ಮನರಂಜನೆ

ಆಸ್ಪತ್ರೆಯಲ್ಲಿರೋದು ನಕಲಿ ಅಮಿತಾಭ್ ಇರ್ಬೇಕು : ಅಭಿಷೇಕ್ ಬಚ್ಚನ್

ಆಸ್ಪತ್ರೆಯಲ್ಲಿರೋದು ನಕಲಿ ಅಮಿತಾಭ್ ಇರ್ಬೇಕು  : ಅಭಿಷೇಕ್ ಬಚ್ಚನ್

ಮುಂಬೈ, ಅ 27: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ  ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಗ್ ಬಿ     ಗಾಯಗೊಂಡು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ವರದಿಗಳು ಆಗಿದ್ದವು. ಆದರೆ, 'ಇದು ಸುಳ್ಳು' ಎಂದು ಅಮಿತಾಭ್ ಬಚ್ಚನ್ ಅವರ ಪುತ್ರ  ಅಭಿಷೇಕ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಬಾಲಿವುಡ್ ಹಂಗಾಮ ಎಂಬ ವೆಬ್‌ಸೈಟ್‌ಗೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಬಚ್ಚನ್ ''ಅವರು ನನ್ನ ಮುಂದೆ ಕುಳಿತುಕೊಂಡಿದ್ದಾರೆ. ಬಹುಶಃ ಆಸ್ಪತ್ರೆಯಲ್ಲಿರುವುದು ಅವರ ನಕಲಿ ವ್ಯಕ್ತಿ ಇರಬೇಕು'' ಎಂದು ಅಭಿಷೇಕ್ ತಿಳಿಸಿದ್ದಾರೆ ಅಭಿಷೇಕ್ ಬಚ್ಚನ್ ಹಾಗೂ ಆರಾಧ್ಯ ಬಚ್ಚನ್ ಅವರಿಗೆ ಕೊರೋನಾ  ತಗುಲಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು.ನಾಗರಾಜ್ ಮಂಜುಲೆ ಅವರ 'ಜುಂಡ್' ಮತ್ತು ಅಯಾನ್ ಮುಖರ್ಜಿ ಅವರ' ಬ್ರಹ್ಮಾಸ್ತ್ರ' ಹಾಗೂ 'ಚೆಹ್ರೆ' ಎಂಬ ಚಿತ್ರದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ. 

             


ಸುದ್ದಿ ಓದಿ