ಶ್ರೀರಾಮನ ಆದರ್ಶಗಳನ್ನು ರೂಢಿಸಿಕೊಳ್ಳಿ: ಪ್ರದೀಪ ಗುರೂಜಿ
ಗುಳೇದಗುಡ್ಡ 22: ರಾಮನವಮಿ ಶ್ರೀರಾಮನು ಜನಿಸಿದ ಬಹಳ ಮಹತ್ವದ ದಿನ. ಹಾಗಾಗೀ ರಾಮನ ಸತ್ಯ, ನಿಷ್ಠ, ಪ್ರಾಮಾಣಿಕತೆ ಹಾಗೂ ಜಗದೋದ್ದಾರ ಮಾಡಿದ ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ರೂಢಿಸಿಕೊಂಡು ಪಾವಿತ್ರ್ಯತೆ ಹೊಂದಬೇಕೆಂದು ಆಧ್ಯಾತ್ಮ ಪ್ರವಚನಕಾರ ಪ್ರದೀಪ ಗುರೂಜಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ಸಬ್ಬಲಹುಣಸಿ ಗ್ರಾಮದಲ್ಲಿ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡ ಶ್ರೀರಾಮನವಮಿ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು, ಬಸವಾನಂದರು ಸಾನಿಧ್ಯ ವಹಿಸಿ ಮಾತನಾಡಿ, ಈ ಜಗತ್ತು ದೈವ ನಂಬಿಕೆ ಮೇಲೆ ನಿಂತಿದೆ. ದೈವ ಪೂಜಾ ನಿಷ್ಠರಾಗಿ ದೇವರನ್ನು ಸ್ಮರಣೆ ಮಾಡುತ್ತಾ, ಕಾಯಕವೇ ಕೈಲಾಸವೆಂದು ಜಾತಿ ಬೇಧ ಮಾಡದೇ ಎಲ್ಲರೊಟ್ಟಗೆ ಬದುಕನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಮಾರುತಿ ಭಜನಾ ಸಂಘದವರಿಂದ ಭಜನೆ, ಗೀತಗಾಯನ ಕಾರ್ಯಕ್ರಮ ಜರುಗಿತು. ಪ್ರದೀಪ ಗುರೂಜಿಯವರನ್ನು ಗ್ರಾಮದ ಪರವಾಗಿ ಸನ್ಮಾನಿಸಿ ಗೌರವಿಸಿದರು. ದೇವಾನಂದ ಬನ್ನಿ, ಸುರೇಶ ಘಂಟಿ, ಭೀಮಪ್ಪ ನಡಸೇಸಿ, ಕರಿಯಪ್ಪ ನರಹಟ್ಟಿ, ರಾಮಣ್ಣ ಅಂಟರತಾನಿ, ಪರಸಪ್ಪ ನಡಸೇಸಿ, ಯಲಗುರದಪ್ಪ ನಡಸೇಸಿ ಮುಂತಾದವರು ಉಪಸ್ಥಿತರಿದ್ದರು.