ಶಿಗ್ಗಾವ್

ರುದ್ರ ಭೂಮಿ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಕಾರ್ಯಕ್ರಮ

ರುದ್ರ ಭೂಮಿ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಕಾರ್ಯಕ್ರಮ

ಶಿಗ್ಗಾವಿ 13 : ರುದ್ರ ಭೂಮಿ ಹಾಗೂ ಸ್ಮಶಾನಗಳ ಕೊರತೆ ನೀಗಿಸಲು ಅವುಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ವಾಗತಾರ್ಹ. ಸ್ಮಶಾನಗಳ ಕೊರತೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಪ್ರಸಕ್ತ ಗ್ರಾಮ ಪಂಚಾಯಿತಿ, ಗ್ರಾಮ ಹಾಗೂ ಪಟ್ಟಣದಲ್ಲಿರುವ ರುದ್ರಭೂಮಿ ಸ್ಮಶಾನ ಮಾಹಿತಿ ಪಡೆದುಕೊಂಡು ಸರ್ವೆ ಹಾಗೂ ಹದ್ದುಬಸ್ತು ಮಾಡಿ ಸುಪ್ತ ದಾಖಲಾತಿ ಒದಗಿಸುವ ವಿಶೇಷ ಕಾರ್ಯಕ್ರಮ ಕೈಗೊಂಡಿದ್ದು ಶಿಗ್ಗಾವಿ ಪಟ್ಟಣಕ್ಕೆ ಸಂಬಂಧಿಸಿದಂತೆ ವಿವಿಧ ಸ್ಮಶಾನಗಳ ಆಸ್ತಿ ಸರ್ವೆ ನಂಬರ್ ಹಾಗೂ ವಿಸ್ತೀರ್ಣ ಮಾಹಿತಿ ನೀಡುವಂತೆ ಶಿಗ್ಗಾವಿ ತಶೀಲ್ದಾರ್ ಹಾಗೂ ದಂಡಾಧಿಕಾರಿಗಳಿಗೆ ಅವರಿಗೆ ಸಾಮಾಜಿಕ ಹೋರಾಟಗಾರ ಮಂಜುನಾಥ ಮಣ್ಣಣ್ಣವರ ಮನವಿ ಪತ್ರ ಸಲ್ಲಿಸಿ ಮಾಹಿತಿ ಕೇಳಿದ್ದಾರೆ.  

ಈ ಸಂದರ್ಭದಲ್ಲಿ ನ್ಯಾಯವಾದಿ ಹಜರೇಸಾಬ್  ಬೆಳಗಲಿ, ಹಜಾರೆಸಾಬ್ ಉಪಸ್ಥಿತರಿದ್ದರು. 


ಸುದ್ದಿ ಓದಿ