಗೆ ಬೋಧಿಸಿದ ಸಾರವಾಗಿದೆ ಎಂದರು.     

ಬೆಳಿಗ್ಗೆ 08 ರಿಂದ ಸಾಯಂಕಾಲ 08 ಘಂಟೆಯವರೆಗೆ ಅಖಂಡ ಭಾಗವತ ಪ್ರವಚನವನ್ನು ಆಯೋಜಿಸಿದರು. 

ಅಖಂಡ ಭಾಗವತ ಪ್ರವಚನದಲ್ಲಿ ರಾಘವೇಂದ್ರ ಕುಲಕರ್ಣಿಯವರು, ಸಹೋದರರಾದ ಅಪ್ಪಾರಾವ ಕುಲಕರ್ಣಿ, ಪರಿವಾರ ಹಾಗೂ ಇಂಡಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿಪ್ರ ಸಮಾಜದ ಗಣ್ಯರು ಇದ್ದರು.  


ಸುದ್ದಿ ಓದಿ