ಅಪರಿಚಿತ ವಾಹನ ಡಿಕ್ಕಿ ಸ್ಥಳದಲ್ಲಿಯೇ ಮಹಿಳೆ ಸಾವು
ಶಿಗ್ಗಾವಿ 23: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದ ಮುಂಬಾಗದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮಂಗಳವಾರ ಬೆಳಿಗ್ಗೆ ಜರುಗಿದೆ.
ಮೃತ ಮಹಿಳೆಯನ್ನು ಶಿಗ್ಗಾವಿ ತಾಲೂಕಿನ ಕುಂದೂರ ಗ್ರಾಮದ (40) ವರ್ಷದ ರತ್ನವ್ವ ಸಂಗಪ್ಪ ಸಂಶಿ ಎಂದು ಗುರುತಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ದಾಟುವಾಗ ಈ ಘಟನೆ ಜರುಗಿದೆ ಎನ್ನಲಾಗಿದ್ದು ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೊರಟ್ಟಿದ್ದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮಹಿಳೆಗೆ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾಳೆ ಡಿಕ್ಕಿ ಪಡಿಸಿದ ವಾಹನ ಚಾಲಕ ಪರಾರಿಯಾಗಿದ್ದಾನೆ, ಸ್ಥಳಕ್ಕೆ ಶಿಗ್ಗಾವಿ ಪೊಲೀಸರು ಬೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.