ಗುಳೇಗುಡ್ಡ

ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ: ನೀಲಕಂಠ ಶ್ರೀ

ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ: ನೀಲಕಂಠ ಶ್ರೀ
ಗುಳೇದಗುಡ್ಡದ ಮುರುಘಾಮಠದಲ್ಲಿ ಅಮರೇಶ್ವರಮಠದ ನೀಲಕಂಠ ಶ್ರೀಗಳು ಸಿದ್ದಾಂತ ಶಿಖಾಮಣಿ ಗ್ರಂಥದ ಪ್ರವಚನ ನೀಡಿದರು.

ಗುಳೇದಗುಡ್ಡ 04: ಮಾನವ ಜನ್ಮ ಅತ್ಯಂತ ಪವಿತ್ರವಾದದ್ದು, ಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ಮಾಡುವುದೇ ಮಾನವೀಯತೆ. ನಾವೆಲ್ಲರೂ ಮಾನವೀಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಅಮರೇಶ್ವರ ಮಠದ ನೀಲಕಂಠ ಶ್ರೀಗಳು ಹೇಳಿದರು.

ಮುರುಘಾಮಠದ ಕುಮಾರೇಶ್ವರಭವನದಲ್ಲಿ ತಾಲೂಕು ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ರೇಣುಕಾಚಾರ್ಯ, ಬಸವಣ್ಣ ಹಾಗೂ ಹಾನಗಲ್ಲ ಕುಮಾರೇಶ್ವರ ಜಯಂತ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಿದ್ದಾಂತ ಶಿಖಾಮಣಿ ಗ್ರಂಥದ ಕುರಿತು ಪ್ರವಚನ ನೀಡಿದರು.

ಜಂಗಮ ಪರಂಪರೆಗೆ  ತನ್ನದೇ ಆದ ಇತಿಹಾಸವಿದೆ. ನಾವು ಇತಿಹಾಸ ಅರಿತುಕೊಳ್ಳಬೇಕು. ನಮ್ಮ ಪೂರ್ವಜರು ಹಾಕಿಕೊಟ್ಟ  ಸಂಸ್ಕೃತಿ, ಪರಂಪರೆಯನ್ನು ಮರೆಯಬಾರದು. ಅವುಗಳನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿಬೆಳಸಿಕೊಂಡು ಹೋಗಬೇಕು ಎಂದರು. 

ಮುರುಘಾಮಠದ ಕಾಶೀನಾಥ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ sಸಮಾಜ ಅಧ್ಯಕ್ಷ ಶಿವನಯ್ಯ ಮಳಿಮಠ, ಸಿದ್ದಯ್ಯ ರೇವಣಸಿದ್ದೇಶ್ವರಮಠ, ಉಮಾಶಂಕರ ಶಿವನಗೌಡರ, ಈರಯ್ಯ ಪುಜೇರ, ನಿಜಗುಣಿ ಹಿರೇಮಠ, ವಿಶ್ವನಾಥ ಹಿರೇಮಠ, ಪಡದಯ್ಯ ಹಿರೇಮಠ, ಮಹೇಶ ಕಲ್ಮಠ, ಜಗದೀಶ ಸರಗಣಾಚಾರಿ, ಭುವನ ಪೂಜಾರಿ, ಪ್ರಭು ತಟ್ಟಿಮಠ, ಈರಯ್ಯ ಚನ್ನಸಂಗಯ್ಯನಮಠ, ಚಂದ್ರಶೇಖರ ಪೂಜಾರ, ದ್ರಾಕ್ಷಾಯಣಿ ಸಿಂದಗಿಮಠ, ದೀಪಾ ಸರಗಣಾಚಾರಿ, ಚನ್ನಮ್ಮ ತಟ್ಟಿಮಠ  ಸೇರಿದಂತೆ ಇತರರು ಇದ್ದರು.


ಸುದ್ದಿ ಓದಿ