ಕೃಷಿ ಭೂಮಿ ಈಗಾಗಲೇ ನಶಿಸಿದ್ದು ಮಣ್ಣು ಸಂರಕ್ಷಣೆ ಅಗತ್ಯ: ಪಾಟೀಲ
ಇಂಡಿ: ನಾಗರಿಕತೆಯನ್ನು ನಿರ್ಮಿಸಿದ ಪವಿತ್ರ ಮಣ್ಣು ಈಗ ನಾಶವಾಗುತ್ತಿದ್ದು ಶೇ. 62 ಕೃಷಿ ಭೂಮಿ ಈಗಾಗಲೇ ನಶಿಸಿದ್ದು ಮಣ್ಣು ಸಂರಕ್ಷಣೆ ಅಗತ್ಯವಾಗಿದೆ ಎಂದು ಪ್ರಗತಿಪರ ರೈತ ಸಂಗನಗೌಡ ಪಾಟೀಲ ಹೇಳಿದರು.
ಮಂಗಳವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಮಣ್ಣು ಉಳಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಸಾಯನಿಕ ಗೊಬ್ಬರ ಮತ್ತು ಓಷಧೋಪಚಾರ ಬಳಕೆಯಿಂದಲೇ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಭೂಮಿಯ ಸತ್ವ ಉಳಿಸಲು ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜೈವಿಕತೆಯ ಅವಶ್ಯಕತೆ ಇದೆ ಎಂದರು.
ವಿಜಯಪುರದ ವಿಶಾಲ್ ಸೈಕಲ್ ಮಾಲೀಕರಾದ ವಿಶಾಲ ಹೀರಾಸ್ಕರ ಇವರು 75 ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸೈಕಲ್ ಉಡುಗೊರೆ ನೀಡಿದರು.
ಕೃಷಿ ಜಂಟಿ ನಿದೇರ್ಶಕ ಪ್ರಕಾಶ ಚವ್ಹಾಣ, ಪ್ರಗತಿಪರ ರೈತರಾದ
ಸುನೀಲ ರಭಶೆಟ್ಟಿ ಹಾಗೂ ಪಾಟೀಲ, ವಿದ್ಯಾಧರ ಜೇವೂರ, ಕೂಲಪ್ಪ ಶಿವೂರ, ಸಿದ್ದರಾಯ್ ಲೋಣಿ, ಸತೀಶ ಜಿಗಜಿಣಗಿ, ಶಿವಾನಂದ ಮೇತ್ರಿ, ರಾಮನಗೌಡ ಬಿರಾದಾರ, ಬಶೀರ ಬಳಗಾರ, ರೇವಣಸಿದ್ಧ ಘಂಟಿ, ಅಶೋಕ ಬೊಳೆಗಾವ, ಮಲ್ಲಪ್ಪ ಜೇವೂರ ಮತ್ತಿತರಿದ್ದರು.