ಮನರಂಜನೆ

‘ಡಿಡಿಎಲ್ ಜೆ’ 25 ವರ್ಷದ ಸಂಭ್ರಮ

‘ಡಿಡಿಎಲ್ ಜೆ’ 25 ವರ್ಷದ ಸಂಭ್ರಮ

ನವದೆಹಲಿ, ಅ 20 :ಬಾಲಿವುಡ್ ಬಾದ್ ಷಾ ಎಂದೇ ಹೆಸರಾಗಿರುವ ಶಾರೂಕ್ ಖಾನ್ ಹಾಗೂ ಕಾಜೋಲ್ ಅಭಿನಯದ ‘ಡಿಡಿಎಲ್ ಜೆ’ ಚಿತ್ರಕ್ಕೆ 25 ವರ್ಷಗಳ ಸಂಭ್ರಮ.  ಈ ಸಂದರ್ಭದಲ್ಲಿ ಚಿತ್ರದ ನಟ, ನಟಿಯರು, ತಂತ್ರಜ್ಞರು ಅಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಿರ್ಮಾಪಕ ಯಶ್ ರಾಜ್, '' 25 ವರ್ಷಗಳ ಹಿಂದೆ ಈ ದಿನದಂದು, ಪ್ರಣಯದ ವ್ಯಾಖ್ಯಾನವನ್ನು ಪುನಃ ಬರೆಯಲಾಯಿತು” ಎಂದಿದ್ದಾರೆ.ನಟಿ ಕಾಜೋಲ್, 1995ರ ಚಿತ್ರವನ್ನು ನೆನಪಿಸಿಕೊಳ್ಳುತ್ತಾ, “ಒಂದು ಚಲನಚಿತ್ರ.  ರಾಜ್ ಮತ್ತು ಸಿಮ್ರಾನ್ ಇಬ್ಬರು! ಒಂದು ಚಲನಚಿತ್ರ.  ಚಿತ್ರವು ಇತಿಹಾಸ ಸೃಷ್ಟಿಸಲು ಕಾರಣರಾದ ಎಲ್ಲರಿಗೂ ಧನ್ಯವಾದ” ಎಂದು ತಿಳಿಸಿದ್ದಾರೆ. 

ನಟ ಶಾರೂಕ್ ಖಾನ್, ''25 ವರ್ಷಗಳು. ರಾಜ್ ಮತ್ತು ಸಿಮ್ರಾನ್ ಅವರನ್ನು ನಿಮ್ಮ ಪೂರ್ಣ ಹೃದಯದಿಂದ ಪ್ರೀತಿಸಿದ್ದಕ್ಕಾಗಿ ನಿಮ್ಮ ಬಗ್ಗೆ ಕೃತಜ್ಞತೆ ತುಂಬಿದೆ. ಇದು ಯಾವಾಗಲೂ ವಿಶೇಷವೆನಿಸುತ್ತದೆ, '' ಎಂದು  ಟ್ವೀಟ್ ಮಾಡಿದ್ದಾರೆ.ಚಿತ್ರದ ನಟರಾದ ಅನುಪಮ್ ಖೇರ್ ಮತ್ತು ಪರಮೀತ್ ಸೇಥಿ ಕೂಡ ಈ ಚಿತ್ರವನ್ನು ಪ್ರೀತಿಯಿಂದ ನೆನಪಿಸಿಕೊಂಡಿದ್ದು, ''ಇಂದು 25 ವರ್ಷಗಳನ್ನು ಪೂರೈಸುವ ಈ ಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆ ಇದೆ. ನಿಮ್ಮ ಪ್ರೀತಿ ನಿರಂತರವಾಗಿದೆ. ಧನ್ಯವಾದಗಳು." ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 ಚಿತ್ರದ ನಿರ್ಮಾಣ ತಂಡದ ಭಾಗವಾಗಿದ್ದ ನಟ ಉದಯ್ ಚೋಪ್ರಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಡಿಡಿಎಲ್‌ಜೆ ಸೆಟ್‌ಗಳ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.ಚಿತ್ರದ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ಖ್ಯಾತ ಬಾಲಿವುಡ್ ನೃತ್ಯ ಸಂಯೋಜಕ ಫರಾಹ್ ಖಾನ್ ಕೂಡ ಈ ಚಿತ್ರದ ನೆನಪುಗಳನ್ನು ಹಂಚಿಕೊಂಡಿದ್ದಾರೆ. “25 ವರ್ಷಗಳು ಸಂದವು ಎಂದರೆ ನಂಬಲಾಗುತ್ತಿಲ್ಲ. 

 ಒಂದು ಹಾಡನ್ನು ಚಿತ್ರದಲ್ಲಿ ಮಾಡಿದ್ದೇನೆ, ಅದು ನನ್ನ ಬತ್ತಳಿಕೆಯಲ್ಲಿ ಒಂದು ದೊಡ್ಡ ಭಾಗವಾಗಿದೆ. ಆದಿತ್ಯಚೋಪ್ರಾ ಅವರಿಗೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.  'ದಿಲ್ವಾಲೆ ದುಲ್ಹಾನಿಯನ್ ಲೆ ಜಯೆಂಗೆ'  1995 ಅಕ್ಟೋಬರ್ 20 ರಂದು ಬಿಡುಗಡೆಯಾದ ಆದಿತ್ಯ ಚೋಪ್ರಾ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಅವರ ತಂದೆ ಯಶ್ ಚೋಪ್ರಾ ನಿರ್ಮಾಪಕರಾಗಿದ್ದರು. ಶಾರೂಖ್ ಖಾನ್ ಕಾಜೋಲ್ ಅನುಪಮ್ ಖೇರ್, ಫರಿದಾ ಜಲಾಲ್, ಅಮ್ರೀಶ್ ಪುರಿ ಮತ್ತು ಪರಮೀತ್ ಸೇಥಿ ಪ್ರಮುಖ ಪಾತ್ರಗಳಲ್ಲಿದ್ದರು.ಬಾಲಿವುಡ್ ಚಿತ್ರದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಿತ್ರವಾಗಿದ್ದು, ಗಳಿಕೆಯಲ್ಲಿ ದಾಖಲೆ ಬರೆದಿರುವ ಭಾರತೀಯ ಚಿತ್ರಗಳ ಸಾಲಿಗೆ ಸೇರಿದೆ.  10 ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಅತ್ಯುತ್ತಮ ಮನರಂಜನೆ ನೀಡುವ ಉತ್ತಮ  ಜನಪ್ರಿಯ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. 

  

ಸುದ್ದಿ ಓದಿ