ಶಿಗ್ಗಾವ್

ಪ್ರಬಲ ಬಿಜೆಪಿ ಟಿಕೇಟ ಆಕಾಂಕ್ಷಿ, ತಪ್ಪಿದೆರೆ ಹಿರಿಯ ಮಾರ್ಗದರ್ಶನದಲ್ಲಿ ಮುಂದಿನ ನಡೆ

ಪ್ರಬಲ ಬಿಜೆಪಿ ಟಿಕೇಟ ಆಕಾಂಕ್ಷಿ, ತಪ್ಪಿದೆರೆ ಹಿರಿಯ ಮಾರ್ಗದರ್ಶನದಲ್ಲಿ ಮುಂದಿನ ನಡೆ

ಶಿಗ್ಗಾವಿ 13: ಮಾಜಿ ಮುಖ್ಯ ಮಂತ್ರಿ ಹಾಲಿ ಹಾವೇರಿ-ಗದಗ ಲೋಕಸಭಾ ಸದಸ್ಯ ಶಿಗ್ಗಾವಿ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ದಿಸಲು ಪ್ರಭಲ ಆಕಾಂಕ್ಷಿಯಾಗಿದ್ದು, ಬಿಜೆಪಿ ವರಿಷ್ಟರು ಅವಕಾಶ ನೀಡುವ ವಿಶ್ವಾಸವಿದೆ ಎಂದು ಪುರಸಭೆ ಸದಸ್ಯ, ಲ್ಯಾಂಡ ಲಾರ್ಡ ಸಿದ್ದಾರ್ಥಗೌಡ ಪಾಟೀಲ ಹೇಳಿದರು. 

ಪಟ್ಟಣದ ಅವರ ಕಲ್ಯಾಣ ಮಂಟಪದ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕಿನ ಗಣ್ಯರು, ಮತ್ತು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನ ಬುದ್ದಿ ಜೀವಿಗಳು ಈ ಉಪಚುನಾವಣೆಯಲ್ಲಿ ಸ್ಥಳಿಕರಿಗೆ ಆಧ್ಯತೆ ನೀಡುವಂತೆ ಬಿಜೆಪಿ ಮೇಲೆ ಒತ್ತಡ ಹೇರುತ್ತಿದ್ದು, ವೈಯಕ್ತಿಕವಾಗಿ ಕ್ಷೇತ್ರದಲ್ಲಿ ಬಿಜೆಪಿಪರ ಸಾಕಷ್ಟು ಕೆಲಸಾ ಮಾಡುತ್ತಾ ಬಂದಿದ್ದೇನೆ. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿಯವರ ನಾಯಕತ್ವದಲ್ಲಿ ಅವರ ಚುನಾವಣೆಯಲ್ಲಿ, ಮತ್ತು ಅವರ ಅಭಿವೃದ್ದಿ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಕೆಲಸ ಮಾಡಿರುವ ಅನುಭವ ಇರುವುದರಿಂದ ಅವರ ಗಮನಕ್ಕೆ ತಂದಿರುವಂತೆ ಮುಂಬರುವ ಉಪಚುನಾವಣೆಯಲ್ಲಿ ನಾನೂ ಪ್ರಭಲ ಟಿಕೇಟ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಟರು ಅವಕಾಸ ಕಲ್ಪಿಸಿದರೆ ಕ್ಷೇತ್ರದ ಜನತೆ ಆಶೀರ್ವಾದ ಪಡೆದು ಬಸವರಾಜ ಬೊಮ್ಮಾಯಿಯವರ ಅಭಿವೃದ್ದಿ ಕಾರ್ಯಗಳನ್ನು ಮುಂದುವರೆಸಿ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅವಿರತ ಶ್ರಮಿಸುತೇನೆ. ಒಂದು ವೇಳೆ ಟಿಕೇಟ ಕೈ ತಪ್ಪಿದಲ್ಲಿ ತಾಲೂಕಿನ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಅವರು ತಿಳಿಸಿದರು. 

ಈ ಸಂದರ್ಭದಲ್ಲಿ ಸಣ್ಣಪ್ಪ ಬುಳ್ಳಕ್ಕನವರ, ಸಹದೇವಪ್ಪಾ ಕಬನೂರ, ಪ್ರಕಾಶಸ್ವಾಮಿ ಹಿರೇಮಠ, ಮಲ್ಲಯ್ಯಸ್ವಾಮಿ ಹಿರೇಮಠ, ಶಂಬಣ್ಣಾ ಹಾವೇರಿ, ಟಿವಿ ಸುರ್ಗಿಮಠ,  ಚನ್ನಪ್ಪಾ ಮೋಟೆಪ್ಪನವರ, ಬಸವರಾಜ ಹಾವೇರಿ, ಉಳವಪ್ಪಾ ಹೊನ್ನಣ್ಣನವರ, ಸುರೇಶಬಾಬು ದೇಸಾಯಿ, ಶಂಕರಗೌಡ ರು ಪಾಟೀಲ, ರಮೇಶ ವನಹಳ್ಳಿ, ಮಾಲತೇಶ ಯಲಿಗಾರ, ಶ್ಯಾಬಾಳ, ಚಂದ್ರು ಜವಳಿ, ಕುಮಾರ ಹೆಸರೂರ, ಮಾಲತೇಶ ಮಲ್ಲಾಡದ. ಸಂತೋಷ ಮೊರಬದ. ರಾಜಣ್ಣಾ ಮಾಮಲೆದೇಸಾಯಿ, ಸುಭಾಸ ನೇಮಣ್ಣವರ, ಪ್ರವಿಣ ಶಿ. ಬನ್ನಿಕೊಪ್ಪ, ಮಲ್ಲಿಕಾರ್ಜುನ ಬನ್ನಿಕೊಪ್ಪ, ಶಿವಯೋಗಿ ಜವಳಿ, ಶಿವಪ್ಪಾ ಗಂಜಿಗಟ್ಟಿ, ಫಕ್ಕೀರಾ​‍್ಪ ಕುಂದೂರ, 

ಭಾಕ್ಷ ಸುದ್ದಿ: ಸಿದ್ದಾರ್ಥಗೌಡ ಪಾಟೀಲ ಆಯೋಜಿಸಿದ್ದ ಬೆಂಬಲಿಗರ ಸಭೆಯಲ್ಲಿ ಕ್ಷೇತ್ರದ ಬಹುತೇಕ ಸಮಾಜಗಳ ಪ್ರಮುಖರು, ಪಟ್ಟಣದ ಗಣ್ಯರು ಭಾಗವಹಿಸುವ ಮೂಲಕ ಕ್ಷೇತ್ರದ ಉಪಚುನಾವಣೆಯ ಕಣದ ಬಿಜೆಪಿ ಪಾಳಯದಲ್ಲಿ ಅನೀರೀಕ್ಷಿತ ಹೊಸ ಸಂಚಲನ ಮೂಡಿದೆ. 


ಸುದ್ದಿ ಓದಿ