ರಾಣೆಬೆನ್ನೂರ

ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಪ್ರಾರಂಭಿಸಬೇಕೆಂದು ಮನವಿ

ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮೂಲಭೂತ ಸೌಲಭ್ಯ ಪ್ರಾರಂಭಿಸಬೇಕೆಂದು ಮನವಿ

ರಾಣಿಬೆನ್ನೂರ 04:  ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ (ಸಿ,ಬಿ,ಜೆಡ್) ವಿಷಯಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ, ನಗರದ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರಾಂಶುಪಾಲ ಎಸ್‌.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. 

ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಹಾವೇರಿ ಜಿಲ್ಲೆಯ ವಿವಿಧ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ  ಈಗಾಗಲೇ ಗ್ರಾಮೀಣ ಪ್ರದೇಶದಿಂದ ಬಡ ಮತ್ತು ಮಧ್ಯಮ ವರ್ಗದ ಸಾವಿರಾರು ವಿದ್ಯಾರ್ಥಿಗಳು ವಿವಿಧ ಕೋರ್ಸಗಳಲ್ಲಿ ಅಭ್ಯಾಸ ಮಾಡುತ್ತಿದ್ದು, ಆದರೆ ಬಿಎಸ್ಸಿ ಕೋರ್ಸ್‌ ಸೇರಲು ಅವರ ಆಸಕ್ತಿಗನುಗುಣವಾಗಿ  ವಿಷಯಗಳು ಆಯ್ಕೆಗೆ ಲಭ್ಯವಿಲ್ಲದೆ ಇರುವ ಕಾರಣ ಬಹುತೇಕ  ಇಂತಹ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.  

ಸರ್ಕಾರ ಉನ್ನತ ಶಿಕ್ಷಣಕ್ಕಾಗಿ ಬಹಳಷ್ಟು ಕಾಳಿಜಿವಹಿಸಿ ಪ್ರತಿ ವರ್ಷ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿರುವದು ಪ್ರಸಂಶಿನಿಯವಾದ್ರೂ,  ಹಾವೇರಿ ಜಿಲ್ಲೆಯ  ವಿವಿಧ ತಾಲೂಕು ಕೆಂದ್ರಗಳಲ್ಲಿ ಬಿಎಸ್ಸಿ ಕೋರ್ಸಗಳಿಲ್ಲದೆ ವಿದ್ಯಾರ್ಥಿಗಳು ಮತ್ತು ಪೋಷಕರು ಪರತಪಿಸುತ್ತಿದ್ದಾರೆ, ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಶಿಕ್ಷಣ ನೀತಿಯ (ಎಸ್‌.ಇ.ಪಿ) ಅನುಗುಣವಾಗಿ ಪ್ರಸಕ್ತ ವರ್ಷ 2024 ರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ,  ಈ ಬಹುಮುಖ್ಯ ವಿಷಯಗಳಾದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಹಾಗೂ ರಸಾಯನಶಾಸ್ತ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.  

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಗತ್ಯ ಮೂಲಭೂತ ಸೌಕರ್ಯಗಳ ಕೊರತೆ ಜಾಸ್ತಿಯಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಟ್ಟಡಗಳ ಸಂಖ್ಯೆಯನ್ನು ಹಾಗೂ ಖಾಯಂ ಉಪನ್ಯಾಸಕರು, ಅತಿಥಿ ಉಪನ್ಯಾಸಕರು, ಹೈಟೆಕ್ ಗ್ರಂಥಾಲಯ, ಲ್ಯಾಬ್, ಶೌಚಾಲಯ, ಹೆಚ್ಚಿನ ಬಸ್ಸಿನ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಇರುವ ಎಲ್ಲಾ ರೀತಿಯ ಕೋರ್ಸಗಳನ್ನು ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಕೋರ್ಸಗಳನ್ನು ಬಂದ್ ಮಾಡಬಾರದು ಆರೀತಿಯಲ್ಲಿ ಸಂಬಂದಿಸಿದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಗಳ ಎಲ್ಲಾ ಕಾಲೇಜಿನ ಪ್ರಾಂಶುಪಾಲರುಗಳಿಗೆ ಸೂಚಿಸಿವಂತೆ ಹಾಗೂ ಅದಕ್ಕೆ ಸಂಬಂದಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಒಂದು ವೇಳೆ ಯಾವುದೇ ಕೋರ್ಸ್‌ಗಳನ್ನು ಬಂದ್ ಮಾಡಿದೆ ಆದಲಿ ವಿದ್ಯಾರ್ಥಿಗಳು ಕಾಲೇಜ್ ಮುಂದೆ ಬೃಹತ್ ತೆರನಾದ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದರು. 

ಮನವಿಪತ್ರ ಸ್ವೀಕರಿಸಿದ ಪ್ರಾಂಶುಪಾಲ ಎಸ್‌.ಕೆ.ಪಾಟೀಲ್ ಮಾತನಾಡಿ, ಸಿ.ಬಿ.ಜೆಡ್ ಕೋರ್ಸ್‌ ಪ್ರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಆದೇಸ ಬಂದ ಕೂಡಲೇ ಹಾಗೂ ಹೆಚ್ಚುವರಿ ಕಟ್ಟಡ, ಖಾಯಂ ಉಪನ್ಯಾಸಕರು, ಲ್ಯಾಬ್ ಸೇರಿದಂತೆ ಅಗತ್ಯಕ್ಕೆ ತಕ್ಕಂತೆ ಅನುದಾನ ಬಿಡುಗಡೆಗೊಳಿಸಿದರೆ ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಲಾಗುವುದು ಎಂದು ಭರವೆಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.  

ಮುಖಂಡರಾದ ಯಶವಂತ ಎಸ್‌ಕೆ, ನಾಗರಾಜ ಗೌಡ್ರ, ಅರುಣ್ ಹೊನ್ನಪ್ಪಳವರ, ವಿಜಯ್ ಕಾಯಕದ, ಮಾಲತೇಶ್ ಹುಲ್ಲಿ, ದರ್ಶನ್ ಕುಸೂಗೂರ, ಲಕ್ಷ್ಮೀ ಎನ್‌ಕೆ, ಪೂಜಾ ಬಾಗಲದವರ, ರೇಣುಕಾ ಎಸ್‌ಆರ್, ಬಾನು ಮಮತಾಜ್, ನೈಜಾ ಬಾನು, ಹೀನಾ ಎನ್‌ಆರ್, ನೇಹಾಲ್ ಖಾನ್, ಪ್ರವೀಣ್ ಟಿಆರ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ