ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ಕಾರ್ಯಕರ್ತರ ಗುರಿ: ಪಾಟೀಲ
ಇಂಡಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಲಿಂಬೆ ನಾಡಿನಲ್ಲಿ ಅಧಿಕಾರಕ್ಕೆ ತರುವ ಮೂಲಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದೇ ಪಕ್ಷದ ಕಾರ್ಯಕರ್ತರ ಗುರಿಯಾಗಬೇಕು ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು.
ಪಟ್ಟಣದ ಜೆಡಿಎಸ್ ಕಾರ್ಯಾಲಯದಲ್ಲಿ ಸಾಲೋಟಗಿ ಮಹಿಳಾ ಜೆಡಿಎಸ್ ಗ್ರಾಮ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ನನ್ನ ಮತ್ತು ಪಕ್ಷದ ಮೇಲೆ ನಂಬಿಕೆಯಿಟ್ಟು ಅನೇಕರು ಪಕ್ಷ ಸೇರೆ್ಡಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ವಿಶೇಷವಾಗಿ ಮಹಿಳೆಯರು ಪಕ್ಷ ಸೇರೆ್ಡಗೊಳ್ಳುತ್ತಿರುವುದು ಆನೆಯ ಬಲ ತಂದಿದ್ದು, ಮಹಿಳೆಯರ, ದೀನ ದುರ್ಬಲರ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಈ ಭಾಗಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಹಸಿರು ಕ್ರಾಂತಿ, ರೈತರ ಸಾಲಮನ್ನಾ ಮಾಡಿ ರೈತಪರ ಕಾಳಜಿ ಹೊಂದಿದ್ದಾರೆಂದು ಹೇಳಿದರು.
2023ಕ್ಕೆ ಪಂಚರತ್ನ ಕಾರ್ಯಕ್ರಮಗಳ ಮೂಲಕ ಗೃಹಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂಪಾಯಿ ನೀಡುವುದು, ಮಹಿಳಾ ಸ್ವಸಹಾಯ ಸಂಘಗಳ ಸಾಲಮನ್ನಾ, ಸರ್ವಜನಾಂಗದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕರು ಕುಮಾರಸ್ವಾಮಿಯವರಾಗಿದ್ದು ಅವರಿಗೆ ನೀವೆಲ್ಲ ಬೆಂಬಲವಾಗಿ ನಿಲ್ಲಬೇಕೆಂದರು.
ಬೌರಮ್ಮ ನೇದಲಗಿ, ಸಿದ್ದಮ್ಮ ಕಲ್ಯಾಣಿ, ಇಂದ್ರಾಬಾಯಿ ಕೋಕಟನೂರ, ಗಂಗಾಬಾಯಿ ನೇದಲಗಿ, ಪಾರ್ವತಿ ಅಗಸರ, ಬೌರಮ್ಮ ಹೂಣಸಗಿ, ಶಿವಯೋಗಪ್ಪ ಖೇಡ, ರಾಚಯ್ಯ ಹೂಣಸಗಿ, ಪದ್ಮಣ ಪೂಜಾರಿ, ಸೈಪನಸಾಬ ಬೋರಟ ಬಿ.ಡಿ. ಪಾಟೀಲರ ನೇತೃತ್ವದಲ್ಲಿ ಪಕ್ಷ ಸೇರೆ್ಡಯಾದರು. ಪಕ್ಷದ ಮುಖಂಡ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ನಿಯಾಝ್ ಅಗರಖೇಡ, ಬಾಳು ರಾಠೋಡ, ಕುಮಾರಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.