ಹೂವಿನ ಹಡಗಲಿ

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ : ಕೃಷ್ಣನಾಯ್ಕ್‌

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ : ಕೃಷ್ಣನಾಯ್ಕ್‌

ಹೂವಿನ ಹಡಗಲಿ 03 : ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಎಂದು ಶಾಸಕ ಎಲ್ ಕೃಷ್ಣನಾಯ್ಕ್‌  ಹೇಳಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಪಿಯು ಕಾಲೇಜಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು. ಮೇರಿ ಕೋಮ್, ಮನು ಭಾಕರ್ ಒಲಿಂಪಿಕ್ಸ್‌ ಸಾಧನೆ ನಿಮಗೆ ಸ್ಪೂರ್ತಿ ಆಗಬೇಕು.ನಿತ್ಯ ಮೈದಾನದಲ್ಲಿ ಬೆಳಿಗ್ಗೆ ಸಂಜೆ ನಿರಂತರ ದೈಹಿಕ ಚಟುವಟಿಕೆಗಳಿಗಾಗಿ ಮೈದಾನ ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.ಪಾಲಕರು ತಮ್ಮ ಮಕ್ಕಳಿಗೆ ಬರೀ ಅಂಕಗಳಿಗೆ ಸೀಮಿತಗೊಳಿಸದೆ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು. 

ಮುಖಂಡರಾದ ಎಂ ಪರಮೇಶ್ವರ​‍್ಪ, ವಾರದ ಗೌಸ್ ಮೊಹಿದ್ದೀನ್, ತೋಟಾನಾಯ್ಕ್‌, ಹಣ್ಣಿ ಶಶಿಧರ್, ಸಿರಾಜ್ ಬಾವಿಹಳ್ಳಿ, ಪ್ರಾಚಾರ್ಯರಾದ ಎ ಕೊಟ್ರಗೌಡ, ಕೋರಿ ಹಾಲೇಶ್, ದೈಹಿಕ ಅಧೀಕ್ಷಕರಾದ ರಫಿಕ್ ಅಹಮದ್ ಖವಾಸ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ ಎನ್ ಪಾಟೀಲ್, ಸ್ವಾಮಿನಾಥ ರಾಮಸ್ವಾಮಿ ಇತರರು ಉಪಸ್ಥಿತರಿದ್ದರು. ಜಿ ಪಿ ಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರದೀಪ್ ಕುಮಾರ್ ಜೆ,ಮಧುನಾಯ್ಕ್‌, ಸೋಮಶೇಖರ್ ನಿರ್ವಹಿಸಿದರು.ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಸಿದ್ದರು. 


ಸುದ್ದಿ ಓದಿ