ಶಿಗ್ಗಾವ್

ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಬೀದಿ ನಾಯಿಗಳನ್ನು ನಿಯಂತ್ರಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಶಿಗ್ಗಾವಿ 09: ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಹಾಗು ಸಾಕುಪ್ರಾಣಿಗಳಾದ ಕೋಳಿ, ಕುರಿಗಳ ಮೇಲೆ ದಾಳಿ ಮಾಡುತ್ತಲಿವೆ. ಕೂಡಲೇ ಅವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅವರಿಗೆ ಮನವಿ ಅರ​‍್ಿಸಿದರು. 

ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿಯೇ ಮಟನ್, ಚಿಕನ್ ಸ್ಟಾಲ್‌ಗಳು ವ್ಯಾಪಾರ ವಹಿವಾಟು ಮಾಡುತ್ತಲಿದ್ದು, ಮಾಂಸದ ಆಸೆಗಾಗಿ ಬೀದಿನಾಯಿಗಳ ಗುಂಪು ಸಾರ್ವಜನಿಕರನ್ನು ಲೆಕ್ಕಿಸದೇ ಒಂದೊಕ್ಕೋಂದು ಕಚ್ಚಾಡುತ್ತಾ ಮೈ ಮೇಲೆ ಎರಗುತ್ತಲಿವೆ. ಮಹಿಳೆಯರು ಮಕ್ಕಳು ಮರಿಗಳೊಂದಿಗೆ ಮಾರುಕಟ್ಟೆಗೆ ಹೋದಾಗ ಮಕ್ಕಳ ಮೈ ಮೇಲೆ ಎರಗುತ್ತಲಿವೆ. ಹೀಗಾಗಿ ಸಾರ್ವಜನಿಕರು ಮಾರುಕಟ್ಟೆಯಲ್ಲಿ ಭಯದಿಂದಲೇ ಸಂಚರಿಸುವಂತಾಗಿದೆ. ಕಾರಣ ಪುರಸಭೆಯವರು ಬೀದಿ ನಾಯಿಗಳನ್ನು ಹಿಡಿಸಿ ದೂರದ ಕಾಡಿಗೆ ಬೀಡುವ ಕೆಲಸಮಾಡಬೇಕು. ಸಂತಾನ ಹರಣ ಚುಚ್ಚುಮದ್ದು ನೀಡಿ, ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡು ಸಾರ್ವಜನಿಕರು ಮಾರುಕಟ್ಟೆ, ಬೀದಿಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. 

ಈ ಸಂದರ್ಭದಲ್ಲಿ ಮಂಜುನಾಥ ಕೂಲಿ, ಬಾಪುಗೌಡ್ರ ಪಾಟೀಲ, ನಾಗಪ್ಪ ಬಳಿಗಾರ, ರವಿ ಮಾಳಗಿಮನಿ, ಗಂಗಾಧರ ಶೆಟ್ಟರ, ಮೋಹನ ಶೆಟ್ಟರ, ಗದಿಗೇಪ್ಪ ಬಳ್ಳಾರಿ, ಸುಮನ್ ಅಂಗಡಿ, ಸೋಮಣ್ಣ ಕುರಿ, ಓಂಪ್ರಕಾಶ ಅಂಗಡಿ, ಸುರೇಶ ಶೆಟ್ಟರ, ಆನಂದ ವಳಗೇರಿ, ಶಿವು ನಾಗನೂರ, ಚಂದ್ರು ರಾಯ್ಕರ್, ವಿನಾಯಕ ಸುಲಾಖೆ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ