ಸಾರ್ವಜನಿಕ ಕುಂದುಕೊರತೆ ಆಲಿಸಿದ ಎಸಿ ರಾಹುಲ್ ಶಿಂಧೆ
ಇಂಡಿ: ಎಸಿ ರಾಹುಲ್ ಶಿಂಧೆಯವರು ಬುಧವಾರ ಪಟ್ಟಣದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದರು.
ಮಳೆಯಾಗುತ್ತಿರುವದರಿಂದ ಅಲ್ಲಲ್ಲಿ ರೋಗ ಹರಡದಂತೆ ಮುನ್ನಚ್ಚರಿಕೆ ವಹಿಸುವ ಕುರಿತು, ಬಡಾವಣೆಗಳಲ್ಲಿ ಕಸವಿಲೆವಾರಿ, ಸ್ವಚ್ಛತೆ, ಕುಡಿಯುವ ನೀರಿನ ಸರಬರಾಜು, ಪಾಯಿಪ್ ಒಡೆದು ನೀರಿನ ಸರಬರಾಜಿನಲ್ಲಿ ತೊಂದರೆ, ನೀರು ಬಾರದೇ ಇರುವ ಕುರಿತು ಚರ್ಚಿಸಿದರು.
ಪುರಸಭೆಗೆ ಸಾರ್ವಜನಿಕರು ಕಟ್ಟಬೇಕಾದ ನೀರಿನ ಕರ ನಿವಾಸಿಗಳು ಮನೆಯಿಂದಲೇ ಮಾಡಬಹುದು ಇಲ್ಲವೆ ಪುರಸಭೆಯಲ್ಲಿ ಬ್ಯಾಂಕ ಕೌಂಟರ್ ಪ್ರಾರಂಭಿಸಿದ್ದು ಅಲ್ಲಿ ಬಂದು ಪಾವತಿಸಬಹುದು. ಈಗ ಮೊದಲಿನ ಹಾಗೆ ಚಲನ ತೆಗೆದುಕೊಂಡು ಹೋಗಿ ಭಾರತೀಯ ಸ್ಟೇಟ್ ಬ್ಯಾಂಕ ಆಗಲೀ ಬೇರೆ ಬ್ಯಾಂಕಿಗಳಿಗಾಗಿ ಆಗಲೀ ಕಟ್ಟುವ ಅವಶ್ಯಕತೆ ಇಲ್ಲ. ಆನ್ ಲೈನ್ ಫೋನ್ ಪೇ, ಗೂಗಲ್ ಪೇ, ಭೀಮ್ ಆಫ್ ನಿಂದಲೂ ನೀರಿನ ಕರ ಕಟ್ಟಬಹುದು ಎಂದರು.
ಸಾರ್ವಜನಿಕರು ನೀರಿನ ಕರದ ಹಾಗೆ ಮನೆಯ ಕರ, ವಾಣಿಜ್ಯ ಮಳಿಗೆಗಳ ಕರ ಸಹಿತ ತುಂಬುವ ವ್ಯವಸ್ಥೆ ಮಾಡಲು ಕೇಳಿಕೊಂಡರು.
ಸಾರ್ವಜನಿಕ ಪರವಾಗಿ ಡಾ. ಪರಮಾನಂದ ಬಿರಾದಾರ ರವರು ಎಸಿಯವರು ತೆಗೆದುಕೊಂಡ ಕ್ರಮಕ್ಕೆ ಸ್ವಾಗತಿಸಿ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಹೇಳಿ ಸಾರ್ವಜನಿಕರ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಮಹಾದೇವಿ ಖೇಡಗಿ, ಸಿದ್ದಪ್ಪ ಕಲ್ಯಾಣಿ, ವಿಠ್ಠಲ ಬಿರಾದಾರ ಎಸಿಯವರ ಕಾರ್ಯ ಪ್ರಶಂಸಿಸಿ ತಮ್ಮ ಕುಂದುಕೊರತೆ ಹಂಚಿಕೊಂಡರು.
ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಪರಿಸರ ಅಭಿಯಂತರ ಲಕ್ಷ್ಮೀಶ, ಕಿರಿಯ ಅಭಿಯಂತರ ಅಶೋಕ ಚಂದನ, ಹುಚ್ಚಪ್ಪ ಶಿವಶರಣ ಮತ್ತಿತರಿದ್ದರು.