ಶಿಗ್ಗಾವ್

ಮಹಿಳೆಯು ಈಗ ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾಳೆ: ಶಕುಂತಲಾ ದುಂಡಿಗೌಡ್ರ

ಮಹಿಳೆಯು ಈಗ ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾಳೆ: ಶಕುಂತಲಾ ದುಂಡಿಗೌಡ್ರ

ಶಿಗ್ಗಾವಿ 16:  ಮಹಿಳೆಯು ಈಗ ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದ್ದಾಳೆ, ತಮ್ಮದೇ ಆದ ಸಾಮಾಜಿಕ  ಸೇವೆಯಲ್ಲಿ ಮಹಿಳೆ ನಿರತರಾಗಿದ್ದು ಎಲ್ಲ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾರೆ ಎಂದು ಕರ್ನಾಟಕ ಲೋಕಸೇವಾ ಆಯೋಗ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು. 

ಪಟ್ಟಣದ ದ್ಯಾಮವ್ವದೇವಿ ದೇಸ್ಥಾನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಈ ಮೊದಲು ಅಡುಗೆ ಮನೆಗೆ ಸೀಮಿತವಾದ ಪರಿಸ್ಥಿತಿಯಲ್ಲಿ ಈಗ ಮಹಿಳೆ ದಿಟ್ಟತನದಿಂದ ಬೆಳೆವಣಿಗೆಯಾಗುತ್ತಿದ್ದಾಳೆ , ಸತಿ ಸಹಗಮನ ಪದ್ದತಿಯಂತಹ ಪರಿಸ್ಥಿತಿಯಿಂದ ಮೇಲೆ ಬಂದಿದ್ದು ಈಗ ಆ ಮಹಿಳೆಯೇ ಮನೆಗೆ ಮುಖ್ಯ ಯಜಮಾನಿಯಾಗಿದ್ದಾಳೆ, ಹೆಣ್ಣು ಹುಟ್ಟಿದಾಗ ಅಸಮಾದಾನಗೊಳ್ಳುವ ಸ್ಥಿತಿಯಿಂದ ಹೊರ ಬರಲಾಗಿದೆ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹಿಳೆಯು ತಾಯಿಯಾಗಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ, ಸುಧಾಮೂರ್ತಿಯವರು ನಮ್ಮ ಶಿಗ್ಗಾವಿಯವರು ಅವರೊಬ್ಬ ಮಹಿಳೆಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎಂದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನ ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ,   ಸಂಘಗಳು ಬಹಳಷ್ಟಿದೆ ಆದರೆ ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಸಂಘಗಳು ವಿರಳ, ಒಂದು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಬಹಳಷ್ಟು ಮುಖ್ಯ, ಮೊದಲು ಕೀಳು ಮಟ್ಟದಲ್ಲಿ ಇದ್ದ ಮಹಿಳೆ ಇಂದು ಗಂಡಸರಿಗೆ ಸಮಾನವಾಗಿ ಬಂದಿದ್ದಾಳೆ ಇದು ಮಹಿಳೆಯ ಶಕ್ತಿಯಾಗಿದೆ, ಪುರಷ ಪ್ರಧಾನ ಕಾಲದಲ್ಲಿಯೂ ಮಹಿಳೆಗೆ ಸ್ಥಾನಮಾನ ನೀಡಿದ ಕುಟುಂಬಗಳು ಈಗ ಉನ್ನತ ಸ್ಥಾನದಲ್ಲಿವೆ, ಮಹಿಳೆಯರು ಉನ್ನತ ನಿರ್ಧಾರ ಕೈಗೊಳ್ಳುವುದನ್ನ ಕಲಿಯಬೇಕು, ಇಂದು ಮಕ್ಕಳಿಗೆ ಸಂಸ್ಕಾರ ಕಡಿಮೆಯಾಗುತ್ತಿದ್ದು ಮಹಿಳೆಯರು ಮನೆಯಲ್ಲಿ ಸಂಸ್ಕಾರ ನೀಡಿ, ಮಕ್ಖಳಿಗೆ ಬುದ್ದಿ, ನಿದ್ದಿ ಹಾಗೂ ಮುದ್ದಿ ನೀಡಿ ಜೀವನದಲ್ಲಿ ಗೆದ್ದಿ ಎಂದು ಮಾರ್ಮಿಕವಾಗಿ ನುಡಿದರು. 

ಇದೇ ಸಂದರ್ಭದಲ್ಲಿ ಇದಕ್ಕೂ ಮೊದಲು ರಂಗೋಲಿ, ವೇಷಭೂಷಣ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು. 

ಪುರಸಭೆ ಸದಸ್ಯ ರಮೇಶ ವನಹಳ್ಳಿ, ಗಾಣಿಗ ಶ್ರೀ ಶಕ್ತಿ ಸಂಘದ ಅಧ್ಯಕ್ಷೆ ಶಕುಂತಲಾ ಗಾಣಿಗೇರ, ಶ್ರೀ ಗಾಯತ್ರಿ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಸುಮಂಗಲಾ ಸಾಲಿಗೌಡ್ರ . ಈ ಸಂದರ್ಭದಲ್ಲಿ ಸಂಘದ ಸದಸ್ಯರು ಸೇರಿದಂತೆ ಹಾಗೂ ದೇಸಾಯಿಗಲ್ಲಿ ಹಾಗೂ ಜಯನಗರದ ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಶೃತಿ ಆರ್ ಬೆಳಮಕರ್, ರಶ್ಮೀ ಕೀರ್ತಿಕುಮಾರ ಕುರ್ಸಾಪೂರ ಕಾರ್ಯಕ್ರಮ ನಿರ್ಣಾಯಕರಾಗಿ ನಂತರ ನಿರ್ವಹಿಸಿದರು. 


ಸುದ್ದಿ ಓದಿ