ನಟಿ ರಿಯಾ ಜಾಮೀನು ಮನವಿ ವಜಾ, 14 ದಿನಗಳ ನ್ಯಾಯಾಂಗ ವಶಕ್ಕೆ
ಮುಂಬೈ, ಸೆಪ್ಟೆಂಬರ್ 8: ಬಾಲಿವುಡ್ ನಾಯಕ ನಟ ಸುಶಾಂತ್ ಸಿಂಗ್ ರಾಜ ಪುತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಆತನ ಗೆಳತಿ, ನಟಿ ರಿಯಾ ಚಕ್ರವರ್ತಿ ಜಾಮೀನು ಮನವಿಯನ್ನು ಮುಂಬೈ ನ್ಯಾಯಾಲಯ ತಿರಸ್ಕರಿಸಿದೆ.
ಇದೇ 14 ವರೆಗೆ ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಡ್ರಗ್ಸ್ ಮಾಫಿಯಾ ಜತೆ ರಿಯಾ ಹೊಂದಿದ್ದ ಸಂಬಂಧಗಳ ಆರೋಪದ ಮೇಲೆ ಎನ್ ಸಿ ಬಿ ಆಕೆಯನ್ನು ಬಂಧಿಸಿತ್ತು .
ಇದಕ್ಕು ಮೊದಲು ಡ್ರಗ್ಸ್ ಪ್ರಕರಣದಲ್ಲಿ ಮೂರು ದಿನಗಳ ಕಾಲ ಎನ್ ಸಿ ಬಿ ಆಕೆಯನ್ನು ವಿಚಾರಣೆ ನಡೆಸಿತ್ತು. ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಈಗಾಗಲೇ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ 81 ದಿನಗಳ ನಂತರ ರಿಯಾ ಅವರನ್ನು ಬಂಧಿಸಲಾಗಿದೆ.