ಶೀಘ್ರದಲ್ಲಿಯೇ ದೈಹಿಕ ಶಿಕ್ಷಕರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಹೊರಟ್ಟಿ
ರಾಣಿಬೆನ್ನೂರು 12: ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಬಹುದಿನದ ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯ ಮಂತ್ರಿಗಳು, ಶಿಕ್ಷಣ ಸಚಿವರ, ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅತಿ ಶೀಘ್ರದಲ್ಲಿಯೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಂಗಳುರು, ಜಿಲ್ಲಾ ಸಂಘ ಹಾವೇರಿ, ತಾಲುಕು ಘಟಕ ರಾಣಿಬೆನ್ನೂರು ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೆ ಸ್ಟೇಶನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ಭಾನುವಾರ ಏಪ್ಡಿಸಿದ್ದ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ, ರಾಜ್ಯ ಕಾರ್ಯಕಾರಿ ಸಮಿತಿಯ 2024-25ನೇ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ನಾನು ಸಹ ಶಿಕ್ಷಕನಾಗಿ ಕರ್ತವ್ಯನಿರ್ವಹಿಸಿದ ಅನುಬವ ನನಗಿದೆ, ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಶಿಕ್ಷಕಿಯರ ಸಮಸ್ಯಗಳೇನೆಮಬುದರ ಅರಿವು ನನಗಿದೆ. ಕಳೆದ ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಕರ ಅನೇಕ ಸಮಸ್ಯಗಳು ಸಮಸ್ಯಗಳಾಗಿಯೇ ಉಳಿದಿವೆ. ಅವುಗಳ ಇತ್ಯರ್ಥಕ್ಕಾಗಿ ಈಗಾಗಲೆ ಮುಖ್ಯ ಮಂತ್ರಿಗಳೊಂದಿಗೆ, ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಹಲವಾರು ಭಾರಿ ಚರ್ಚಿಸಿದ್ದೆನೆ. ಶಿಘ್ರದಲ್ಲಿಯೇ ನಿಮ್ಮ ಬೇಡಿಕೆಗಳು ಈಡೇರಲಿವೆ ಎಂದು ಹೊರಟ್ಟಿ ಅವರು ದೈಹಿಕ ಶಿಕ್ಷಣ ಶಕ್ಷಕರಿಗೆ ಭರವಸೆ ನೀಡಿದರು.
ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಚೌಡಪ್ಪ ಎಸ್ ಮಾತನಾಡಿ, ಕಳೆದ 25 ರಿಂದ 30 ವರ್ಷಗಳ ಕಾಲ ನಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ನಾವು ಹೊರಾಟ ನಡೆಸುತ್ತಾ ಬಂದಿದ್ದೆವೆ. ನಮ್ಮ ಪ್ರಮುಖ ಬೇಡಿಕೆಗಳಾದ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಬೇಕು.
ರಾಜ್ಯ ಪ್ರಾಥಮಿಕ,ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಆದಷ್ಠುಬೇಗ ಭರ್ತಿ ಮಾಡಬೇಕು, ಸರ್ಕಾರಿ,ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಹಾಗೂ ಪ.ಪೂ ಕಾಲೇಜುಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೇಗೆ, ಜೇಷ್ಠತೆ ಆಧಾರದ ಮೇಲೆ ಮುಖ್ಯ ಶಿಕ್ಷಕರು, ಪ್ರಾಂಶುಪಾಲರೆಂದು ನೇಮಕಮಾಡಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಡಿಡಿಪಿಐ ಕಛೇರಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಯೋಜಕರ ಮತ್ತು ಸಹಾಯಕ ಶಿಕ್ಷಣ ಪರೀವಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಬೇಕು.
ವಿದ್ಯಾಥಿಗಳ ಸಂಖ್ಯೆಗೆ ಅನುಗುಣವಾಗಿ ದೈಹಿಕ ಶಿಕ್ಷಕರನ್ನು ನೇಮಿಸುವ ಬದಲು, ರಾಜ್ಯದ ಎಲ್ಲಾ ಪ್ರಾರ್ಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮೀಸಬೇಕು. ರಾಜ್ಯದ 728 ಪ.ಪೂ ಕಾಲೇಜುಗಳಲ್ಲಿ ಕಾಲಿಯಿರುವ ದೈಹಿಕ ಶಿಕ್ಷಕರನ್ನು ಆದಷ್ಟು ಬೇಗ ಭರ್ತಿಮಾಡಬೇಕು. ದೈಹಿಕ ಶಿಕ್ಷಣ ಶಿಕ್ಷಕರ ಹೆಚ್ಚಿನ ವಿದ್ಯಾಬ್ಯಾಸಕ್ಕಾಗಿ ವೇತನ ಸಹಿತ ರಜೆ ನೀಡಬೇಕು. ರಾಜ್ಯದಲ್ಲಿ ಪ್ರತ್ಯೇಕ ದೈಹಿಕ ಶಿಕ್ಷಣ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಬೇಕು. ಎಸ್ಎಟಿಎಸ್ ನಲ್ಲಿ ದೈಹಿಕ ಶಿಕ್ಷಣವನ್ನು ಭಾಗ ಎ ನಲ್ಲಿ ಸೇರೆ್ಡ ಮಾಡದೆ ಕಾಲವಿಳಂಬವಾಗಿರುವುದು ಗೊಂದಲಕ್ಕೆ ಕಾರಣವಾಗಿದೆ. ಸಮಸ್ಯಗೆ ಆದಷ್ಠು ಬೇಕ ಪರಿಹಾರ ನೀಡಬೇಕು. ಸೇವಾ ಜೇಷ್ಠತೆ ಆಧಾರದಡಿಯಲ್ಲಿ ಹಾಜರಿ ಪುಸ್ತಕದಲ್ಲಿ ಕಳೆದ ವರ್ಷದಂತೆ ನಮೋದಿಸಬೇಕು. ಸರ್ಕಾರ ಈ ಎಲ್ಲಾ ಬೇಡಿಕೆಗಳನ್ನು ಇದೆ ಅಗಷ್ಟ 29 ರಂದು ನಡೆಯುವ ಅಂತರರಾಷ್ಟ್ರೀಯ ಕ್ರೀಡಾ ದಿನಾಚರಣೆಯ ವಳಗಾಗಿ ಈಡೇರಿಸದಿದ್ದರೆ, ಅ 29 ರಿಂದ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಅನಿರ್ಧಿಷ್ಠಾವಧಿ ಸತ್ಯಗ್ರಹವನ್ನು ಕೈಗೊಳ್ಳಲಾಗುವುದೆಂದು ರಾಜ್ಯಾಧ್ಯಕ್ಷರಾದ ಚೌಡಪ್ಪ ಎಸ್ ತಿಳಿಸಿದರು.
ರಾಜ್ಯ ಸಂಘದ ಕಾರ್ಯಾಧ್ಯಕ್ಷ ಪಿ.ಡಿ ಕಾಲವಾಡ, ಪ್ರಧಾನ ಕಾರ್ಯದರ್ಶಿ ಚಂದ್ರಶೇಕರ ಕೆ,ಜೆ. ಖಜಾಂಚಿ ಡಿ.ವಿ ಬಾಲರಾಜು, ರಾಜ್ಯ ಉಪಾಧ್ಯಕ್ಷ ಬಸವರಾಜ ಪಿ, ಪ್ರಮೂದ ರೋಣದ, ವಿಭಾಗಿಯ ಕಾರ್ಯದರ್ಶಿ ಶಾಹೀನಾ ಎಫ್, ಆರ್.ಟಿ.ಇ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ಸಾಹುಕಾರ, ರಾಜ್ಯ ಮಾದ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಪಿ ಬಣಕಾರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರು ಗ್ಯಾನಗೌಡ್ರ ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯದರ್ಶಿ ಬಸವರಾಜ ಬಸಪ್ಪನವರು, ತಾಲೂಕು ಅಧ್ಯಕ್ಷ ಕಾತೇಂಶ ವಿ ಮಾದಾಪುರ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ ಚಲವಾದಿ, ಕಾರ್ಯದರ್ಶಿ ಹೆಚ್.ಎಸ್ ಹುಡೇದ, ರಾಮು ಲಮಾಣಿ, ಜೆ.ಬಿ ಹುಗ್ಗಿ, ಸಿ.ಎಲ್ ಶಡಗನಾಳ, ಆನಂದ ಲಮಾಣಿ, ಕೆಂಚಪ್ಪ ದಡ್ಡಿಹಳ್ಳೆರ ಹಾಗೂ ರಾಜ್ಯದ ಎಲ್ಲಾ ಪ್ರಾರ್ಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗಣ್ಯರಿಗೆ ಗೌರವಿಸಲಾಯಿತು.