ಪೋಲಿಸರು ಕಾರ್ಯಾಚರಣೆಗೆ ಸುಮಾರು 29 ಬೈಕ್ಗಳ ವಶ
ರಾಣಿಬೆನ್ನೂರ:2 ನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳರನ್ನು ಕಾರ್ಯಾಚರಣೆ ನಡೆಸಿ ಸುಮಾರು 29 ಬೈಕ್ಗಳನ್ನು ವಶಪಡಿಸಿಕೊಂಡು ಮೂವರು ಬೈಕ್ ಕಳ್ಳರನ್ನು ಬಂಧಿಸಾಗಿದೆ ಎಂದು ಎಸ್.ಪಿ. ಅಂಶುಕುಮಾರ ಹೇಳಿದರು.
ಸೋಮವಾರ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಏರಿ್ಡಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರೆಕೇರೂರು ನಗರದ ಮೆಹಬೂಬ್ ಮುಗಳಗೇರಿ(28), ಖಲಂದರ್ ಪಠಾಣ(22) ಹಾಗೂ ಹುಬ್ಬಳ್ಳಿಯ ಎಸ್.ಎಮ್.ಕೃಷ್ಣ ನಗರದ ತನ್ವೀರ ಲಕ್ಷ್ಮೇಶ್ವರ(28) ಎಂಬ ಕಳ್ಳರನ್ನು ಬಂಧಿಸಿ ಇನ್ನೊರ್ವ ಹಬಿವುಲ್ಲಾ ಕಚವಿ ಪರಾರಿಯಾಗಿದ್ದಾನೆ ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.
ಇವರು ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಗದಗ ಸೇರಿದಂತೆ ವಿವಿಧ ಕಡೆ ಬೈಕ್ ಕಳ್ಳತನ ಮಾಡಿ ಐದು ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಈ ಸಮಯದಲ್ಲಿ ರಾಣಿಬೇನ್ನೂರು ನಗರದ ಎನ್.ವಿ.ಹೊಟೆಲ್ ಬಳಿ ನಂಬರ್ ಪ್ಲೇಟ್ ಇಲ್ಲದ ಎರಡು ಬೈಕ್ ಅನುಮಾನಸ್ಪದವಾಗಿ ಓಡಾಡುತ್ತಿದ್ದವು. ಇದನ್ನು ಗಮನಿಸಿದ ಶಹರ ಠಾಣೆಯ ಪೋಲಿಸರು ವಿಚಾರಿಸಿದಾಗ ಕಳ್ಳತನ ಮಾಡಿದ ಬೈಕ್ ಎಂಬುದು ಗೊತ್ತಾಗಿದೆ. ಸಿಸಿ ಟಿವಿ ವಿಡಿಯೋ, ತಾಂತ್ರಿಕ ಮಾಹಿತಿ ಆಧರಿಸಿ ನಂತರ ಆರೋಪಿಗಳನ್ನು ಬಂಧನ ಮಾಡಿ ಮಾರಾಟ ಮಾಡಿದ ಬೈಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಹೆಚ್ಚುವರಿ ಎಸ್.ಪಿ. ಸಿ.ಗೋಪಾಲ, ರಾಣಿಬೆನ್ನೂರು ಡಿವಾಯ್ಎಸ್ಪಿ ಡಾಽ ಗೀರೀಶ್ಭೋಜಣ್ಣನವರ, ಸಿಪಿಐ ಡಾಽ ಎಸ್.ಕೆ. ಶಂಕರ್, ಪಿಎಸ್ಐ ಗಡ್ಡೇಪ್ಪ ಗುಂಜಟಗಿ ಇವರು ವಿಶೇಷ ತಂಡ ರಚನೆ ಮೂಲಕ ಸಿಬ್ಬಂದಿಗಳಾದ ಹೆಗ್ಗಪ್ಪ ದೊಡ್ಮನಿ, ಸಿ.ಬಿ. ಕಡ್ಲೇಪ್ಪನವರ, ವೈ.ಬಿ. ಓಲೇಕಾರ, ಪಿ.ಕೆ. ಸನದಿ, ಎಚ್.ಎಲ್. ದೊಡ್ಮನಿ, ನಾಗರಾಜ ಬೆನಕಜ್ಜಿ ಇದ್ದರು.