ಸೇತುವೆ ಮೇಲಿಂದ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು
ಬೈಲಹೊಂಗಲ 26: ಬ್ರಿಜ್ ಕಾಮಗಾರಿ ನಡೆಯುತ್ತಿರುವ ಸೇತುವೆ ಮೇಲಿಂದ ದ್ವಿಚಕ್ರ ವಾಹನ ಸವಾರನು ಬಿದ್ದು ಮೃತಪಟ್ಟ ಘಟನೆ ತಾಲೂಕಿನ ವನ್ನೂರ ಗ್ರಾಮದ ಸನಿಹ ಶನಿವಾರ ಸಂಜೆ ಸಂಭವಿಸಿದೆ.
ಮೃತನನ್ನು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ನಿವಾಸಿಯಾಗಿರುವ ಯಲ್ಲಪ್ಪ ಮಹೇಶ ಪಾಟೀಲ( 23) ಎಂದು ಗುರುತಿಸಲಾಗಿದೆ. ಈತನು ಭಾರತ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದು ರಾತ್ರಿ 7 ಗಂಟೆಗೆ ಕೆಲಸ ಮುಗಿಸಿಕೊಂಡು ಜಮನಾಳ ಗ್ರಾಮಕ್ಕೆ ತೆರಳುವಾಗ ಘಟನೆ ಸಂಭವಿಸಿದೆ.
ತಾಲೂಕಿನ ಮೇಕಲಮರ್ಡಿ ಗ್ರಾಮದ ಸನಿಹ ಚಚಡಿ ಎತ ನೀರಾವರಿಯ ಕಾಲುವೆಯ ಕಾಮಗಾರಿ ಪ್ರಗತಿಯಲ್ಲಿದ್ದು ಬ್ರಿಜ್ ಕಾಮಗಾರಿಯು ನಡೆಯುತ್ತಿದ್ದು ಕಾಮಗಾರಿಯ ಗುತ್ತಿಗೆದಾರರು ಯಾವುದೇ ರೀತಿಯ ಕಾಮಗಾರಿಯ ನಡೆಯುತ್ತಿರುವ ನಿಯಮಗಳನ್ನು ಪಾಲನೆ ಮಾಡಿಲ್ಲ. ಬ್ರಿಜ್ ಹತ್ತಿರ ಯಾವುದೇ ಸೂಚನೆ ಫಲಕಗಳನ್ನು ಅಳವಡಿಸಿಲ್ಲ. ರಸ್ತೆಯ ಮೇಲೆ ಮಾರ್ಗಸೂಚಿಗಳನ್ನು ಬಳಸದೆ ಇರುವ ಕಾರಣ ರಾತ್ರಿ ಸಂಚರಿಸುವಾಗ ತಿಳಿಯದೆ ನೇರವಾಗಿ ಬೈಕ್ಕಾ ಸವಾರನು ಬ್ರಿಜ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ, ಕಾಮಗಾರಿಯ ಗುತ್ತಿಗೆದಾರರು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೇ ಈ ಅಪಘಾತಕ್ಕೆ ಹೊಣೆ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೇಸರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.