ಬೈಲಹೊಂಗಲ

ಬೈಲವಾಡ ಗ್ರಾಮದ ಕಡಲೆ, ಕುಸುಬೆ ಬೆಳೆಗಳ ಕ್ಷೇತ್ರಗಳಿಗೆ ಕೃಷಿ ವಿಜ್ಞಾನಿಗಳ ಭೆೇಟಿ: ಪರೀಶೀಲನೆ

ಬೈಲವಾಡ ಗ್ರಾಮದ ಕಡಲೆ, ಕುಸುಬೆ ಬೆಳೆಗಳ ಕ್ಷೇತ್ರಗಳಿಗೆ ಕೃಷಿ ವಿಜ್ಞಾನಿಗಳ ಭೆೇಟಿ: ಪರೀಶೀಲನೆ

ಲೋಕದರ್ಶನ ವರದಿ 


ಬೈಲಹೊಂಗಲ 25: ತಾಲೂಕಿನಾಧ್ಯಂತ ಸುರಿದ ಭಾರಿ ಮಳೆಯಿಂದ ಹಿಂಗಾರು ಬೆಳೆಗಳಿಗೆ ಉಂಟಾದ ನಷ್ಟ ಮತ್ತು ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸಲು ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದ ವಿಜ್ಞಾನಿಗಳಾದ  ಎಸ್ ಎಸ್ ಹಿರೇಮಠ ಮತ್ತು ಬೆಳಗಾವಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಾದ  ಶಿವನಗೌಡ ಪಾಟೀಲ ಹಾಗೂ ಉಪ ಕೃಷಿ ನಿರ್ದೇಶಕರಾದ  ಹೆಚ್ ಡಿ ಕೋಳೆಕರ ರವರು ಚಿವಟಗುಂಡಿ ಮತ್ತು ಬೈಲವಾಡ ಗ್ರಾಮದ ಕಡಲೆ ಮತ್ತು ಕುಸುಬೆ ಬೆಳೆಗಳ ಕ್ಷೇತ್ರಗಳಿಗೆ ಭೆೇಟೀನೀಡಿ ಪರೀಶೀಲಿಸಿದರು.  

      ಕಡಲೆ ಬೆಳೆಗೆ ಮಣ್ಣಿನಲ್ಲಿ ತೇವಾಂಶ ಹೆಚ್ಚಿರುವುದರಿಂದ ಹಳದಿಯಾಗುತ್ತಿರುವುದು ಕಂಡು ಬಂದಿದ್ದು, ರೈತರಿಗೆ ನೀರಿನಲ್ಲಿ ಕರಗುವ ಪೊಟ್ಯಾಷಿಯಂ ನೈಟ್ರೇಟ್ (13-0-45) ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5ಗ್ರಾಂ ಬೆರೆಸಿ ಸಿಂಪಡಿಸಲು ಮತ್ತು ಬೆಳೆಗೆ ಅಲ್ಲಲ್ಲಿ ತುಕ್ಕುರೋಗ ಬರುತ್ತಿರುವುದರಿಂದ ಪ್ರೊಫಿಕೊನೊಜೋಲ್ (ಟಿಲ್ಟ), ಪ್ರತಿ ಲೀಟರ್ ನೀರಿಗೆ 1ಗ್ರಾಂ ಬೆರೆಸಿ ಸಿಂಪರಿಸಬೇಕು. ಕಡಲೆ ಬೆಳೆಯಲ್ಲಿ ಎಲೆತಿನ್ನುವ ಹಾಗೂ ಕಾಯಿ ಕೊರೆಯುವ ಕೀಡೆಗಳು ಕಂಡು ಬಂದಿದ್ದು ಹತೋಟಿಗಾಗಿ ಇಮಾಮೆಕ್ಟಿನ್ ಬೆಂಜೋಯೆಟ್ ಕೀಟನಾಶಕವನ್ನು ಪ್ರತಿ 15ಲೀ ಪಂಪಿಗೆ 5ಗ್ರಾಂ ಕೀಟನಾಶಕ ಬೆರೆಸಿ ಸಿಂಪರಿಸಬೇಕು.  

       ರೈತರು ಪ್ರಕೃತಿ ವಿಕೋಪ ಮತ್ತು ರೋಗ ಕೀಟ ಬಾಧೆಯಿಂದ ಆಗುವ ಬೆಳೆಗಳ ನಷ್ಠಗಳಿಗೆ ಪರಿಹಾರ ಕಂಡುಕೊಳ್ಳಲು ತುರ್ತಾಗಿ  ನವ್ಹೆಂಬರ್ 30ನೇ ತಾರೀಖಿನ ಒಳಗಾಗಿ ಬೆಳೆ ವಿಮೆ ಮಾಡಿಸಬೇಕು. ರೈತರು ಬೆಳೆ ಪರಿಹಾರಕ್ಕಾಗಿ ಕೋರಿದಾಗ ಹೆಚ್ಚಿನ ಮಳೆಯಿಂದ ಬೆಳೆನಷ್ಠ ಸಂಬವಿಸಿದಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖಾ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ನೀಡಲಾಗುವುದೆಂದು ರೈತರಿಗೆ ಭರವಸೆ ನೀಡಿದರು. 

     ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಕೃಷಿ ಅಧಿಕಾರಿಗಳಾದ ದೀಪಕ ಕೌಜಲಗಿ,  ಬಿ ಕೆ ಜಮಾದಾರ ಮತ್ತು ಚಿವಟಗುಂಡಿ ಹಾಗೂ ಬೈಲವಾಡ ಗ್ರಾಮದ ರೈತರು ಕಡಲೆ ಬೆಳೆ ಕ್ಷೇತ್ರ ಪರೀಶಿಲನೆಯಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ