ಶಿಗ್ಗಾವಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ
ಶಿಗ್ಗಾವಿ 25: ಕೇಂದ್ರ ಸರಕಾರದ ಅವೈಜ್ಞಾನಿಕ ನಿಯಮಗಳಿಂದ ವಂಚಿತವಾಗಿರುವ ಶಿಗ್ಗಾವಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಅವರಿಗೆ ತಾಲೂಕ ವಕ್ತಾರ ಮಂಜುನಾಥ ಮಣ್ಣಣ್ಣವರ್ ಹಾಗೂ ಬಂಕಾಪುರ ಕಾಂಗ್ರೆಸ್ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗಿದ ಜನತಾ ದರ್ಶನ ನಂತರ ಸಚಿವ ಶಿವಾನಂದ ಪಾಟೀಲ್ ಅವರನ್ನು ಭೇಟಿ ಮಾಡಿ ತಾಲೂಕಿನ ಮುಖಂಡರಾದ ಯಾಶೀರಖಾನ್ ಪಠಾಣ ಹಾಗೂ ಸಂಜೀವ ನೀರಲಗಿ ಉಪಸ್ಥಿತಿಯಲ್ಲಿ ಕೇಂದ್ರ ಸರಕಾರದ ನಿಬಂಧನೆಗಳಿಂದ ನಮ್ಮ ತಾಲೂಕು ಬರಪೀಡಿತ ಪಟ್ಟಿಯಿಂದ ಅವಕಾಶ ವಂಚಿತವಾಗಿದ್ದು ವಾಸ್ತವವಾಗಿ ತಾಲೂಕಿನಲ್ಲಿ 75 ಪ್ರತಿಶತ ಮಳೆ ಬಾರದಂತಾಗಿದ್ದು ರೈತರ ಹೆಚ್ಚು ನಷ್ಟ ಅನುಭವಿಸಿದ್ದಾರೆ ರೈತರ ಸ್ಪಂದಿಸುವ ಜವಾಬ್ದಾರಿ ಸರ್ಕಾರದ್ದು ಆಗಿರುವುದರಿಂದ ವಿಶೇಷ ಪ್ರಕರಣ ಅಂತ ಪರಿಗಣಿಸಿ ತಾಲೂಕು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಜೊತೆಗೆ ಅಕ್ರಮ ಸಕ್ರಮ ಪಂಪ ಶೆಟ್ಟುಗಳ ವಿದ್ಯುತ್ ಒದಗಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಪ್ರಮುಖವಾಗಿ ರೈತರಿಗೆ ನಿರಂತರ ವಿದ್ಯುತ್ ಕೊಡುವ ಉದ್ದೇಶ ಹೊಂದಿರುವ ಸರಕಾರ ಸೌರ ವಿದ್ಯುತ್ ಫೀಡರಗಳ ಕಾಮಗಾರಿಯನ್ನು ತಾಲೂಕಿಗೆ ಮೊದಲ ಹಂತವಾಗಿ ನೀಡಬೇಕೆಂದು ಕಂದಾಯ ಸಚಿವರಿಗೆ ಉಸ್ತುವಾರಿ ಸಚಿವರ ಮುಖೇನ ಮನವಿ ಮಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ವಿಧಾನಸಭಾ ಉಪ ಸಭಾಪತಿ ರುದ್ರ್ಪ ಲಮಾಣಿ, ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ, ಸವಣೂರು ತಾಲೂಕ ಬ್ಲಾಕ್ ಅಧ್ಯಕ್ಷ ಎಂಜೆ ಮುಲ್ಲಾ, ಬಂಕಾಪುರ ಶಹರ ಅಧ್ಯಕ್ಷ ಗದಿಗೆಪ್ಪ ಬಳ್ಳಾರಿ ಸೇರಿದಂತೆ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.