ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ
ಲೋಕದರ್ಶನ ವರದಿ
ಜಮಖಂಡಿ 31:ಮತದಾರರ ಪಟ್ಟಿಯಿಂದ ಯಾವ ವ್ಯಕಿಯು ಹೊರಗುಳಿಯದೆ ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ, ವಿಳಾಸ, ತಿದ್ದುಪಡಿ ಬಗ್ಗೆ ಸರಿಯಾದ ಮಾಹಿತಿಯನ್ನು ಅ.27 ರಿಂದ ಡಿ.9ವರಗೆ ಅರ್ಜಿಯನ್ನು ಸಲ್ಲಿಸಬಹುದು. ಯಾವುದೇ ಲೋಪ, ದೋಷಗಳು ಇದ್ದರೆ ಮಾಹಿತಿಯನ್ನು ನೀಡಬೇಕೆಂದು ಚುನಾವಣೆ ಅಧಿಕಾರಿ ಎಸಿ, ಸಂತೋಷ ಕಾಮಗೊಂಡ ಹೇಳಿದರು.
ನಗರದ ಉಪವಿಭಾಗ ಅಧಿಕಾರಿಗಳ ಕಚೇರಿಯಲ್ಲಿ ನಡೆದ ನಾಲ್ಕು ತಾಲೂಕಿನ ತಹಶೀಲ್ದಾರ ಅವರ ವಿಡಿಯೋ ಕಾನ್ಪರನ್ಸ್ ಸಭೆಯಲ್ಲಿ ಮಾತನಾಡಿದ ಅವರು, ಜಮಖಂಡಿ ಉಪವಿಭಾಗದಲ್ಲಿ ನ.18 ರಿಂದ 19 ಹಾಗೂ ಡಿ.2ರಿಂದ 3 ರವರಗೆ ಮದಾರರ ವಿಷೇಶ ನೋಂದಣೆ ಅಭಿಯಾನವನ್ನು ಪ್ರಾರಂಭಗೊಳ್ಳಲಿದ್ದು. ಜನೇವರಿ 5 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹೋಟರ್ ಹೆಲ್ಪ್ಲೇನ್ ಮೂಲಕ ತಮ್ಮ ಮೋಬೈಲ್ಗಳ ಮುಖಾಂತರ ಅರ್ಜಿಯನ್ನು ಸಲಿಸಬಹುದು ಎಂದರು.
ಉಪವಿಭಾಗಾದಲ್ಲಿ 934 ಮತಗಟ್ಟಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿ ತಾಲೂಕಿನ ಎಲ್ಲ ರಾಜಕೀಯ ಪಕ್ಷದ ಮುಖಂಡರನ್ನು ಏಜೆಂಟರನ್ನು ನೇಮಕ ಮಾಡಲಾಗುತ್ತದೆ. ಬೂತ್ಮಟ್ಟದಿಂದ ಆಯ್ಕೆ ಮಾಡಲಾಗುತ್ತದೆ. ತಮ್ಮಲ್ಲಿ ಯಾವುದೇ ವ್ಯಕ್ತಿಗಳ ಹೆಸರು ಸೇರ್ಪಡೆ. ತಿದ್ದುಪಡೆ ಇದ್ದರೆ ಸರಿಯಾದ ಮಾಹಿತಿಯನ್ನು ನೀಡಬೇಕು. ತಮ್ಮ ಬೂತ್ಮಟ್ಟದಲ್ಲಿ ಬಿಎಲ್ಒ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಅಲ್ಲಿ ತಮ್ಮ ಮಾಹಿತಿ ನೀಡುವ ಜೊತೆಗೆ ತಹಶೀಲ್ದಾರ ಕಚೇರಿಯಲ್ಲಿ ಅರ್ಜಿಯನ್ನು ಸಲಿಸಬೇಕು ಎಂದರು.
ನ.18 ರಿಂದ 19 ಹಾಗೂ ಡಿ.2ರಿಂದ 3 ರವರಗೆ ಮದಾರರ ವಿಶೇಷ ನೋಂದಣೆ ಅಭಿಯಾನದಲ್ಲಿ ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು. ರಾಜಕೀಯ ಮುಖಂಡರು, ಬಿಎಲ್ಒಗಳು ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ. ಪ್ರತಿಯೊಂದು ಬೂತ್ಮಟ್ಟದಲ್ಲಿ, ಗ್ರಾಮೀಣ ಪ್ರದೇಶದಲ್ಲಿ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಗುತ್ತದೆ ಎಂದರು.
ಜಮಖಂಡಿ ಉಪವಿಭಾಗ ಮಟ್ಟದ ವಿಡಿಯೋ ಕಾನ್ಪರನ್ಸ್ ಸಭೆಯಲ್ಲಿ ನಾಲ್ಕು ತಾಲೂಕಿನ ತಹಶೀಲ್ದಾರರು ಭಾಗವಹಿಸಿದರು.