ಅಥಣಿ

ಸಂಕಲ್ಪದೊಂದಿಗೆ ಸತತ ಪ್ರಯತ್ನವಿದ್ದಲ್ಲಿ ಸಾಧನೆ ಸಾಧ್ಯ: ಚಿಕ್ಕಟ್ಟಿ

ಸಂಕಲ್ಪದೊಂದಿಗೆ ಸತತ ಪ್ರಯತ್ನವಿದ್ದಲ್ಲಿ ಸಾಧನೆ ಸಾಧ್ಯ: ಚಿಕ್ಕಟ್ಟಿ
ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಪ್ರಕಾಶ ಲೋನಾರೆÀ ಸನ್ಮಾನ ಸಮಾರಂಭದ ದೃಶ್ಯ

ಅಥಣಿ 20: ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಸಂಕಲ್ಪದೊಂದಿಗೆ ಸತತ ಪ್ರಯತ್ನ ಮಾಡಿದಾಗ ಸಾಧನೆಗೆ ಸಮಯ ಎಂದೂ ಅಡ್ಡಿಯಾಗಲಾರದು ಎಂದು ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎ. ಚಿಕ್ಕಟ್ಟಿಯವರು ಹೇಳಿದರು.

ಅವರು ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಜೀವನ ಪ್ರಕಾಶ ಲೊನಾರಿ ಇತನು ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ನಿಮಿತ್ತ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ ಕಳೆದ ಒಂದು ವರ್ಷದಿಂದ ಶಾಲೆಗಳು ಕೊವಿಡ್ 19 ಮಹಾಮಾರಿಯಿಂದ ಬಂದ ಇದ್ದರೂ ಸಹ ತಂದೆ ತಾಯಿಯ ಪ್ರೋತ್ಸಾಹ, ಮಗುವಿನಲ್ಲಿ ಸಾಧಿಸುವ ಛಲ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಇಂದು ನಮ್ಮ ಶಾಲೆಯ 3 ನೇ ತರಗತಿಯ ವಿದ್ಯಾರ್ಥಿ ಮಾಡಿದ ಸಾಧನೆ ಈ ನಾಡು ಮೆಚ್ಚುವಂತದ್ದು ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಅನಂತರ ಮಾತನಾಡಿದ ಕರಾಟೆ ತರಬೇತುದಾರರಾದ ಪ್ರೀತಮ ಹೊನಕಂಡೆ ಮಕ್ಕಳಲ್ಲಿ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಾಗಿ ಮತ್ತು ಸ್ವರಕ್ಷಣೆ ಹಾಗೂ ಆತ್ಮ ವಿಶ್ವಾಸ ತುಂಬಲು ಕರಾಟೆ ಬಹಳ ಮುಖ್ಯ ಎಂದು ಹೇಳಿದರು. ಇದೇ ಸಮಯದಲ್ಲಿ ಸುಖದೇವ ಲೋನಾರೆ, ನಂದಾ ಪ್ರಕಾಶ ಲೊನಾರೆ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಶಾಲೆಯ ಮುಖ್ಯ ಶಿಕ್ಷಕ ಟಿ.ಎ.ಮೊಗೇರ, ಶಾಲೆಯ ಶಿಕ್ಷಕ ಶಿಕ್ಷಕಿಯರು ಮತ್ತು ಶಾಲಾ ಮಕ್ಕಳು ಹಾಜರಿದ್ದರು. ಶಿಕ್ಷಕ ವಿಶ್ವನಾಥ ಸೌದಾಗರ ನಿರೂಪಿಸಿ ವಂದಿಸಿದರು.

ಸುದ್ದಿ ಓದಿ