ರಾಣೆಬೆನ್ನೂರ

ಖೋ ಖೋ ಪಂದ್ಯಾವಳಿಯಲ್ಲಿ ಸಾಧನೆ

ಖೋ ಖೋ ಪಂದ್ಯಾವಳಿಯಲ್ಲಿ ಸಾಧನೆ

ರಾಣಿಬೆನ್ನೂರು 08: ಬಾಗಲಕೋಟಿಯಲ್ಲಿ ನಡೆದ ಅಂತರ ಮಹಿಳಾ ಮಹಾವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಸ್ಥಳೀಯ ಕೆಎಲ್‌ಇ ಸಂಸ್ಥೆಯ ರಾಜ ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲದ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 

ದಿಲ್‌ಶಾದ್ ಕಡ್ಲಿ, ಕಾವ್ಯ ತೆವರಿ, ಸಹನಾ ಎರೆಸೀಮಿ,  ನಾಗಾಂಜಲಿ ಹಾವನೂರ, ನಗ್ಮಾ ಕಣಮನಿ,  ಮಂಗಳಾ ಕೂಲಿ, ಸುನಿತಾ ಕ್ಯಾತಾರಿ, ಶೃಷ್ಠಿ ದೊಡ್ಡಬಿದರಿ, ಪ್ರಿಯಾ ಕರೂರ, ಪ್ರಿಯಾಂಕ, ಕವಿತಾ ಉಪ್ಪಾರ, ಪ್ರಿಯಾ ಬಿ.ವ್ಹಾಯ್, ಸಿಮ್ರಾನ್ ಕಡೇಮನಿ  ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು.  

ಸಾಧನೆಗೈದ ವಿದ್ಯಾರ್ಥಿನಿಯರಿಗೆ ಸ್ಥಾನಿಕ ಅಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವ್ಹಿ. ಪಿ. ಲಿಂಗನಗೌಡ್ರ, ಸದಸ್ಯರಾದ ಬಿ.ಎಸ್‌. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಪ್ರಾಚಾರ್ಯ ನಾರಾಯಣ ನಾಯಕ ಎ,  ಕ್ರೀಡಾ ನಿರ್ದೇಶಕ ಮಂಜಪ್ಪ ಸಿ.ಎಸ್  ಅಭಿನಂದಿಸಿದ್ದಾರೆ. 


ಸುದ್ದಿ ಓದಿ