ಕಾಗವಾಡ

ಪ್ರತಿಭಾ ಕಾರಂಜಿ: ಉರ್ದು ಶಾಲೆ ವಿದ್ಯಾಥಿಗಳ ಸಾಧನೆ

ಪ್ರತಿಭಾ ಕಾರಂಜಿ: ಉರ್ದು ಶಾಲೆ ವಿದ್ಯಾಥಿಗಳ ಸಾಧನೆ

ಶೇಡಬಾಳ 25: ಕಾಗವಾಡ ಪಟ್ಟಣದಲ್ಲಿ ಇತ್ತೀಚಿಗೆ ಜರುಗಿದ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವೀತಿಯ, ತೃತೀಯ ಸ್ಥಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 

5, 6, 7 ನೇ ತರಗತಿಗಳ ವಿದ್ಯಾರ್ಥಿಗಳಿಗಾಗಿ ಏರಿ​‍್ಡಸಲಾಗಿದ್ದ, ವಯಕ್ತಿಕ ಸ್ಪರ್ಧೆಗಳಲ್ಲಿ ಉರ್ದು ಕಂಠಪಾಠದಲ್ಲಿ ಫಾತಿಮಾ ಬುಕಾರೆ ಪ್ರಥಮ, ಅರೆಬಿಕ್ ಅಸ್ಲಂ ಜಮಾದಾರ ಪ್ರಥಮ, ಅಭಿನಯ ಗೀತೆಯಲ್ಲಿ ಫಾತಿಮಾ ಬುಕಾರೆ ಪ್ರಥಮ, 1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಏರಿ​‍್ಡಸಲಾಗಿದ್ದ ಸ್ಪರ್ಧೆಯಲ್ಲಿ ಉರ್ದು ಕಂಠಪಾಠ ಶಿಫಾ ದಾದಾಸಾಬ ಜಮಾದಾರ ಪ್ರಥಮ, ಅರೆಬಿಕ್‌ದಲ್ಲಿ ಮಹಮ್ಮದ ಕೆ. ಮುಜಾವರ ಪ್ರಥಮ, ಇಂಗ್ಲೀಷ್ ಗೀತೆಯಲ್ಲಿ ಆಸ್ಮಾ ಜಮಾದಾರ ದ್ವೀತಿಯ, ಕಥೆ ಹೇಳುವುದರಲ್ಲಿ ನಸರೀನ ದ್ರಾಕ್ಷಿ ದ್ವೀತಿಯ, ಭಕ್ತಿ ಗೀತೆಯಲ್ಲಿ ಫಾತಿಮಾ ಬುಕಾರೆ ದ್ವೀತಿಯ. 

5,6,7 ನೇ ತರಗತಿಯ ಚಿತ್ರಕಲೆಯ ಸ್ಪರ್ಧೆಯಲ್ಲಿ ನಜರಾನಾ ಫಾನಾರಿ ತೃತೀಯ, ಕನ್ನಡ ಕಂಠಪಾಠ ನಸರಿನ ದ್ರಾಕ್ಷಿ ತೃತೀಯ, ಆಶುಭಾಷಣ ನಶೇರಾ ಮಿರ್ಜೆ ತೃತೀಯ. 

1 ರಿಂದ 4 ನೇ ತರಗತಿಯ ಆಶುಭಾಷಣದಲ್ಲಿ ಕಂಚಾ ಹಕೀಮ ತೃತೀಯ, ಸುಮೇರು ಸಾರವಾನ, ಮರಿಯಂ ಸತ್ತಿ, ಖತೀಜಾ ಹಕೀಮ, ಉಜಮಾ ಬೋಮಟೆ ಮೊದಲಾದವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 

ಈ ಸಮಯದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುಬಾರಕ ಕಮಾಲ, ಉಪಾಧ್ಯಕ್ಷ ಇರ್ಷಾದ ಜಮಾದಾರ, ಸದಸ್ಯರಾದ ಮೌಲಾನ ಮೀರಾಸಾಬ, ಬಂದೇ ನಮಾಜ, ಅಸ್ಮಂ ಜಮಾದಾರ, ಶಕೀಲ್ ದ್ರಾಕ್ಷೆ, ಹಸನ ಪನಾರಿ, ಗೌಸ್ ಸೈಯ್ಯದ, ಅಲ್ಲಾಭಕ್ಷ ಮುಲ್ಲಾ, ಮಕ್ಸದ ಮುಲ್ಲಾ, ಯುನೂಸ್ ಜಮಾದಾರ, ಅಮ್ಜದ ಮಕಾನಾದಾರ, ಮುಖ್ಯಾಧ್ಯಾಪಕಿ ಎನ್‌.ಐ. ಮಕಾನದಾರ, ಬಿ.ಆಯ್‌. ಸಂಡೂರೆ, ಎಂ.ಎಸ್‌.ಸೈಯ್ಯದ, ಟಿ.ಬಿ. ಜಮಾದಾರ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ