ಪರಮೇಶಪ್ಪ ಗೂಳಣ್ಣನವರ ಹುಟ್ಟುಹಬ್ಬದ 22ರಂದು ಶೈಕ್ಷಣಿಕ ಪ್ರತಿಭಾ ಪುರಸ್ಕಾರ
ರಾಣೇಬೆನ್ನೂರು : ಜು 19- ಧಾನ, ಧರ್ಮ, ಪರೋಪಕಾರ ಹಾಗೂ ಸಮಾಜ ಸೇವೆ ಗೂಳಣ್ಣನವರ ಮನೆತನದಲ್ಲಿ ಇತಿಹಾಸದಿಂದಲೂ ನಡೆಯುತ್ತಾ ಬಂದಿದೆ. ಅದೇ ಪರಂಪರೆಯಲ್ಲಿ ಪರಮೇಶ್ವಪ್ಪ ಅವರು ಸಾಗುತ್ತಿದ್ದಾರೆ ಎಂದು ಅಭಿಮಾನಿ ಬಳಗದ ಯುವ ಮುಖಂಡ, ನ್ಯಾಯವಾದಿ ರಾಜೇಂದ್ರ ಬಸೇನಾಯ್ಕರ ಹೇಳಿದರು.
ಅವರು, ಶುಕ್ರವಾರ ಪ್ರವಾಸಿ ಮಂದಿರದಲ್ಲಿ ನಡೆದ, ಅಭಿಮಾನಿ ಬಳಗದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ 6 ವರ್ಷಗಳಿಂದ, ಜನಸಾಮಾನ್ಯರ, ವಿದ್ಯಾರ್ಥಿಗಳ, ಶೈಕ್ಷಣಿಕ ಪ್ರಗತಿಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಲ್ಲದೇ ಕರೋನಾ ಸಂದರ್ಭದಲ್ಲಿ, ತಮ್ಮದೇ ಆದ ವಿಶೇಷ ಕೊಡುಗೆಯನ್ನು, ನಗರದ, ಹಮಾಲರಿಗೆ, ಬಡಮನೆತನಕ್ಕೆ ಜನಸಾಮಾನ್ಯರಿಗೆ ನೀಡುವುದರ ಮೂಲಕ ತಮ್ಮ ಮಾನವತೆ ಮೆರೆದು ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. 6ನೇ ವರ್ಷದ ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳ ಬ್ಯಾಗ್,ನೋಟ್ ಬುಕ್ಸ್, ಗ್ರಾ.ಪಂ ಡಿ ದರ್ಜೆ ನೌಕರರಿಗೆ ಅಭಿನಂದನೆ, ಅವಿಭಕ್ತ ಕುಟುಂಬಗಳಿಗೆ ಗೌರವ ಸಮರೆ್ಣ ಸೇರಿದಂತೆ ಮತ್ತಿತರೆ ಕಾರ್ಯಕ್ರಮಗಳು ಆಯೋಜಿಸಲಾಗಿದೆ ಎಂದರು.
ಮಾಧ್ಯಮ ಗೋಷ್ಠಿಯಲ್ಲಿ ಉಪಸ್ಥಿತರಿದ್ದ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ, ಅವರು, ತಂದೆ ತಾಯಿಗಳು ಹಾಕಿಕೊಟ್ಟ ಸಂಸ್ಕಾರ ಪರಂಪರೆ, ತಾವು ತಮ್ಮ ಬದುಕಿನಲ್ಲಿ, ಕುಟುಂಬದ ಎಲ್ಲರೂ ಅಳವಡಿಸಿಕೊಂಡು ಬಂದಿದ್ದೇವೆ. ಸರ್ಕಾರ ಎಷ್ಟೇ ಅನುಕೂಲತೆಗಳು ಕಲ್ಪಿಸಿದ್ದರು ಸಹ, ಸಮಾಜದಲ್ಲಿರುವ ಪ್ರತಿಯೊಬ್ಬ ನಾಗರಿಕರು, ಸಂಸ್ಕೃತಿ ಮತ್ತು ಸಂಸ್ಕಾರ ಪರಂಪರೆಯಂತೆ, ದಾನ, ಧರ್ಮ, ಮತ್ತು ಕೊಡುಗೆಯನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆ ಹಿನ್ನೆಲೆಯಲ್ಲಿ ತಾವು ಸಹ, ತಮ್ಮ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗವು ರೂಪಿಸಿರುವ ಕಾರ್ಯಕ್ರಮವು ತಮಗೆ ಅತ್ಯಂತ ಆತ್ಮತೃಪ್ತಿ ಮತ್ತು ಸಂತೋಷ ತರುತ್ತಲಿದೆ ಎಂದರು.
ಮಾಧ್ಯಮ ಗೋಷ್ಠಿಯಲ್ಲಿ ಅಭಿಮಾನಿಗಳ ಬಳಗದ ಮುಖಂಡರಾದ, ಕರಬಸಣ್ಣ ಮಾಕನೂರ,ಪ್ರಕಾಶ ಪೂಜಾರ್, ನಿಂಗರಾಜ ಕೋಡಿಹಳ್ಳಿ, ಮಲ್ಲಣ್ಣ ಅಂಗಡಿ, ರಮೇಶ ನಾಯಕ್, ಮಂಜುನಾಥ ಕಾಟಿ, ಶಿವಪುತ್ರಪ್ಪ ದೇಸಾಯಿ, ಮಾಳಪ್ಪ ಪೂಜಾರ್, ನಾಗರಾಜ ದೊಡ್ಡಮನಿ, ಸೋಮಣ್ಣ ಗೌಡಶಿವಣ್ಣನವರ, ಕುಬೇರಪ್ಪ ಕೊಂಡಜ್ಜಿ, ಕಿರಣ ತುಕ್ಕಪ್ಪನವರ್, ಸೇರಿದಂತೆ ಮತ್ತಿತರರು ಇದ್ದರು.
ಪ್ರತಿಭಾ ಪುರಸ್ಕಾರ :- ಇಲ್ಲಿನ ಸಿದ್ದೇಶ್ವರ ನಗರದ, ಶ್ರೀ ಸಿದ್ದೇಶ್ವರ ಸಮುದಾಯ ಭವನದಲ್ಲಿ ಜುಲೈ 22,,2024 ರಂದು ಸೋಮವಾರ ಮುಂಜಾನೆ 10.30 ಗಂಟೆಗೆ, ಹುಟ್ಟು ಹಬ್ಬದ ಪ್ರಯುಕ್ತ, ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಅಭಿನಂದನಾ ಸನ್ಮಾನ, ಅವಿಭಕ್ತ ಕುಟುಂಬಗಳಿಗೆ ಗೌರವ ಸಮಾರಂಭ ನಡೆಯಲಿದೆ. ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪದ ಮ.ನಿ.ಪ್ರ. ಶ್ರೀ ಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಶ್ರೀಮತಿ ಗೌರಮ್ಮ ಬಸಪ್ಪ ಗೂಳಣ್ಣನವರ, ಅಧ್ಯಕ್ಷತೆ ವಹಿಸುವರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಸಮಾರಂಭ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್, ರಾಜ್ಯ ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ, ಮಂಜುನಾಥ ಓಲೇಕಾರ, ಶೋಭಾ ನಿಸ್ಸಿಮಗೌಡ್ರ, ಸುಭಾಷ ಗಡಿಯಪ್ಪನವರ, ರಮೇಶ ಗುತ್ತಲ, ಪರಮಪ್ಪ ಶಿವಣ್ಣನವರ, ಹೊನ್ನವ್ವ ಕಾಟಿ ಮತ್ತಿತರರು ಪಾಲ್ಗೊಳ್ಳುವರು