ಅಬ್ದುಲ್ ಕಲಾಂ ಫೌಂಡೇಶನ್ದಿಂದ ಸ್ಪೂರ್ತಿಯ ಚಿಲುಮೆ ಕಾರ್ಯಕ್ರಮ
ಇಂಡಿ: ಭಿನ್ನವಾಗಿ ಚಿಂತಿಸಿ, ಅನ್ವೇಷಣೆಯ ಧೈರ್ಯವನ್ನು ಬೆಳೆಸಿಕೊಳ್ಳಿ, ಅಸಾಧ್ಯವಾದುದನ್ನು ಸಾಧಿಸುವ ಛಲವನ್ನು ಕಂಡುಕೊಂಡು, ಸಮಸ್ಯೆಗಳನ್ನು ಗೆದ್ದು, ಯಶಸ್ವಿಯಾಗಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಮುಂಬೈನ ಖ್ಯಾತ ಭಾಷಣಗಾರ್ತಿ ಡಾ.ರೋಷನ್ ಜಹಾನ್ ಜವಾದ್ ಶೇಖ್ ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢ ಶಾಲಾ ಮೈದಾನದಲ್ಲಿ ಡಾ.ಎ.ಪಿ.ಇ್ವ. ಅಬ್ದುಲ್ ಕಲಾಂ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ಸ್ಪೂತರ್ಿಯ ಚಿಲುಮೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಕ್ತಿ ಎನ್ನುವುದು ನಿಮ್ಮ ದೈಹಿಕ ಸಾಮಥ್ರ್ಯದಿಂದ ಬರುವಂಥದಲ್ಲ, ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು.ನಮ್ಮ ಸಾಮಥ್ರ್ಯಗಳ ಮೇಲೆ ನಂಬಿಕೆ ಇಟ್ಟು ಬದುಕನ್ನು ಸದೃಢಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿ ಮಾತನಾಡಿ, ಆಕಾಶದೆಡೆಗೆ ನೋಡಿ, ಯಾರು ಒಂಟಿಯಾಗಿಲ್ಲ. ಇಡೀ ವಿಶ್ವವು ನಮಗೆ ಸ್ನೇಹಪರವಾಗಿದೆ. ಕನಸು ಕಂಡು ಕೆಲಸ ಮಾಡುವವರಿಗೆ ಬಯಸಿದ್ದೆಲ್ಲವೂ ಸಿಕ್ಕೇ ಸಿಗುತ್ತದೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯೇ ರೋಷನ್ ಶೇಖ್. ಅವರು ಕೇವಲ ತಮ್ಮ16 ನೇ ವಯಸ್ಸಿನಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡು ಪ್ಯಾಥೋಲಜಿ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದುಕೊಂಡು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮೌಲಾನಾ ಶಾಕಿರ್ ಹುಸೇನ್ ಕಾಶ್ಮಿ, ನಿರಂತರವಾಗಿ ಬದಲಾಗುವ ಪಾರಿಸರಿಕ ಒತ್ತಡಗಳನ್ನು ಸದೃಢವಾಗಿ ಮೀರಿನಿಲ್ಲಲು ಅಗತ್ಯವಾದ ಶಾರೀರಿಕ, ಮಾನಸಿಕ ಮತ್ತು ವರ್ತನೆಯ ಅಂಶಗಳನ್ನು ರೂಢಿಸಿಕೊಂಡು ಬೆಳೆಯಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಯ್ಯದ್ ಮುಹಹ್ಮದ್ ತನ್ವಿರ್ ಹಸ್ಮಿ, ವಿಜಯಪುರ ಸಿಕ್ಯಾಬ್ ಕಾಲೇಜಿನ ಉರ್ದು ಪ್ರೊಫೆಸರ್ ಡಾ.ಹಾಜಿರಾ ಪರವೀನ್, ಮೌಲಾನಾ ಜಿಯಾ ಉಲ್ ಹಕ್ ಉಮರಿ, ಮೌಲಾನಾ ಶಕೀಲ್ ಮುಲ್ಲಾ, ಮುಫ್ತಿ ಅಬ್ದುಲ್ ರೆಹಮಾನ್ ಅರಬ, ಅಬ್ದುಲ್ ನಬಿ ಜಮಾದಾರ, ಸಲ್ಮಾನ್ ಅಬ್ದುಲ್ ಲತೀಫ್, ಸಮಾಜ ಸೇವಕ ಹಸನ್ ಮುಜಾವರ, ಫೌಂಡೇಶನ್ ಅಧ್ಯಕ್ಷ ಅಸ್ಪಾಕ್ ಕೋಕಣಿ, ಕಾರ್ಯದಶರ್ಿ ಭಾಷಾ ಬೋರಾಮಣಿ, ರಮ್ಜಾನ್ ವಾಲೀಕಾರ, ಮೈನುದ್ದೀನ್ ಶೇಕ್, ಕಲಿಂ ಪಟೇಲ್, ಶಬ್ಬೀರ್ ಮುಲ್ಲಾ, ಹುಸೇನ್ ಮಕಾನದಾರ, ಸಲವಾದಿನ್ ಪಠಾಣ್, ಮಹಹ್ಮದ್ ಹುಸೇನ ಹುಮನಾಬಾದ, ಜಹಗೀರ್ ಅಗರಖೇಡ, ಇಫರ್ಾನ್ ದುಧನಿ, ಇಲಾಹಿ ಅರಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 3000 ಕ್ಕೂ ಅಧಿಕ ಜನರು ಭಾಗವಹಿಸಿದ್ದರು.