ಕಾಗವಾಡ

ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಧನೆ

ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸಾಧನೆ

ಲೋಕದರ್ಶನ ವರದಿ 

ಕಾಗವಾಡ 29: ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವು ಮಾರ್ಚ್‌-ಎಪ್ರೀಲ್ 2022ರಲ್ಲಿ ಹಮ್ಮಿಕೊಂಡ ಬಿ.ಕಾಂ-5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶಿವಾನಂದ ಮಹಾವಿದ್ಯಾಲಯ, ಕಾಗವಾಡದ ಬಿ.ಕಾಂ ಭಾಗ-3ರ ವಿದ್ಯಾರ್ಥಿನಿ ಮಯೂರಿ ಘಾಟಗೆ 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ. 98ಅ ಅಂಕಗಳನ್ನುಗಳಿಸುವುದರ ಜೊತೆಗೆ ಇನ್‌ಕಮ್‌ಟ್ಯಾಕ್ಸ್‌-ಋ, ಕಾಸ್ಟ್‌ಅಕೌಂಟ-ಋ, ಮ್ಯಾನೇಜಮೆಟ್ ಅಕೌಂಟ ಹಾಗೂ ಜಿಎಸ್‌ಟಿ-ಋ ಈ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನುಗಳಿಸಿದ್ದಾಳೆ. 

ವಿದ್ಯಾರ್ಥಿಗಳಾದ ರೋಹಿಣಿ ಸೋನದಕರ ಹಾಗೂ ಜಿಲೆಖಾನ ಕೊರಬು ಇಂಡಿಯನ್ ಫೈನಾನಸಿಯಲ್ ಸರ್ವಿಸ್, ತೇಜಶ್ರೀ ಗುರವ ಜಿಎಸ್‌ಟಿ-ಋ, ಪ್ರಿಯಂಕಾ ಕಾತ್ರಾಳೆ ಕಾಸ್ಟ್‌ ಅಕೌಂಟ್‌-ಋ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನುಗಳಿಸುವುದರ ಜೊತೆಗೆ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಪ್ರೊ. ವ್ಹಿ.ಬಿ.ಬುರ್ಲೆ, ಪ್ರೊ. ಎಸ್‌.ಎಂ.ಘೋರೆ​‍್ಡ, ಪ್ರೊ. ವ್ಹಿ.ವ್ಹಿ.ಪಾಟೀಲ ಹಾಗೂ ಪ್ರೊ. ಪಿ.ವ್ಹಿ.ಕಿನಂಗೆ ಮೇಲ್ಕಾಣಿಸಿದ ವಿಷಯಗಳನ್ನು ಬೋಧನೆ ಮಾಡಿದ್ದರು. 

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಬೋಧಿಸಿದ ಉಪನ್ಯಾಸಕರುಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಬಿ.ಎ.ಪಾಟೀಲ, ಪ್ರಾಚಾರ್ಯರಾದ ಪ್ರೊ. ವ್ಹಿ.ಎಸ್‌.ತುಗಶೆಟ್ಟಿ ಹಾಗೂ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದರು. 


ಸುದ್ದಿ ಓದಿ