ಕಾಗವಾಡ

ಅನ್ನದಾತ ಅಗ್ರೋ ಸಂಸ್ಥೆಗೆ ಕೃಷಿ ತಜ್ಞ ಕುಂಬಾರ ಚಾಲನೆ

ಅನ್ನದಾತ ಅಗ್ರೋ ಸಂಸ್ಥೆಗೆ ಕೃಷಿ ತಜ್ಞ ಕುಂಬಾರ ಚಾಲನೆ

ಲೋಕದರ್ಶನ ವರದಿ 


ಕಾಗವಾಡ 10: ಕಬ್ಬಿನ ಬೆಳೆ ಲಾಭದಾಯಕ ಬೆಳೆಯಾಗಿದೆ. ಈ ಬೆಳೆಗೆ ಕೃಷಿ ತಜ್ಞರ ಸಲಹೆ ಪಡೆದು ನೀರು, ಗೊಬ್ಬರ ಹಾಗೂ ಗೊಣ್ಣೆಹುಳ ನಿಯಂತ್ರಣ ಮಾಡುವುದು ಅವಶ್ಯಕತೆ ಇದೆ. ಅಲ್ಲದೆ ಕಬ್ಬು ಕಟಾವು ಆದ ನಂತರ ತಜ್ಞರ ಸಲಹೆ ಪಡೆದು ಸಕಾಲದಲ್ಲಿ ಉಳಿಮೆ ಮಾಡಿದರೆ ಗೊಣ್ಣೆ ಹುಳ ನಿಯಂತ್ರಣ ಸಾಧ್ಯ ಎಂದು ಅಥಣಿಯ ಕೃಷಿ ತಜ್ಞ ಶಿವಾನಂದ ಕುಂಬಾರ ಇವರು ಐನಾಪುರದಲ್ಲಿ ಹೇಳಿದರು. 

ಮಂಗಳವಾರ ರಂದು ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಪ್ರಗತಿಪರ ರೈತರು ಒಂದುಗೂಡಿ ಪ್ರಾರಂಭಿಸಿದ ಅನ್ನದಾತ ಅಗ್ರೋ ಸಂಸ್ಥೆಗೆ ಕೃಷಿ ತಜ್ಞ ಶಿವಾನಂದ ಕುಂಬಾರ ಇವರು ಚಾಲನೆ ನೀಡಿ ಮಾತನಾಡಿದರು. 

 ಉದ್ಘಾಟಕರಾಗಿ ಐನಾಪುರದ ಪ್ರಗತಿಪರ ರೈತ ಮೋಹನ ಮುತಾಲಿಕ ಇವರು ಚಾಲನೆ ನೀಡಿ ಮಾತನಾಡುತ್ತ ಸಿಹಿ ಪೇಡೆಗೆ ಹೆಸರುವಾಸಿಯಾದ ಐನಾಪುರ ಪಟ್ಟಣದಲ್ಲಿ ಸುಮಾರು 25 ಸಾವಿರ ಎಕರೆ ಕೃಷಿ ಕ್ಷೇತ್ರ ಹೊಂದಿದೆ. ಕೃಷ್ಣಾ ನದಿ ತೀರದಲ್ಲಿರುವ ಈ ಪಟ್ಟಣದ ರೈತರಿಗೆ ನೀರಿನ ಕೊರತೆ ಇಲ್ಲ. ರೈತರು ಬೆಳೆದ ಬೆಳೆಗೆ ನಿರ್ದಿಷ್ಟ ಅವಧಿಯಲ್ಲಿ ತಕ್ಕಂತೆ ನೀರು, ರಸಗೊಬ್ಬರ ನೀಡುವ ಅವಶ್ಯಕತೆ ಇದೆ. ಕೃಷಿ ತಜ್ಞರ ಕೊರತೆ ಇತ್ತು. ಇದನ್ನು ಅನ್ನದಾತ ಅಗ್ರೋದವರು 4 ಕೃಷಿ ಸ್ನಾತ್ತಕೋತ್ತರ ಪದವೀಧರರನ್ನು ನೇಮಕಾತಿ ಮಾಡಿ ಇಲ್ಲಿಯ ರೈತರಿಗೆ ವಿಶೇಷ ಮಾರ್ಗದರ್ಶನ ನೀಡುವ ಭರವಸೆ ಅನ್ನದಾತ ಅಗ್ರೋ ಸಂಚಾಲಕರಾದ ಪ್ರಮೋದ ಅಸ್ಕಿ, ಅನೀಲ ಪತ್ತಾರ ನೀಡಿದಾರೆ ಎಂದು ರೈತರಿಗೆ ತಿಳಿಸಿದರು.  

  ಐನಾಪುರ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ರಾಜೇಂದ್ರ ಪೋತದಾರ, ಸಂಜಯ ಭಿರಡಿ, ದತ್ತಾತ್ರೇಯ ಕದಮ್, ಇವರು ರೈತರಿಗೆ ಮಾರ್ಗದರ್ಶನ ನೀಡಿದರು. 

  ಪ್ರಗತಿಪರ ರೈತರು ಹಾಗೂ ಮುಖಂಡರಾದ ಪ್ರವೀಣ ಗಾಣಿಗೇರ, ಮೋಹನ ಕಾರ್ಚಿ, ಅಣ್ಣಾಗೌಡ ಪಾಟೀಲ, ಸುಭಾಷ ಪಾಟೀಲ, ಸಂಜಯ ಕುಚನೂರೆ, ಸುರೇಶ ಗಾಣಿಗೇರ, ತಮ್ಮಣ್ಣಾ ಪಾರಶೆಟ್ಟಿ, ಸುನೀಲ ಪಾಟೀಲ, ಬಾಳಾಸಾಹೇಬ ದಾನೋಳ್ಳಿ, ರತನಕುಮಾರ ಪಾಟೀಲ, ರಾಜು ಪಾಟೀಲ, ಯಶವಂತ ಪಾಟೀಲ, ಅರುಣ ಗಾಣಿಗೇರ, ಮಹಾದೇವ ಪತ್ತಾರ ಅರಿಹಂತ ಅಸ್ಕಿ, ರಾಜೇಂದ್ರ ಪೋತದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ