ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ: ಕೊಲೆ ಎನ್ನುವುದನ್ನು ತಳ್ಳಿಹಾಕಿದ ಏಮ್ಸ್
ನವದೆಹಲಿ, ಅಕ್ಟೋಬರ್ 3:ಬಾಲಿವುಡ್ ತಾರೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆಗಾಗಿ ನೇಮಿಸಲಾಗಿದ್ದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ವಿಧಿವಿಜ್ಞಾನ ವೈದ್ಯಕೀಯ ಮಂಡಳಿ, ದಿವಂಗತ ನಟ ಕೊಲೆಯಾಗಿದ್ದಾನೆ ಎಂಬುದನ್ನು ತನ್ನ ವರದಿಯಲ್ಲಿ ತಳ್ಳಿಹಾಕಿದೆ.
ರಜಪೂತ್ ಅವರನ್ನು ಕತ್ತು ಹಿಸುಕಿ ಅಥವಾ ವಿಷ ಬೆರೆಸಿ ಸಾಯಿಸಿರುವ ಸಾಧ್ಯತೆಗಳನ್ನು ತಳ್ಳಿಹಾಕಿದ ಏಮ್ಸ್ ವೈದ್ಯರ ತಂಡ, 34 ವರ್ಷದ ಜನಪ್ರಿಯ ನಟನ ಸಾವಿಗೆ ಕಾರಣವನ್ನು ಪರಿಶೀಲಿಸಿದೆ. ರಜಪೂತ್ ಮೃತದೇಹ ಜೂನ್ 14 ರಂದು ಆತನ ಮುಂಬೈ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿತ್ತು.
ಮೃತ ನಟನ ಮೃತದೇಹ ಅಥವಾ ಬಟ್ಟೆಗಳ ಮೇಲೆ ಯಾವುದೇ ಸಂಘರ್ಷದ ಇಲ್ಲವೇ ಜಗಳದ ಸೂಚಿಸುವ ಕುರುಹು ಕಂಡು ಬಂದಿಲ್ಲ. ಆತ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಏಮ್ಸ್ ತನ್ನ ಕಾನೂನು ಸಂಬಂಧಿತ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಈ ಕುರಿತ ತನ್ನ ವರದಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದೆ. ಈ ಹಿಂದೆ, ಸಾವಿನ ಬಗ್ಗೆ ಮರಣೋತ್ತರ ಪರೀಕ್ಷೆ ನಡೆಸಿದ ಮುಂಬೈ ಪೊಲೀಸರು, ನೇಣು ಹಾಕಿಕೊಂಡಿದ್ದರಿಂದ ಉಸಿರಾಡದೆ ಸಾವನ್ನಪ್ಪಿದ್ದಾನೆ ಎಂದು ತಮ್ಮ ವರದಿಯಲ್ಲಿ ತಿಳಿಸಿದ್ದರು.
ಸುಶಾಂತ್ ನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿತ್ತು. ಅಲ್ಲದೆ, ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕೆಂದು ಒತ್ತಾಯಿಸಿತ್ತು.