ಸೋಮಣ್ಣ ಬೇವಿನಮರದ ಅಧಿಕಾರ ಸ್ವೀಕಾರ: ಸಂಭ್ರಮಾಚರಣೆ
ಶಿಗ್ಗಾವಿ 15: ಪಟ್ಟಣದ ಕಾಂಗ್ರಸ್ ಮುಖಂಡ ಸೋಮಣ್ಣ ಬೇವಿನಮರದ ಅವರು ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವದು ಇಡೀ ಕ್ಷೇತ್ರದ ಕಾರ್ಯಕರ್ತರಲ್ಲಿ ಪ್ರಬಲ ಶಕ್ತಿ ನೀಡಿದಂತಾಗಿದ್ದು, ಕಾರ್ಯಕರ್ತರು ಉತ್ಸುಕರಾಗಿ ಪಟಾಕಿ ಹಂಚಿ, ಸಿಹಿ ವಿತರಿಸುವ ಮೂಲಕ ಸಂಭ್ರಮ ಆಚರಿಸಿದರು.
ಕಳೆದ 30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಹಾನಗಲ್ಲ ಉಪಚುನಾವಣೆ, ವಿಧಾನ ಸಭೆ ಹಾಗೂ ಗ್ರಾಮಪಂಚಾಯಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕಾರ್ಯಕರ್ತರಿಗೆ ಉತ್ಸಹ ನೀಡುವ ಮೂಲಕ ಕಾಂಗ್ರೆಸ್ ಗೆಲುವು ಸಾಧನೆಗೆ ಶ್ರಮಿಸಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರು ಅವರ ಸೇವಾ ಕಾರ್ಯ ಗುರುತಿಸಿ ಉನ್ನತ ಸ್ಥಾನಮಾನ ನೀಡುವ ಮೂಲಕ ಕ್ಷೇತ್ರದ ಕಾರ್ಯಕರ್ತರಲ್ಲಿ ಬಲ ನೀಡಲು ಮುಂದಾಗಿದೆ.
ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪ ಅವರನ್ನು ಅವಿರೋಧ ಮಾಡಿ ಕಳುಹಿಸಿದ ಕ್ಷೇತ್ರವಾಗಿದ್ದು, ಅಲ್ಲದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಕಳೆದ 25ವರ್ಷಗಳಿಂದ ಆಡಳಿತಕ್ಕೆ ಬಂದಿಲ್ಲ. ಕ್ಷೇತ್ರದಲ್ಲಿ ಅಧಿಕಾರ ವಂಚಿತ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮುಖ್ಯ ಉದ್ದೇಶದಿಂದ ಸೋಮಣ್ಣ ಬೇವಿನಮರದ ಅವರಿಗೆ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷತೆ ಸ್ಥಾನ ನೀಡಿದೆ. ಅಲ್ಲದೆ ಸ್ಥಾನ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷ ತನ್ನದೆಯಾದ ತತ್ವಸಿದ್ದಾಂತ ಒಳಗೊಂಡಿದ್ದು, ಅವುಗಳನ್ನು ಪಾಲಿಸುವ ಮೂಲಕ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಗಡಿ ಸಮಸ್ಯೆ ಸವಾಲುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.
ಸೋಮಣ್ಣ ಬೇವಿಮರದ
ಅಧ್ಯಕ್ಷರು, ಕರ್ನಾಟಕ ರಾಜ್ಯ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ.
ಕ್ಷೇತ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಾರದೆ ವಂಚಿತವಾಗಿತು. ಆದರೆ ಬೇವಿನಮರದ ಅವರಿಗೆ ಪ್ರಾಧಿಕಾರದ ಅಧ್ಯಕ್ಷತೆ ಸ್ಥಾನ ನೀಡುವ ಜತೆಗೆ ಇಡೀ ಕಾರ್ಯಕರ್ತರಲ್ಲಿ ಉತ್ಸಾಹ ನೀಡಿದಂತಾಗಿದೆ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ.
ಯಾಸೀರಖಾನ್ ಪಠಾಣ
ಕಾಂಗ್ರೆಸ್ ಮುಖಂಡರು, ಶಿಗ್ಗಾವಿ