ರಾಣೆಬೆನ್ನೂರ

ಆಧಾರ್ ಕಾರ್ಡ್‌ ತಿದ್ದುಪಡಿ, ಕೇಂದ್ರ ಪುನರ್ ಪ್ರಾರಂಭಿಸಲು ಸಂಘಟನೆಗಳ ಆಗ್ರಹ

ಆಧಾರ್ ಕಾರ್ಡ್‌ ತಿದ್ದುಪಡಿ, ಕೇಂದ್ರ ಪುನರ್ ಪ್ರಾರಂಭಿಸಲು ಸಂಘಟನೆಗಳ ಆಗ್ರಹ

ರಾಣೇಬೆನ್ನೂರು  9: ವಾಣಿಜ್ಯ ನಗರದ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ ಕಳೆದ ತಿಂಗಳವರೆಗೆ ಆಧಾರ್ ತಿದ್ದುಪಡಿ ಸೇವೆಯ ಸೌಕರ್ಯ ಲಭ್ಯವಿತ್ತು  ಆದರೆ ಗ್ರಾಹಕರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿರುವುದಾಗಿ ಆರೋಪಿಸಿದ ಸಾರ್ವಜನಿಕರ ಮನವಿಗೆ ಸ್ಪಂದಿಸಿ, ಸಂಬಂಧಿಸಿದ ಹಾವೇರಿ ಜಿಲ್ಲೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರೀಶೀಲನೆ ನಡೆಸಿ ಗುತ್ತಿಗೆದಾರರನ್ನು ಮಜಾ ಗೊಳಿಸಿದ್ದರು.  

ಅಂದಿನಿಂದ ಇಂದಿನವರೆಗೂ ಇಲ್ಲಿನ ತಿದ್ದುಪಡಿ ಕೇಂದ್ರವು ಬಂದ್ ಆಗಿದ್ದರಿಂದ ಸಾರ್ವಜನಿಕರು ನಿತ್ಯವೋ ದಾವಣಗೆರೆಯಲ್ಲಿರುವ  ಕೇಂದ್ರಕ್ಕೆ ತೆರಳಬೇಕಾಗಿತ್ತು. ಇದರಿಂದ ರೊಚ್ಚಿಗೆದ್ದ ನಗರ ಮತ್ತು ತಾಲೂಕಿನ ನಾಗರಿಕರು ರಾಣೇಬೆನ್ನೂರು ನಗರದಲ್ಲಿ ಸಮಗ್ರ ಹಾವೇರಿ ಜಿಲ್ಲೆಯ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ದಾವಣಗೆರೆಯಲ್ಲಿರುವ ಮುಖ್ಯ ಕೇಂದ್ರದ ಮಾದರಿಯಲ್ಲಿ ಇಲ್ಲಿಯೂ ಸಹ ಪ್ರಾರಂಭಿಸುವಂತೆ ಒತ್ತಾಯಿಸಿ ಹುಬ್ಬಳ್ಳಿಯ ಬಿಎಸ್‌ಎನ್‌ಎಲ್  ಸಂಚಾರ ಸದನ ಜನರಲ್ ಮ್ಯಾನೇಜರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.           

ಆಧಾರ್ ತಿದ್ದುಪಡಿ, ಮೊಬೈಲ್ ನಂಬರ್ ಬದಲಾವಣೆ ಅಗತ್ಯವಿದೆ ಕಾರಣ ಇತ್ತೀಚಿಗೆ  ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯ ವಾಗುತ್ತದೆ ಎಂದು ಸಲ್ಲಿಸಿರುವ ಮನವಿಯಲ್ಲಿ ಎಚ್ಚರಿಸಿದ್ದಾರೆ. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ವಂದೇ ಮಾತರಂ ಯುವಕ ಸ್ವಯಂ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಕೆರೋಡಿ, ಗೋವಿಂದಪ್ಪ, ಎಲ್ಲಪ್ಪ ಚಿಕ್ಕಣ್ಣನವರ, ರವಿ ಕೆರೋಡಿ, ಮಾಲತೇಶ ಸೇರಿದಂತೆ ಗ್ರಾಮೀಣ ಪ್ರದೇಶದ ನಾಗರಿಕರು, ರೈತರು ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ