ರಾಣೆಬೆನ್ನೂರ

ರಾ ರಾ ಕಾಲೇಜು ವಿದ್ಯಾರ್ಥಿಗಳ ಸಾಧನೆ: ಖೋಖೋ ಪಂದ್ಯಾವಳಿ ಪ್ರಥಮ ಸ್ಥಾನ

ರಾ ರಾ ಕಾಲೇಜು ವಿದ್ಯಾರ್ಥಿಗಳ ಸಾಧನೆ: ಖೋಖೋ ಪಂದ್ಯಾವಳಿ ಪ್ರಥಮ ಸ್ಥಾನ

ರಾಣೆಬೆನ್ನೂರು 09:  ಬಾಗಲಕೋಟೆ ಜಿಲ್ಲೆಯ ಕಮತಗಿಯ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ ಯೋಗಿನಿ ದೇವಿ ಆರ್ ಪಾಟೀಲ್ ಗ್ರಾಮೀಣ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಇತ್ತೀಚೆಗೆ ಅಂತರ ಮಹಾವಿದ್ಯಾಲಯಗಳ ಖೋ. ಖೋ ಪಂದ್ಯಾವಳಿಗಳು ನಡೆಯಿತು. 

ಪಂದ್ಯಾವಳಿಯಲ್ಲಿ ಪಾಲ್ಗೊಂಡ ಸ್ಥಳೀಯ ಕೆಎಲ್ಇ  ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮವಿದ್ಯಾಲಯದ ವಿದ್ಯಾರ್ಥಿಗಳು ಎಂದಿನಂತೆ ತಮ್ಮ ಸಾಧನೆ ಮೆರೆದು ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ  ತಂದಿದ್ದಾರೆ. 

ಅಂತಿಮ ಸುತ್ತಿನಲ್ಲಿ ಬಿಜಾಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಮತ್ತು ರಾಜರಾಜೇಶ್ವರಿ ಕಾಲೇಜಿನ ಮಧ್ಯೆ ಏರ್ಪಟ್ಟ ಕ್ರೀಡಾಕೂಟ ಸೆಣೆಸಾಟದಲ್ಲಿ,  ರಾಣೇಬೆನ್ನೂರು ರಾ. ರಾ.ಕಾಲೇಜು ಪ್ರಥಮ ಸ್ಥಾನ ಗಳಿಸಿತು. ಕಾಲೇಜಿನ ವಿದ್ಯಾಥರ್ಿಗಳಾದ ಮಮತಾ ಪೋರಾಪುರ, ಅಂಜಲಿ ಜಾಧವ, ಶೃತಿ ಮುದಿಗೌಡ್ರ, ಮಧು ಮಜ್ಜಿಗಿ, ದಿಲ್ ಶಾದ್ ಕಡ್ಲಿ, ಕಾವ್ಯ ತೆವರಿ, ಸಹನಾ ಎರೆಸೀಮಿ, ಮಂಜುಳಾ ಹರವಿ, ನಾಗಾಂಜಲಿ ಹಾವನೂರ್, ನಗ್ಮಾ ಕಣಮಣಿ, ನಿಸರ್ಗ ಕೂಲಿ, ಮಂಗಳ ಕೂಲಿ ಸಾಧಕ ವಿದ್ಯಾರ್ಥಿ ಗಳು.ಸರ್ವೋತ್ತಮ ಆಟಗಾರ್ತಿ ಯಾಗಿ ಶೃತಿ ಮುದಿಗೌಡ್ರ ಮತ್ತು ಮಮತಾ ಪೋರಾಪುರ  ಉತ್ತಮ ಡಾರ್ಜರ್  ಆಗಿ ಆಯ್ಕೆಯಾಗಿದ್ದಾರೆ. ಸಾಧನೆ ಮೆರೆದು ಜಿಲ್ಲೆಗೆ ಮತ್ತು ಕಾಲೇಜಿಗೆ ಕೀರ್ತಿ  ತಂದ ಎಲ್ಲ ಸಾಧಕ ವಿದ್ಯಾರ್ಥಿ ಗಳಿಗೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ, ಸ್ಥಾನಿಕ ಆಡಳಿತ ಮಂಡಳಿಯ ಕಾಯರ್ಾಧ್ಯಕ್ಷ ವ್ಹಿ. ಪಿ.ಲಿಂಗನಗೌಡ್ರ, ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಪ್ರಾಚಾರ್ಯ ನಾರಾಯಣ ನಾಯಕ್ ಎ., ಕ್ರೀಡಾ ನಿರ್ದೇಶಕ ಮಂಜಪ್ಪ ಸಿ. ಎಸ್ ., ಸೇರಿದಂತೆ ಕಾಲೇಜು ಉಪನ್ಯಾಸಕರು ಮತ್ತು ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದ್ದಾರ. 

ಸುದ್ದಿ ಓದಿ