ಕಾಗವಾಡ

ಉರ್ದು ವಿದ್ಯಾರ್ಥಿಗಳಿಂದ ಕನ್ನಡದಲ್ಲಿ ಸಾಧನೆ; 6 ವಿದ್ಯಾರ್ಥಿಗಳು ಪ್ರಥಮ.

ಉರ್ದು ವಿದ್ಯಾರ್ಥಿಗಳಿಂದ ಕನ್ನಡದಲ್ಲಿ ಸಾಧನೆ; 6 ವಿದ್ಯಾರ್ಥಿಗಳು ಪ್ರಥಮ.

ಕಾಗವಾಡ, 12: ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಪ್ರಥಮ ಸ್ಥಾನಗಳಿಸಿ, ಶಾಲೆಯ ಮತ್ತು ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾರೆ. 

ಬುಧವಾರ ಸೆ.11 ರಂದು ಪಟ್ಟಣದ ವಿದ್ಯಾಸಾಗರ ಶಾಲೆಯಲ್ಲಿ ನಡೆದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಉರ್ದು ಶಾಲೆಯ ಒಟ್ಟು 10 ವಿದ್ಯಾರ್ಥಿಗಳು ಭಾಗವಹಿಸಿ, ಕನ್ನಡ ವಿಷಯದ ಸ್ಪರ್ಧೆಯಲ್ಲಿ 6 ವಿದ್ಯಾರ್ಥಿಗಳು ಪ್ರಥಮ ಮತ್ತು 2 ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ. 

ಈ ವೇಳೆ ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಅಸ್ಲಂ ಜಮಾದಾರ, ಹಾಲಿ ಎಸ್‌ಡಿಎಂಸಿ ಅಧ್ಯಕ್ಷ ಶಕೀಲ ದ್ರಾಕ್ಷಿ ಮಾತನಾಡಿ, ನಮ್ಮ ಉರ್ದು ಶಾಲೆಯ 10 ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ, ಕನ್ನಡ ವಿಷಯದ ಸ್ಪರ್ಧೆಯಲ್ಲಿ 6 ವಿದ್ಯಾರ್ಥಿಗಳು ಪ್ರಥಮ ಮತ್ತು 2 ವಿದ್ಯಾರ್ಥಿಗಳು ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ, ಉರ್ದು ವಿಷಯದ ವಿದ್ಯಾರ್ಥಿಗಳ ಕನ್ನಡ ಸಾಧನೆ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಅಲ್ಲದೇ ನಮ್ಮ ಶಾಲೆಯ ಮತ್ತು ಪಟ್ಟಣದ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತೇವೆ ಎಂದಿದ್ದಾರೆ. 

ಈ ಸಮಯದಲ್ಲಿ ಎಸ್‌ಡಿಎಂಸಿ ಸದಸ್ಯ ಫಾರೂಕ ಹಕೀಮ, ರಫೀಕ ಸಾರವಾನ, ಹಸನ ಪಾನಾರಿ, ಮೀರಾಸಾಬ ಮಕಾನದಾರ, ಶಿಕ್ಷಕರಾದ ಆಶೀಫ ಮುರಸಲ, ಬಾದಶಾಹ ಸೆಂಡೂರೆ, ಟಿ.ಬಿ. ಜಮಾದಾರ, ಎಂ.ಎಸ್‌. ಸಯ್ಯದ್, ಎಸ್‌.ಎಫ್‌. ಪಟೇಲ್, ವಿದ್ಯಾರ್ಥಿಗಳಾದ ಆಶೀಫಾ ಮುಜಾವರ, ಬರಿರಾ ಸಾರವಾನ, ಸಾದಿಯಾ ಕೊರಬು, ನಿಖತ ಬುಕಾರೆ, ಜೈನಾಜ ಶೇಖ, ಉಜಾಮಾ ಬೊಮಟೆ ಉಪಸ್ಥಿತರಿದ್ದರು. 


ಸುದ್ದಿ ಓದಿ