ನಟ ಲವ ಕುಶ ನಾಗರಾಜು ವಿಧಿವಶ
ಹೈದರಾಬಾದ್, ಸೆ.07 : ಲವ ಕುಶ ನಾಗರಾಜು ಎಂದೇ ಜನಪ್ರಿಯರಾಗಿದ್ದ ನಟ ಅನಪರ್ತಿ ನಾಗರಾಜು ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಕೆಲ ಸಮಯದಿಂದ ಉಸಿರಾಟದ ತೊಂದರೆಗಳಿಂದ ಬಳಲುತ್ತಿದ್ದ ಅವರು ಸೋಮವಾರ ಬೆಳಿಗ್ಗೆ ಕೊನೆಯುಸಿರೆಳೆದರು.
ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ನಾಗರಾಜು ಅವರ ನಿಧನಕ್ಕೆ ಚಿತ್ರರಂಗದ ಹಲವಾರು ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.