ಚುರುಕುಗೊಂಡ ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ
ಗುಳೇದಗುಡ್ಡ: ಕೋವಿಡ್ ಸೋಂಕು ರೋಗವನ್ನು ಸಾಮಾಜಿಕ ಅಂತರ, ಮಾಸ್ಕ್ ಬಳಕೆ, ಲಸಿಕೆ ಪಡೆಯುವುದು ಮುಂತಾದ ಕಾರ್ಯಗಳಿಂದ ರೋಗ ಮುಕ್ತರಾಗಲು ಸಾಧ್ಯವಿದೆ. ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಸ್ವಚ್ಚತೆಯಿಂದ ಬದುಕುವ ಮನೋಭಾವನೆ ನಮ್ಮಲ್ಲಿ ಬೆಳೆಯಬೇಕಗಿದೆ. ಅಂದಾಗ ನಾವು ಹಾಗೂ ನಮ್ಮ ಪರಿಸರ ಆರೋಗ್ಯದಿಂದ ಇರಲು ಸಾಧ್ಯವೆಂದು ತಹಸೀಲ್ದಾರ ಜಿ.ಎಂ.ಕುಲಕಣರ್ಿ ಹೇಳಿದರು.
ಶನಿವಾರ ತಾಲೂಕಿನ ತಿಮ್ಮಸಾಗರ, ಲಿಂಗಾಪೂರ, ತೆಗ್ಗಿ ಗ್ರಾಮಗಳಿಗೆ ಈ ತಂಡ ಭೇಟಿ ನೀಡಿ, ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮಸ್ಥರನ್ನು ಕೋವಿಡ್ ಸೋಂಕಿನ ಕುರಿತು ಮಾಹಿತಿ ನೀಡಿ ಜಾಗೃತಗೊಳಿಸಿ, ತಾಲೂಕಿನ ಹಳ್ಳಿಗಳನ್ನು ಕೋವಿಡ್ ಸೋಂಕು ಮುಕ್ತ ಮಾಡಲು ತಾಲೂಕಿನ ಕಂದಾಯ ಇಲಾಖೆ, ವೈದ್ಯರ ತಂಡ, ಗ್ರಾಪಂ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕತರ್ೆಯರು ಮುಂದಾಗಿದ್ದೂ ಗ್ರಾಮಗಳ ಪ್ರತಿ ಕುಟುಂಬಗಳಿಗೆ ತೆರಳಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಗ್ರಾಮಸ್ಥರು ಸಹಕಾರ ನೀಡಬೇಕೆಂದರು. ಕೆಲವಡಿ ಗ್ರಾಪಂ ಅಧ್ಯಕ್ಷ ಬಸವರಾಜ ಗೌಡರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಗರಗಳಿಗೆ ದುಡಿಯಲು ಹೋಗಿ ಮರಳಿ ಬಂದು ಕಾರಣಕ್ಕೆ ಗ್ರಾಮಗಳಲ್ಲಿ ಸೋಂಕು ಹರಡಿದೆ. ಇದರ ನಿಯಂತ್ರಣಕ್ಕೆ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬರೂ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ನಮ್ಮ ಕುಟುಂಬ ಮತ್ತು ನಮ್ಮ ಗ್ರಾಮವನ್ನು ಸೋಂಕುಮುಕ್ತ ಮಾಡೋಣ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಧಿಕಾರಿ ಡಾ.ಎಂ.ಬಿ.ಪಾಟೀಲ, ವೈದ್ಯ ಡಾ. ಕೆ.ಟಿ. ಗಾಜಿ, ಶಿರಸ್ತೆದಾರ ಸುಭಾಸ ವಡವಡಗಿ, ಉಪ ತಹಸೀಲ್ದಾರ್ ವಿರೇಶ ಬಡಿಗೇರ, ಗ್ರಾಮ ಲೆಕ್ಕಾಧಿಕರಿಗಳು, ಗ್ರಾಪಂ ಸದಸ್ಯರು, ಕಟಗೇರಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ,ಆಶಾ ಕಾರ್ಯಕತರ್ೆಯರು, ಕೆಲವಡಿ ಗ್ರಾಪಂ ಸಿಬ್ಬಂದಿ, ಹಗೂ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.
ಕೋವಿಡ್ ಕೇರ್ ಸೆಂಟರ್ಗೆ ದಾಖಲು: ಗುಳೇದಗುಡ್ಡದ ಕೋವಿಡ್ ಕೇರ್ ಸೇಂಟರ್ಗೆ ಶನಿವಾರ ಕೆಲವಡಿ-2, ಕೋಟೇಕಲ್-3, ಮಂಗಳಗುಡ್ಡ-2 ಒಟ್ಟು 7ಜನ ಪಾಜಿಟಿವ್ ಸೋಂಕಿತರು ಚಿಕಿತ್ಸೆಗಾಗಿ ದಾಖಲಾಗಿರುವುದಾಗಿ ತಹಸೀಲ್ದಾರ್ ಜಿ.ಎಂ.ಕುಲಕಣರ್ಿ ತಿಳಿಸಿದ್ದಾರೆತಾಲೂಕನ್ನು ಸೋಂಕು ಮುಕ್ತ ಮಾಡಲು ಕಂದಾಯ ಇಲಖೆ, ಆರೋಗ್ಯ ಇಲಾಖೆಯನ್ನೊಳಗೊಂಡು ಗ್ರಾಪಂ ತಂಡ ಚುರುಕು ಕಾಯರ್ಾಚರಣೆಗೆ ಮುಂದಾಗಿದೆ. ಪ್ರತಿದಿನ ಗ್ರಾಮಗಳಲ್ಲಿ ಈ ಕಾರ್ಯ ನಡೆದಿದೆ. ಸೋಂಕಿತರನ್ನು ಆರೋಗ್ಯವಂತರನ್ನಾಗಿ ಪರಿವತರ್ಿಸಲು ಕಾರ್ಯಪಡೆ ಪಣತೊಟ್ಟಿದೆ.ಜಿ.ಎಂ.ಕುಲಕಣರ್ಿ ತಹಸೀಲ್ದಾರ್ ಗುಳೇದಗುಡ್ಡ.