ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಆರೋಪ- ಪ್ರತ್ಯಾರೋಪ
ಇಂಡಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಅಭಿವೃಧ್ಧಿ ಕಾಮಗಾರಿಗಳ ಚರ್ಚೆಯಾಗದೆ ಅಧಿಕಾರಿಗಳ ಪರಸ್ಪರ ಆರೋಪ- ಪ್ರತ್ಯಾರೋಪ ತಾರಕಕ್ಕೇರಿದ ಹಿನ್ನೆಲೆಯಲ್ಲಿ ಸಭೆಗೆ ಊಟದ ವಿರಾಮ ನೀಡಿ ಸದಸ್ಯರಿಗೆ ಇರಿಸು ಮುರಿಸನ್ನುಂಟು ಮಾಡಿದ ಪ್ರಸಂಗ ಸೋಮವಾರ ಪುರಸಭೆಯಲ್ಲಿ ನಡೆಯಿತು.
ಪುರಸಭೆ ಅಧ್ಯೆಕ್ಷೆ ಬನ್ನೆಮ್ಮ ಹದರಿ ಅಧ್ಯಕ್ಷತೆಯಲ್ಲಿ ಕರೆಯಲಾದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಬೇಕಿದ್ದ ಸಭೆ ಟೆಲಿಕಾಂ ವಿಚಾರಕ್ಕೆ ಸದಸ್ಯರು ಮತ್ತು ಪುರಸಭೆಯ ಮುಖ್ಯಾಧಿಕಾರಿ ಹಾಗೂ ವ್ಯವಸ್ಥಾಪಕರ ನಡುವೆ ವಾಕ್ಸಮರ ಸಭೆಯಾಗಿ ಮಾರ್ಪಟಟಿತ್ತು.
ಸಿಂದಗಿ ರಸ್ತೆ, ಸ್ಟೇಷನ್ ರಸ್ತೆ, ಅಗರಖೇಡ ರಸ್ತೆ, ವಿಜಯಪೂರ ರಸ್ತೆ ಗಳಲ್ಲಿ ಜಿಯೋ ಮತ್ತು ಏರಟೇಲ್ ವಾಯರಿಂಗ್ ಕಾರ್ಯ ನಡೆದಿದ್ದು ಏರ್ಟೆಲ್ ಕಂಪನಿಯವರಿಂದ 1120 ಮೀಟರ್ ಕೆಲಸಕ್ಕೆ 9 ಲಕ್ಷ 47 ಸಾವಿರ ರೂ ಪುರಸಭೆ ಪಡೆಯಲು ನಿಗದಿಗೊಳಿಸಿದ್ದು, ಜಿಯೋ ಕಂಪನಿಯಿದ 3200 ಮೀಟರ್ ಕೆಲಸಕ್ಕೆ ಕೇವಲ 6 ಲಕ್ಷ ರೂ ಪಡೆಯಲು ನಿಗದಿ ಮಾಡಲಾಗಿದೆ. ಹೀಗಾಗಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಅವ್ಯವಹಾರ ನಡೆದಿದೆ. ಕೇಬಲ್ ಹಾಕಿ 6 ತಿಂಗಳಾದರೂ ಸಹಿತ ಎರಡೂ ಕಂಪನಿಯವರು ಇಲ್ಲಿಯವರೆಗೆ ಪುರಸಭೆಗೆ ಹಣ ಸಂದಾಯ ಮಾಡಿಲ್ಲ. ಹಾಗಾದರೆ ಪುರಸಭೆ ಇಂಜಿನಿಯರ್ ಕೆಲಸ ನಿರ್ವಹಿಸುತ್ತಿರುವುದು ಯಾಕೆ? ಎಂದು ಅನೀಲಗೌಡ ಪ್ರಶ್ನಿಸಿದರು. ಕೂಡಲೆ ಕೇಬಲ ಹಾಕಿರುವ ಎರಡು ಕಂಪನಿಯವರಿಂದ ವಸೂಲಿ ಮಾಡಿ ಇಲ್ಲವೆ ಕೇಬಲ ಕಿತ್ತಿ ತೆಗೆಯಬೇಕು ಎಂದು ತಾಕೀತು ಮಾಡಿದರು. ಹಣ ಸಂಗ್ರಹಿಸದಿದ್ದರೆ ಪುರಸಭೆ ಕೀಲಿ ಹಾಕಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಒಳಚರಂಡಿ ಮತ್ತು ನೀರು ಸರಬರಾಜು ಉಳಿದ ಕಾಮಗಾರಿ ಮತ್ತು ವಿವಿಧ ಕಾಮಗಾರಿಗಳ ಕ್ರಿಯಾಯೋಜನೆ ಮಾಡಿ ಬೇಗನೆ ಕೆಲಸ ಪ್ರಾರಂಭಿಸಲು ಸದಸ್ಯ ಅನೀಲಗೌಡ ಬಿರಾದಾರ ಆಗ್ರಹಿಸಿದರು. ಕೆಲವು ಕಡೆ ಒಳಚರಂಡಿ ಪಾಯಿಪ್ ಲಾಯಿನ್ ಮಾಡಿರುವದಿಲ್ಲ, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಮತ್ತು ಪುರಸಭೆ ಜಂಟಿಯಾಗಿ ಸಮೀಕ್ಷೆ ಮಾಡಿ ಮಾಡುವ ಕುರಿತು ಚರ್ಚೆ ನಡೆಯಿತು. ಸದಸ್ಯ ಶಬ್ಬೀರ ಖಾಜಿ ಮಾತನಾಡಿ ಪಟ್ಟಣದಲ್ಲಿ 158 ಗಾರ್ಡನ ಗಳಿದ್ದು ಜಾಗೆ ಗುರುತಿಸಿ ನಾಮಫಲಕ ಮತ್ತು ತಂತಿಬೇಲಿ ಹಾಕಬೇಕು ಎಂದರು.
ಸದಸ್ಯ ವಿಜಯಕುಮಾರ ಮೂರಮನ ಮಾತನಾಡಿ ಪುಟಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು. ಪತ್ರಿಕೆಗಳಲ್ಲಿ ಸಾಕಷ್ಟು ವರದಿಯಾದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೂಡಲೆ ಫುಟ್ಪಾತ್ ಮೇಲಿನ ಡಬ್ಬಾ ಅಂಗಡಿ ಇನ್ನಿತರ ವಸ್ತುಗಳನ್ನು ತೆರವು ಮಾಡಬೇಕೆಂದು ಆಗ್ರಹಿಸಿದರು.
ಸದಸ್ಯ ಉಮೇಶ ದೇಗಿನಾಳ ಮಾತನಾಡಿ ಮುಕ್ತಿ ವಾಹನ ರಿಪೇರಿ ಇದ್ದು ಅದನ್ನು ಕೂಡಲೇ ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಮತ್ತು ಹೊಸ ಮುಕ್ತಿ ವಾಹನ ಬೇಗ ತರಲು ವಿನಂತಿಸಿದರು.
ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಹಂದಿಗಳ ವಾವಳಿ ಹೆಚ್ಚಾಗಿದ್ದು ಚಿಕ್ಕಮಕ್ಕಳಿಗೆ ಕಡಿಯುತ್ತಿದ್ದು ಹಂದಿ ಸಾಕಾಣೆ ಮಾಡಿದ ಮಾಲೀಕರಿಗೆ ನೋಟಿಸ್ ನೀಡಿ ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಪರಸಭೆ ಸದಸ್ಯರಾದ ಅಯುಬ ಬಾಗವಾನ ಸಭೆಯಲ್ಲಿ ತಿಳಿಸಿದರು.
ಮಧ್ಯಪ್ರವೇಶಿಸಿದ ಉಪಾಧ್ಯಕ್ಷ ಇಸ್ಮಾಯಿಲ್ ಅರಬ ಹಂದಿಗಳ ಹಾವಳಿ ಹೆಚ್ಚಾಗಿದೆ ಇದರ ಜೊತೆ ಇಟ್ಟಂಗಿ ಭಟ್ಟಿಗಳಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಯಾವುದೇ ಇಟ್ಟಂಗಿ ಭಟ್ಟಿ ಪಟ್ಟಣದಿಂದ 5 ಕೀ,ಮೀ ದೂರವಿರಬೇಕು ಎಂಬ ನಿಯಮವಿದೆ ಕೂಡಲೆ ಎರಡರ ಮೇಲೆ ಕ್ರಮಕೈಗೊಳ್ಳಿ ಎಂದು ಪಟ್ಟು ಹಿಡಿದಾಗ ಮಧ್ಯಪ್ರವೇಶಿಸಿದ ಅನೀಲಗೌಡ ಬಿರಾದಾರ, ಅಸ್ಲಂ ಕಡಣಿ ಹಂದಿಗಳ ಹಾವಳಿ ,ಇಟ್ಟಂಗಿ ಭಟ್ಟಿ ವಿಷಯ ಬೇರೆ ಹಂದಿಗಳನ್ನು ಆದಷ್ಟು ಕಡಿಮೆ ಮಾಡಲು ಸೂಚನೆ ನೀಡಿ ಎಂದು ಮಾತಿಗೆ ತೆರೇ ಏಳೆದರು
ಪುರಸಭೆಯಲ್ಲಿ ಯು.ಜಿ.ಡಿ ಅಡಿಯಲ್ಲಿ 5353 ಮನೆಗಳಿಗೆ 24*7 ನಳದ ಜೋಡಣೆ ನೀಡಿದ್ದು ಇನ್ನುಳಿದ ಮನೆಗೂ ಜೋಡಣೆ ಕಾರ್ಯವಾಗಬೇಕು ಎಂಬ ಕುರಿತು ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಮೂರಮನ್, ಭೀಮನಗೌಡ ಪಾಟೀಲ, ಅನೀಲಗೌಡ ಬಿರಾದಾರ, ದೇವಿಂದ್ರ ಕುಂಬಾರ, ಅಸ್ಲಮಂ ಕಡಾಣಿ, ಉಮೇಶ ದೇಗನಾಳ, ವಿಜಯಕುಮಾರ ಮೂರಮನ, ಅಯೂಬ ಬಾಗವಾನ, ಮುಸ್ತಾಕ ಇಂಡಿಕರ, ಸೈಪಾನ ಪವಾರ, ಶಭೀರಖಾಜಿ, ಸಂಗೀತಾ ಕರಕಟ್ಟಿ, ಸುಜಾತಾ ಪಾಟೀಲ, ಶೈಲಜಾ ಪೂಜಾರಿ, ಅನುಸುಯಾ ಕಾಲೇಭಾಗ, ರೇಣುಕಾ ಉಟಗಿ ಸೇರಿದಂತೆ ಅನೇಕರು ಇದ್ದರು.
ಮುಖ್ಯಾಧಿಕಾರಿ ಕೆ.ಎಸ್.ಲಕ್ಷ್ಮೀಶ ಸ್ವಾಗತಿಸಿದರು. ಅಶೋಕ ಚಂದನ, ಬಿ.ಆರ್.ಶಿಂಘೆ, ಪ್ರವೀಣ ಸೋನಾರ, ಹುಚ್ಚಪ್ಪ ಶಿವಶರಣ ಮತ್ತಿತರಿದ್ದರು.