ಕಾಗವಾಡ

ಕರ್ನಾಟಕ ಪಾಸಿಂಗ್ ವಾಹನಗಳಿಗೆ ಕಿರುಕುಳ ನೀಡಿದರೆ ಕ್ರಮ: ಖಾಡೆ

ಕರ್ನಾಟಕ ಪಾಸಿಂಗ್ ವಾಹನಗಳಿಗೆ ಕಿರುಕುಳ ನೀಡಿದರೆ ಕ್ರಮ: ಖಾಡೆ

ಲೋಕದರ್ಶನ ವರದಿ 


ಕಾಗವಾಡ 10: ಮಹಾರಾಷ್ಟ್ರ ಮಿರಜ ಹಾಗೂ ಸಾಂಗಲಿ ಪಟ್ಟಣಗಳಿಗೆ ನೆರೆಯ ಕರ್ನಾಟಕ ಪಾಸಿಂಗ್ ಹೊಂದಿದ ವಾಹನಗಳನ್ನು ತಡೆದು ಕಿರುಕುಳ ಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಮಹಾರಾಷ್ಟ್ರದ ಪೊಲೀಸರು ವಾಹನಗಳನ್ನು ತಡೆದು ಕಿರುಕುಳ ನೀಡಿದರೆ ಅಂಥವರ ಮೆಲೆ ಕ್ರಮ ಜರುಗಿಸುವುದಾಗಿ ಮಾಜಿ ಸಚಿವ ಹಾಗೂ ಮಿರಜ ಮತಕ್ಷೇತ್ರದ ಶಾಸಕ ಸುರೇಶ ಖಾಡೆ ಹೇಳಿದರು. 

  ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಮಹಾರಾಷ್ಟ್ರದ ಮಿರಜ, ಸಾಂಗಲಿ ಪಟ್ಟಣಗಳಿಗೆ ನೆರೆಯ ಗಡಿ ಭಾಗದ ಸಾರ್ವಜನಿಕರು ಪ್ರತಿನಿತ್ಯ ತಮ್ಮ ವಾಹನಗಳ ಮೂಲಕ ವ್ಯಾಪಾರ, ಆಸ್ಪತ್ರೆ, ಇನ್ನಿತರ ಕೆಲಸ ಕಾರ್ಯಗಳ ನಿಮಿತ್ಯ ಹೋದಾಗ ಅಲ್ಲಿಯ ಪೊಲೀಸರು ಕರ್ನಾಟಕದ (ಕೆ.ಎ) ಫಾಸಿಂಗ ಹೊಂದಿದ ವಾಹನಗಳನ್ನು ತಡೆದು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿನಾಯಕ ಬಾಗಡಿ ಈ ಭಾಗದ ಮುಖಂಡರ ನಿಯೋಗವೊಂದನ್ನು ತೆಗೆದುಕೊಂಡು ಹೋಗಿ ಮಿರಜ ಶಾಸಕ ಸುರೇಶ ಖಾಡೆಯವರಿಗೆ ಮನವಿ ಮಾಡಿಕೊಂಡಾಗ ಶಾಸಕರು ಭರವಸೆ ನೀಡಿದ್ದಾರೆ ಎಂದು ವಿನಾಯಕ ಬಾಗಡಿ ತಿಳಿಸಿದರು. 

ಮನವಿ ಸ್ವೀಕರಿಸಿದ ಖಾಡೆ ಅವರು ಈ ಕುರಿತು ಸಾಂಗ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರುಗಿಸುವಂತೆ ಹೇಳಿದ್ದರಲ್ಲದೆ, ಇನ್ನು ಮುಂದೆ ಮಿರಜ ಮತ್ತು ಸಾಂಗ್ಲಿ ನಗರಗಳಲ್ಲಿ ಪೊಲೀಸರು ವಾಹನ ತಡೆದರೆ ನೇರವಾಗಿ ನನಗೆ ಕರೆ ಮಾಡುವಂತೆ ಹೇಳಿದ್ದಾರೆ. ಅವರ ದೂರವಾಣಿ ಸಂಖ್ಯೆ 9850508980 ಈ ನಂಬರಗೆ ಸಂಪರ್ಕಿಸಲು ಕೋರಿದ್ದಾರೆ. 

ಮುಖಂಡರಾದ ಕೃಷ್ಣಾ ಶಿಂದೆ, ಬಾಳು ಮಗದುಮ್, ಮಹಾಂತೇಶ ಕಾಂಬಳೆ, ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ