ಏಕಲವ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ
ಲೋಕದರ್ಶನ ವರದಿ
ರಾಣೇಬೆನ್ನೂರು 21: ಗ್ರಾಹಕರು ದೈನಂದಿನ ವ್ಯಾಪಾರ ಚಟುವಟಿಕೆಗಳಿಗೆ ಸಹಕಾರಿ ಸಂಘಗಳಿಂದ ಸಾಲ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದು ನಿವೃತ್ತ ಸಹಕಾರ ಸಂಘಗಳ ಉಪನಿಬಂಧಕ ನಾಗರಾಜ ಕುಮ್ಮೂರು ಹೇಳಿದರು.
ಅವರು ರಾಣೇಬೆನ್ನೂರಿನ ಪಂಪಾಪತಿ ಸಭಾಭವನದಲ್ಲಿ ಆಯೋಜಿಸಿದ್ದ ಏಕಲವ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿಯ 22ನೇ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸಾಮಾನ್ಯವಾಗಿ ಗ್ರಾಮೀಣ ಮತ್ತು ನಗರದ ಜನತೆಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ದೊರೆಯುವುದು ಅತೀ ವಿರಳ ಆದ್ದರಿಂದ ಸಹಕಾರಿ ಸಂಘಗಳಲ್ಲಿ ಗ್ರಾಹಕರು ವ್ಯಾಪಾರಕ್ಕೆ ಪಡೆದ ಸಾಲದ ಮೊತ್ತವನ್ನು ನಿಗಧಿತ ಸಮಯದಲ್ಲಿ ಭರಿಸಿ ತಾವು ಕೂಡ ಆರ್ಥಿಕತೆಯಲ್ಲಿ ಮುಂದಾಗಿ ಸಂಘವನ್ನು ಸಹ ಬೆಳೆಸಲು ಸಹಕರಿಸಬೇಕೆಂದು ಸದಸ್ಯರಿಗೆ ಕರೆ ನೀಡಿದರು.
ಮಂಡ್ಯ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ತಳವಾರ ಮಾತನಾಡುತ್ತಾ ವಿಕಲಚೇತನರಿಗೆ ಸರಕಾರದ ಶೇರು ಸಹಾಯ ಧನದ ಸದಸ್ಯತ್ವದ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಾ ವಿಕಲಚೇತನರು ಸ್ವಯಂ ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ದಿ ಹೊಂದುವ ಜೊತೆಗೆ ಕೇಂದ್ರ ಸರಕಾರದ ವಿಶಿಷ್ಠ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಎಲ್ಲರೂ ಪಡೆದುಕೊಳ್ಳಿ ಸಮುದಾಯದಿಂದ ಸರಕಾರದ ಸಹಾಯಧನ ಪಡೆಯಲು ಮುಂದಾಗಿ ಎಂದು ತಳವಾರ ಹೇಳಿದರು.
ಹಾವೇರಿ ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಾಹಕ ಶರಣಬಸಪ್ಪ ಕಾಟ್ರಳ್ಳಿ ಮಾತನಾಡಿ ಸಂಘದಲ್ಲಿ ಅನುತ್ಪಾದಕ ಆಸ್ತಿ ಹೆಚ್ಚಾಗದಂತೆ ಸಂಘದಲ್ಲಿನ ಎಲ್ಲಾ ಸಾಲಗಾರರು ಸಾಲಗಳನ್ನು ಅವಧಿಯೊಳಗೆ ಮರುಪಾವತಿಸದೇ ಇದ್ದರೆ ಸಂಘವು ರೋಗಗ್ರಸ್ಥವಾಗುತ್ತದೆ ಕಾರಣ ಅವಧಿಯೊಳಗೆ ಸಾಲವನ್ನು ಮರುಪಾವತಿಸಲು ಸೂಚಿಸಿದರು ಇದರಿಂದ ಸಂಘವು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿಂಗಪ್ಪ ಹಳ್ಳೆಳ್ಳೆಪ್ಪನವರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗೌರಮ್ಮ ಕರೇಭರಮಣ್ಣನವರ ನಿರ್ದೇಶಕರಾದ ಹನುಮಂತಪ್ಪ ಮೀನಕಟ್ಟಿ ರವೀಂದ್ರಗೌಡ ಪಾಟೀಲ ಆನಂದಪ್ಪ ಮಾಗೋಡ ಹನುಮಂತಪ್ಪ ಅಮರಾವತಿ ಚಿಕ್ಕಪ್ಪ ಹುಣಸಿಕಟ್ಟಿ ಕರಿಯಪ್ಪ ಲೆಂಕಣ್ಣನವರ ಮಾಲತೇಶ ಕಮ್ಮಾರ ಕುಮಾರ ಸಣ್ಣಬೊಮ್ಮಜ್ಜಿ ರಾಮಪ್ಪ ಗೊಂದ್ಯಾಳಿ ಪುಷ್ಪಲತಾ ದೋಣಗೊಂದಿ ಸಿ.ಕೆ. ಪಾರ್ವತೇರ ಗುಡ್ಡಪ್ಪ ಕನ್ನಜ್ಜನವರ ನಾಗಪ್ಪ ಕಾಡಜ್ಜಿ ಹೊನ್ನಪ್ಪ ಬಾದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಕನ್ನಾಯ್ಕನವರ ಲತಾ ಹೊಸಮನಿ ಎಸ್.ಆರ್. ಸರ್ಪಣಣನವರ ಬಸವರಾಜ ಮಠದ ವಿನುತಾ ಎಂ.ಸಿ. ಹಾಗೂ ಪಿಗ್ಮಿ ಏಂಜೆಂಟರು ಸಭೆಯಲ್ಲಿ ಹಾಜರಿದ್ದರು,