ಕೃಷಿ ಮೇಳ, ಜಾನುವಾರು, ಶ್ವಾನ ಪ್ರದರ್ಶನ
ಬೈಲಹೊಂಗಲ 07: ಪಟ್ಟಣದ ಕೃಷಿ ಮೇಳ, ಜಾನುವಾರು ಜಾತ್ರೆ ಅಂಗವಾಗಿ ನಡೆದ ಬೆಳಗಾವಿ ಪೊಲೀಸ ಶ್ವಾನ ಪ್ರದರ್ಶನ ನೋಡುಗರ ಮನ ಸೆಳೆಯಿತು.
ಇಂದು, ಅತಿಥಿ ಎಂಬ ಜರ್ಮನ ಶೆಫರ್ಡ ಪೊಲೀಸ ನಾಯಿಗಳು ಮನುಷ್ಯರ ವಾಸನೆಯ ಕೈ ವಸ್ತ್ರ, ಗಾಂಜಾ ಸೇರಿ ಇತರ ಸಾಮಗ್ರಿಗಳ ವಾಸನೆ ಹಿಡಿದು ಅದನ್ನು ಹುಡುಕಿ ತರುವ ದೃಶ್ಯ ಅದ್ಭುತವಾಗಿತ್ತು.
ತರಬೇತಿದಾರರ ಮಾತಿನಂತೆ ಅವು ಮಾಡಿದ ಜಂಪಿಂಗ್, ಸೆಲ್ಯೂಟ್, ಕುಣಿತ, ಪತ್ತೇದಾರಿಕೆ ಜನತೆಯನ್ನು ರೋಮಾಂಚನಗೊಳಿಸಿತು. ಎಲ್ಲರೂ ಮೂಕ ಪ್ರಾಣಿಯ ಜಾಣ್ಮೆಗೆ ಸಿಳ್ಳೆ, ಚಪ್ಪಾಳೆ ಮೂಲಕ ಹುರುದುಂಬಿಸಿದರು.
ಮೇಳ ಆಯೋಜಕರಾದ ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ಮುರುಗೇಶ ಗುಂಡ್ಲೂರ, ಮಹೇಶ ಬೆಲ್ಲದ, ಸಿ.ಆರ್. ಪಾಟೀಲ, ಮಡಿವಾಳಪ್ಪ ಹೋಟಿ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಶ್ರೀಕಾಂತ ಗಾಂವಿ ಹಾಗೂ ನೂರಾರು ಜನರು ಇದ್ದರು.