ಬದುಕಿನಲ್ಲಿ ನೈತಿಕತೆ, ಪ್ರಾಮಾಣಿಕತೆ ಅಳವಡಿಸಿಕೊಳ್ಳಿ: ಡಾ. ಶಿವಕುಮಾರ
ರಾಣೇಬೆನ್ನೂರು 23: ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ. ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು. ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಮತ್ತು ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಎಂದು ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ: ಎಂ ಈ ಶಿವಕುಮಾರ್ ಹೇಳಿದರು. ಅವರು ಇಲ್ಲಿನ ಹಲಗೇರಿ ರಸ್ತೆಯ ಬಿ ಎ ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ, ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾನವನ ಸರ್ವಾಂಗಿಣ ಪ್ರಗತಿಗೆ ಶಿಕ್ಷಣ ಬಹು ಮುಖ್ಯ ನೀತಿ ನೈತಿಕತೆ, ಮತ್ತು ಪ್ರಾಮಾಣಿಕತೆ ಬದುಕಿನಲ್ಲಿ ಅಳವಡಿಸಿಕೊಂಡರೆ, ಶಿಕ್ಷಣ ಕಲಿತದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಭಾರತೀಯ ಸಂಸ್ಕೃತಿಗೆ ಬಹುದೊಡ್ಡ ಇತಿಹಾಸ ಪರಂಪರೆ ಇದೆ, ಶಿಕ್ಷಕರಾಗಬೇಕಾದರು ಇತಿಹಾಸದ ಪರಿಕಲ್ಪನೆಯಲ್ಲಿ ಅಧ್ಯಯನ ನಡೆಸಿದಾಗ ಮಾತ್ರ ಇತಿಹಾಸವನ್ನು ಮತ್ತಷ್ಟು ಬರೆಯಲು ಸಾಧ್ಯವಾಗುವುದು ಎಂದ ಅವರು ಸಮಾಜದಲ್ಲಿ ಉತ್ತಮ ಶಿಕ್ಷಕರಾಗಿ ಭವಿಷ್ಯವನ್ನು ಮುಂದಾಗಬೇಕು ಎಂದರು ಸಮಾರಂಭ ಉದ್ಘಾಟಿಸಿದ ಕಾಲೇಜು ಆಡಳಿತಾಧಿಕಾರಿ ಡಾ: ಆರ್. ಎಂ.ಕುಬೇರ್ಪ ಅವರು, ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತವರಿಗೂ ಮತ್ತು ಶಿಕ್ಷಣ ನೀಡಿದ ಸಂಸ್ಥೆಗೊ ಕೀರ್ತಿ ತರಬೇಕಾದ ಹೊಣೆ ತಮ್ಮದಾಗಿದೆ ವಿದ್ಯಾರ್ಥಿಗಳು ಪಡೆದ ಶಿಕ್ಷಣವನ್ನು ಜ್ಞಾನವನ್ನಾಗಿಯೂ, ಜ್ಞಾನವನ್ನು ಕೌಶಲ್ಯವನ್ನಾಗಿಯೂ ಪರಿವರ್ತಿಸಿಕೊಳ್ಳಲು ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿಶಿಕ್ಷಣ ಸಂಸ್ಥೆಯ ಸಲಹೆಗಾರ ಪ್ರೊ.ಹೆಚ್. ಎ. ಭಿಕ್ಷಾವರ್ತಿಮಠ, ಪ್ರೊ.ಕೆ.ಎಂ ರಾಜೀವ್, ಪ್ರೊ.ಕೆ.ಕೆ. ಹಾವಿನಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯಡಾ.ಎಂ.ಎಂ. ಮೃತ್ಯುಂಜಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾ ಪ್ರೊ.ಎಸ್.ಎಂ.ಬಿಸಲಳ್ಳಿ, ಪ್ರೊ.ಪರಶುರಾಮ್ ಪವಾರ, ಪ್ರೊ.ಪ್ರಿಯಾಂಕ ಮಲ್ಲಾಡದ, ಪ್ರೊ. ಎ.ಶಂಕರ ನಾಯಕ್, ಮುತ್ತುರಾಜ ಸಿದ್ದಣ್ಣನವರ, ್ರೊ.ಅರಿ್್ಜ.ಶ್ರೀಕಾಂತ್, ಪ್ರೊ .ಪಿ.ಎನ್.ವಂದನಾ, ವೀಣಾ ಭಂಗಿ, ಡಾ .ಹೆಚ್. ಐ . ಬ್ಯಾಡಗಿ ಉಪಸ್ಥಿತರಿದ್ದರು. ಕವಿತಾ ಸಂಗಡಿಗರು ಪ್ರಾರ್ಥಿಸಿದರು. ಕಾವೇರಿ ಪೂಜಾರ್ ಸ್ವಾಗತಿಸಿ. ಸಿ.ಚೈತ್ರಾ ಪ್ರಾಸ್ತಾವಿಕ ನುಯಾಡಿದರು ಹೆಚ್.ಭವ್ಯಾ ನಿರೂಪಿಸಿ,ಹೆಚ್. ಚನ್ನವೀರ ಸ್ವಾಮಿ ವಂದಿಸಿದರು.