ಮನರಂಜನೆ

ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ

ನಟಿ ಸಂಜನಾ 5 ದಿನ ಸಿಸಿಬಿ ಕಸ್ಟಡಿಗೆ

ಬೆಂಗಳೂರು, ಸೆಪ್ಟೆಂಬರ್ 08: ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ನಟಿ ಸಂಜನಾ ಗಲ್ರಾನಿ ಅವರನ್ನು 8ನೇ     ಎಸಿಎಂಎಂ ನ್ಯಾಯಾಲಯ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ. 

ಪ್ರಕರಣದಲ್ಲಿ ಎ14 ಆರೋಪಿಯಾಗಿರುವ     ಸಂಜನಾ ಅವರನ್ನು ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ನ್ಯಾಯಾಲಯದ ಮುಂದೆ     ಹಾಜರುಪಡಿಸಲಾಗಿತ್ತು. 

ಡ್ರಗ್ಸ್ ಜಾಲಕ್ಕೆ ಸಂಬಂಧಪಟ್ಟಂತೆ ಸಂಜನಾ ವಿರುದ್ಧ ಸಾಕಷ್ಟು ಆರೋಪಗಳಿದ್ದು, ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಿದೆ.  ಅಲ್ಲದೆ ಆಕೆಯ ಮೊಬೈಲ್ ನಲ್ಲಿ ಸಿಗಬಹುದಾದಿ ಸುಳಿವುಗಳ ಬಗ್ಗೆ ವಿಚಾರಣೆ ನಡೆಸಬೇಕಿರುವ ಕಾರಣ 5 ದಿನಗಳ ಕಾಲ ವಶಕ್ಕೆ ನೀಡುವಂತೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.     

ಮುಂದಿನ 5 ದಿನಗಳ ಕಾಲ ಪ್ರಕರಣಕ್ಕೆ     ಸಂಬಂಧಿಸಿ ನಟಿ ಸಂಜನಾ ವಿಚಾರಣೆ ಎದುರಿಸಲಿದ್ದು, ಆಕೆ ಏನೆಲ್ಲ ಮಾಹಿತಿ ನೀಡಲಿದ್ದಾರೆ ಎಂಬ     ಕುತೂಹಲ ಎಲ್ಲರಲ್ಲಿ ದಟ್ಟವಾಗಿದೆ. 

ಪ್ರಾಥಮಿಕ ವಿಚಾರಣೆಯಲ್ಲಿಯೇ ಅನೇಕ ನಟ,     ನಟಿಯರು, ರಾಜಕಾರಣಿಗಳು ಹಾಗೂ ಉದ್ಯಮಿಗಳ ಪುತ್ರರ ಹೆಸರನ್ನು ಹೇಳಿದ್ದಾರೆ ಎಂದು     ತಿಳಿದುಬಂದಿದೆ.       

ಸುದ್ದಿ ಓದಿ