ಕೃಷಿ ಮೇಳಗಳು ರೈತರಿಗೆ ಅತೀ ಹೆಚ್ಚು ಉಪಯುಕ್ತ: ಚಲುವನಾರಾಯಣ ಸ್ವಾಮಿ
ಬೈಲಹೊಂಗಲ 07: ’ಬಹಳ ವರ್ಷಗಳಿಂದ ಯುನಿವರ್ಸಿಟಿ, ಕೃಷಿ ಇಲಾಖೆಯಲ್ಲಿ ಶೇ.60 ರಷ್ಟು ಅಧಿಕಾರಿಗಳ ಕೊರತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ, ತಾಲ್ಲೂಕು ಮಟ್ಟದ, ಹೋಬಳಿ ಮಟ್ಟದ, ಪಂಚಾಯಿತಿ ಮಟ್ಟದ ಅಧಿಕಾರಿಗಳ ಕೊರತೆ ಇದೆ. ಹಾಗಾಗಿ ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ರೈತರಿಗೆ ಪೂರ್ಣ ಪ್ರಮಾಣದಲ್ಲಿ ತಿಳಿಸಲು ಅಡೆತಡೆ ಅಗಿದೆ. ಇರತಕ್ಕಂತ ಅಧಿಕಾರಿಗಳ ವ್ಯವಸ್ಥೆಯಲ್ಲಿ ಕೆಲಸ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ’ ಎಂದು ಕೃಷಿ ಸಚಿವ ಚಲುವನಾರಾಯಣ ಸ್ವಾಮಿ ಹೇಳಿದರು.
ಪಟ್ಟಣದ ಈಶಪ್ರಭು ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸಮಸ್ತ ರೈತರು, ಈಶಪ್ರಭು ಕೃಷಿ ಉತ್ಪನ್ನ ಮಾರುಟ್ಟೆ ಸಮಿತಿ, ಕೃಷಿ, ತೋಟಗಾರಿಕೆ, ಪಶು ಸಂತೋಪನೆ ಇಲಾಖೆ, ಕೃಷಿಕ ಸಮಾಜ, ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ಗುರುವಾರ ನಡೆದ ಎರಡನೇ ದಿನದ ಕೃಷಿಮೇಳ, ಜಾನುವಾರ ಜಾತ್ರೆ ಸಮಾರಂಭದಲ್ಲಿ ಸಸಿಗೆ ನೀರುಣಿಸಿ ಉದ್ಘಾಟಿಸಿ ಮಾತನಾಡಿದರು.
’ಕೃಷಿಮೇಳದಲ್ಲಿ ಯಾವ ಬೆಳೆ ಬೆಳೆಯಬೇಕು, ತಳಿಗಳ ಯಾವವು, ಅದರಿಂದ ಇಳುವರಿ ಎಷ್ಟು, ಯಾವ ತಳಿಯನ್ನು ಯಾವ ರೀತಿಯಲ್ಲಿ ಬೆಳೆಯಬೇಕು. ಬೆಳೆದ ಬೆಳೆಯನ್ನು ಹೇಗೆ ಬಲವರ್ದನೆ ಮಾಡಬೇಕು. ಇನ್ನೂ ಅನೇಕ ವಿಚಾರಗಳನ್ನು ತಿಳಿಯಲು ಕೃಷಿಮೇಳಗಳು ಹೆಚ್ಚು ಉಪಯುಕ್ತ ಆಗಿವೆ. ಕೃಷಿ ಮೇಳಗಳು ರೈತರಿಗೆ ಅತೀ ಹೆಚ್ಚು ಉಪಯುಕ್ತವಾಗಿವೆ’ ಎಂದರು.
’ಬೆಳಗಾವಿ ಜಿಲ್ಲೆ ಕೃಪಿ ಪರ ಹೋರಾಟದ ಹಿನ್ನಲೆಯಿಂದ ಕೂಡಿದೆ. ಕೃಷಿಯನ್ನೇ ನಂಬಿಕೊಂಡಿರುವ ತಾಲ್ಲೂಕು ಬೈಲಹೊಂಗಲ ಆಗಿದೆ. ಕೃಷಿ ಮೇಳಕ್ಕೆ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ತಾಲ್ಲೂಕು, ಜಿಲ್ಲಾಡಳಿತ ಅನುದಾನ ಇಲ್ಲ. ಸ್ಥಳೀಯ ಎಲ್ಲ ಸಂಘ, ಸಂಸ್ಥೆಗಳು ಆಶ್ರಯದೊಂದಿಗೆ ಕೃಷಿಮೇಳ ಆಯೋಜಿಸಿರುವ ಎಲ್ಲ ಮುಖಂಡರು, ಸಂಘಟಕರ ಕಾರ್ಯಕ್ಕೆ ಸರ್ಕಾರದ ಪರವಾಗಿ ಕೃತಜ್ಞತೆ ತಿಳಿಸಿದರು. ಯಾರೂ ಕೂಡ ನಮ್ಮಿಂದ ಹಣ ಬಯಸದೆ ಕೃಷಿಮೇಳ ಆಯೋಜಿಸಿದ್ದಾರೆಂದು ಶಾಸಕರು ತಿಳಿಸಿದರು. ಇದು ತುಂಬಾ ಸಂತೋಷದ ವಿಚಾರ. ಈ ರೀತಿಯ ಕೃಷಿಮೇಳ ಎಲ್ಲ ಕಡೆ ಆಗಬೇಕು. ರೈತನ ಜೀವನಾಡಿ ಜಾನುವಾರಗಳು. ಈ ವ್ಯವಸ್ಥೆಯಲ್ಲಿ ಜಾನುವಾರ ಸಂರಕ್ಷಣೆಗೆ ಎಲ್ಲರೂ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ರೈತರು ಯಾರೂ ದುಡಿಮೆಗಾಗಿ ಜಾನುವಾರು ಸಾಕಲ್ಲ. ಆಧುನಿಕ ಪ್ರಪಂಚದಲ್ಲಿ ಉದ್ಯಮ ಮಾಡಿಕೊಂಡು ನಮಗೆ ಒಳ್ಳೆಯ ಬಟ್ಟೆ, ಆಹಾರ, ಮನೆ ಕಟ್ಟುತ್ತೇವೆ. ಆದರೆ ರೈತರು ಒಂದು ಹಸು ಸಾಕಿ ಚನ್ನಾಗಿ ಬೆಳೆಸಲು ಮೇವು ಹಾಕಿ ನೋಡಿದರೆ ಬಹುಷ ಅವರಿಗೆ ಸಿಗುವ ಖುಷಿ ಬೇರೆ ಯಾವುದರಲ್ಲೂ ಕಾಣಲ್ಲ. ರೈತರಿಗೆ ಊಟ ಕಡಿಮೆ ಇರುತ್ತೋ, ಜಾಸ್ತಿ ಇರುತ್ತೋ, ಆದರೆ ಅವರು ಸಾಕುವ ಜಾನುವಾರುಗಳುಗೆ ಹೊಟ್ಟೆ ತುಂಬಾ ಮೇವು ಹಾಕಿ ಪ್ರೀತಿಯಿಂದ ಸಾಕಿ, ಸಲಹುತ್ತಾರೆ. ಅದನ್ನು ನೋಡಿದರೆ ಖುಷಿ ಆಗುತ್ತದೆ ಎಂದರು.
ಮಂಡ್ಯ ಶಾಸಕ ರವಿಕುಮಾರ ಗಾಣಗಿ, ಕೃಷಿಮೇಳ ಸಂಘಟಕರಾದ ಮಹೇಶ ಬೆಲ್ಲದ, ಬಸವರಾಜ ಕೌಜಲಗಿ, ರಾಜು ಕುಡಸೋಮನ್ನವರ, ಮಹಾಂತೇಶ ಜಿಗಜಿನ್ನಿ, ಶಿವರಂಜನ ಬೋಳನ್ನವರ, ಮಡಿವಾಳಪ್ಪ ಹೋಟಿ, ಮಹಾಂತೇಶ ತುರಮರಿ, ಶ್ರೀಶೈಲ ಯಡಳ್ಳಿ, ಕೃಷಿ ಅಧಿಕಾರಿಗಳು, ಕೃಷಿ ಮೇಳ ಹಾಗೂ ಜಾನುವರ ಕಮೀಟಿ ಸದಸ್ಯರು ಇದ್ದರು. ಮಹಾರಾಷ್ಟ್ರದ ಪ್ರಶಾಂತ ಕಾಮತ ಹಾಗೂ ಸಂಗಡಿಗರು ರೈತನ ಮಿತ್ರ ಹಾವು ಎಷ್ಟು ಪ್ರಯೋಜನಕಾರಿ ಹಾಗೂ ವಿಷಕಾರಿ ಹಾವುಗಳ ಕುರಿತು ಪ್ರಾತ್ಯಕ್ಷಿತೆ ಮಾಡಿ ತೋರಿಸಿದರು. ಬಸವರಾಜ ಭರಮನ್ನವರ. ನಿರೂಪಿಸಿ, ವಂದಿಸಿದರು.