ಹೊಸ ಟೆಂಡರ್ ಕರೆದು ಪಾರದರ್ಶಕತೆ ಮೆರೆಯುವಂತೆ ಸಚಿವರಿಗೆ ಮನವಿ
ಲೋಕದರ್ಶನ ವರದಿ
ರಾಣೇಬೆನ್ನೂರು 25: ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ತುಂಗಭದ್ರಾ ನದಿ ಪಾತ್ರದ ಅವಧಿ ಮುಗಿಯುತ್ತಿರುವ ಈಗಿರುವ ಮರಳು ಗಣಿಗಾರಿಕೆ ಗುತ್ತಿಗೆದಾರರ ಅವಧಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ಕೋವಿಡ್ ನಂತ ನೆಪ ಹೇಳಿ ಹಳಬರನ್ನೇ ಮುಂದುವರಿಸದೆ ಹೊಸದಾಗಿ ಮೀಸಲಾತಿ ಆಧಾರದಲ್ಲಿ ಟೆಂಡರ್ ಕರೆದು ಪಾರದರ್ಶಕತೆ ಮತ್ತು ನಿಯಮಾವಳಿಗಳನ್ನ ಚಾಚು ತಪ್ಪದೆ ಪಾಲಿಸಬೇಕು ಮತ್ತು ಈಗಿರುವ ಗುತ್ತಿಗೆದಾರರಿಂದ ಕೋವಿಡ್ ಸಂದರ್ಭ ಮತ್ತು ಇತರೆ ದಿನಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟಿ ಕೋಟಿ ಪಂಗನಾಮ ಹಾಕಿರುವ ಇವರ ಮೇಲೆ ತನಿಖೆ ನಡೆಸಿ ಸರ್ಕಾರಕ್ಕೆ ಬರಬೇಕಾದ ರಾಯಲ್ಟಿಯನ್ನು ವಸೂಲಿ ಮಾಡಬೇಕು. ನಿರ್ಲಕ್ಷಿಸಿದರೆ ರಸ್ತೆಗಿಳಿದು ಪ್ರತಿಭಟನೆ ಮಾಡಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನರವರಿಗೆ ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ, ಈರಣ್ಣ ಹಲಗೇರಿ ಮನವಿ ಅರ್ಪಿಸಿದರು.
ಅವರು ಇಂದು ಉತ್ತರ ಕರ್ನಾಟಕದ ಹೆಬ್ಬಾಗಿಲು ಚಳಗೇರಿ ಟೋಲ್ ಹತ್ತಿರ ಸಚಿವರನ್ನು ತಡೆದು ಮನವಿ ಅರ್ಪಿಸಿ ರೈತರ ಪರವಾಗಿ ನಿಲುವು ತಾಳುವಂತೆ ಸಚಿವರಿಗೆ ಹಸಿರು ಶಾಲು ಹೊದಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ ಅಡಿಕೆ ಬೆಳೆಗೆ ಜಿಲ್ಲೆಯಲ್ಲಿ ಹಿರೆಕೇರೂರ ಹಾನಗಲ್ಲ ತಾಲೂಕಿನಂತೆ ರಾಣೇಬೆನ್ನೂರು ತಾಲೂಕಿನ ಅಡಿಕೆ ಬೆಳೆಗಾರರಿಗೂ ಕೂಡ ಸರ್ಕಾರದ ಸಬ್ಸಿಡಿ ಯೋಜನೆ ದೊರೆಯುವಂತೆ ಯೋಜನೆ ರೂಪಿಸಬೇಕೆಂದರಲ್ಲದೆ ಮಾಕನೂರಿನ ಹತ್ತಿರ ದಾವಣಗೆರಿಗೆ ಕುಡಿಯುವ ನೀರಿನ 24ಘಿ7 ಯೋಜನೆಗೆ ತುಂಗಭದ್ರಾ ನದಿಗೆ ಬ್ರಿಡ್ಜ್ ಕಂ ಬಂದಾರ ನಿರ್ಮಿಸಿದ್ದು ಈ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ತುರ್ತು ಪರಿಹಾರ ಕೊಡಬೇಕು ಮತ್ತು ಬ್ರಿಡ್ಜ್ನಿಂದ ರೈತರ ಜಮೀನುಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮ ಜರುಗಿಸಬೇಕೆಂದು ಸಚಿವರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಚಿವರ ಗಮನ ಸೆಳೆದು ಮಾತನಾಡಿದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ತುಂಗಭದ್ರ ನದಿತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಈಗಿರುವ ಮರಳು ಗುತ್ತಿಗೆದಾರರಿಂದ ಎತೇಚ್ಚವಾಗಿ ನಡೆದಿದ್ದು ಹಗಲು-ರಾತ್ರಿ ಎನ್ನದೆ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಮರಳು ಗಣಿಗಾರಿಕೆ ಮಾಡಿದ್ದು ಇಡೀ ರಾಜ್ಯದಲ್ಲಿಯೇ ಅಕ್ರಮ ಮರಳು ಗಣಿಗಾರಿಕೆಗೆ ರಾಣೇಬೆನ್ನೂರು ತಾಲೂಕು ಪ್ರಸಿದ್ದಿಯಾಗಿರುವುದು ತಮ್ಮಲ್ಲರಿಗೂ ಗೊತ್ತಿರುವ ವಿಚಾರ ಈ ಹಿಂದೆ ಸರ್ಕಾರಕ್ಕೆ ಸಾಕಷ್ಟು ನಷ್ಟ ಮಾಡಿದ್ದರೂ ಕೂಡ ಮತ್ತೆ ಒಂದು ವರ್ಷದ ಅವಧಿಗೆ ನಮ್ಮನ್ನೇ ಮುಂದುವರಿಸಿ ಅವಧಿ ವಿಸ್ತರಿಸಿ ಎಂದು ಸಕರ್ಾರಕ್ಕೆ ದುಂಬಾಲು ಬಿದ್ದಿರುವ ಇವರ ಮೇಲೆ ಸೂಕ್ತ ತನಿಖೆ ನಡೆಸಿ ಬಾಕಿ ಹಣ ವಸೂಲಿ ಮಾಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಬೇಕಲ್ಲದೆ ಈಗಿರುವ ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ನಲ್ಲಿ ಇಡಬೇಕೆಂದು ಒತ್ತಾಯಿಸಿದರಲ್ಲದೆ ರೈತರ ಫಲವತ್ತಾದ ಕೃಷಿ ಭೂಮಿಯಲ್ಲಿ ಎಗ್ಗಿಲ್ಲದೆ ಅಕ್ರಮ ಮಣ್ಣು ಮಾರಾಟ ದಂದೆ ಎಗ್ಗಿಲ್ಲದೆ ನಡೆಯುತ್ತಿದ್ದು ಆಗಿನ ಮುಂಬಯಿ ಸಕರ್ಾರ ಎಸ್.ಸಿ/ ಎಸ್.ಟಿ. ಜನರು ಬದುಕು ಕಟ್ಟಿಕೊಳ್ಳಲು ಇನಾಮಬುಲೇಶನ್ ಆ್ಯಕ್ಟ 1888 ರ ಪ್ರಕಾರ ನೀಡಿದ್ದ ಇನಾಮ್ (ಚಾಕ್ರಿ) ಜಮೀನುಗಳಲ್ಲಿನ ಮಣ್ಣನ್ನು ಇಟ್ಟಿಗೆ ಬಟ್ಟಿಯವರು ರೈತರಿಗೆ ಹಣದಾಸೆ ತೋರಿಸಿ ಫಲವತ್ತಾದ ಮಣ್ಣನ್ನು ಕೊಳ್ಳೆಹೊಡೆಯುತ್ತಿದ್ದು ಈ ಬಗ್ಗೆ ತುರ್ತು ಕ್ರಮ ಜರುಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆಯವರಿಗೆ ಹಾಗೂ ಆರ್.ಟಿ.ಓ ಇಲಾಖೆಯವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಎಸ್.ಸಿ/ ಎಸ್.ಟಿ. ಹಿಂದುಳಿದ ಪ್ರಜ್ಞಾವಂತ ರೈತರ ಪರವಾಗಿ ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಾವು ಹೇಳಿರುವ ಈ ಸಮಸ್ಯೆ ಬಗ್ಗೆ ತುರ್ತು ಕ್ರಮ ಜರುಗಿಸುತ್ತೇನೆ ಯಾವುದೇ ಪರಿಸ್ಥಿತಿಯಲ್ಲಿ ರೈತರ ಭೂಮಿಯ ಮಣ್ಣನ್ನು ಕೊಳ್ಳೆಹೊಡೆಯಲು ಬಿಡುವುದಿಲ್ಲ ಹಾಗೂ ಈ ಮರಳಿನ ಗುತ್ತಿಗೆದಾರರನ್ನು ಮತ್ತೊಂದು ವರ್ಷ ಮುಂದುವರಿಸಲು ಸಾಧ್ಯವಿಲ್ಲ ಅವರು ಈಗಾಗಲೇ ನಮಗೆ ಒಂದು ವರ್ಷ ಮುಂದುವರಿಸುವಂತೆ ಮನವಿ ಮಾಡಿದ್ದು ಸಂಪೂರ್ಣವಾಗಿ ತಿರಸ್ಕರಿಸಿದ್ದೇನೆ ಎಂದರು.
ರೈತ ಮುಖಂಡರಾದ ಹನುಮಂತಪ್ಪ ಹೊಟ್ಟಿಮಲ್ಲಪ್ಪನವರ, ಹರಿಹರಗೌಡ ಪಾಟೀಲ, ಬಸವರಾಜ ಕೊಂಗಿಯವರ, ನಾಗರಾಜ ಅಂಬ್ಲಿ, ಸುರೇಶ ಮಲ್ಲಾಪುರ, ಭೀಮಪ್ಪ ಪೂಜಾರ, ನಾಗರಾಜ ಹಳ್ಳೂರ, ಭೀಮಪ್ಪ ಹುಲಗನಹಳ್ಳಿ, ಈರಪ್ಪ ನಂದಿಗಾವಿ ಮುಂತಾದವರು ಹಾಜರಿದ್ದರು